ಭಾರತದಲ್ಲಿ ಮೊದಲ UCI 2.2 ಬಜಾಜ್ ಪುಣೆ ಗ್ರ್ಯಾಂಡ್ ಟೂರ್ 2026ಕ್ಕೆ ವೇದಿಕೆ ಸಿದ್ಧ

Upayuktha
0


ಪುಣೆ: ಭಾರತದ ಕ್ರೀಡಾ ಕ್ಷೇತ್ರದಲ್ಲಿ ಐತಿಹಾಸಿಕ ಕ್ಷಣ ರೂಪುಗೊಳ್ಳುತ್ತಿದೆ. ದೇಶವು ತನ್ನ ಮೊದಲ UCI 2.2 ಬಜಾಜ್ ಪುಣೆ ಗ್ರ್ಯಾಂಡ್ ಟೂರ್ 2026 ಪುರುಷರ ಎಲೈಟ್ ರೋಡ್ ಸೈಕ್ಲಿಂಗ್ ರೇಸ್ ಅನ್ನು ಆಯೋಜಿಸಲು ಸಜ್ಜಾಗಿದೆ. 2026ರ ಜನವರಿ 19ರಿಂದ 23ರವರೆಗೆ ಪುಣೆ ಜಿಲ್ಲೆಯಲ್ಲಿ ನಡೆಯಲಿರುವ ಈ ಸ್ಪರ್ಧೆ ನಾಲ್ಕು ಹಂತಗಳ ಬಹು ದಿನಗಳ ಜಾಗತಿಕ ಸವಾಲನ್ನು ಒಳಗೊಂಡಿದೆ.


ಬಜಾಜ್ ಪುಣೆ ಗ್ರ್ಯಾಂಡ್ ಟೂರ್‌ನಲ್ಲಿ ವಿಶ್ವದ ನಾನಾ ಭಾಗಗಳಿಂದ ಬಂದಿರುವ 28 ತಂಡಗಳು ಪಾಲ್ಗೊಳ್ಳಲಿವೆ. ಇದರಲ್ಲಿ ವಿಶ್ವದ ಪ್ರಮುಖ ಸೈಕ್ಲಿಂಗ್ ರಾಷ್ಟ್ರಗಳನ್ನು ಪ್ರತಿನಿಧಿಸುವ ನಾಲ್ಕು ರಾಷ್ಟ್ರೀಯ ತಂಡಗಳೂ ಸೇರಿವೆ. ಭಾರತೀಯ ತಂಡವಾಗಿ ‘ಇಂಡಿಯಾ A’ ಹಾಗೂ ‘ಇಂಡಿಯಾ B’ ಎಂಬ ಎರಡು ರಾಷ್ಟ್ರೀಯ ತಂಡಗಳು ಸ್ಪರ್ಧಿಸಲಿವೆ.


437 ಕಿಮೀ ದೂರವನ್ನು ಒಳಗೊಂಡಿರುವ ಈ ನಾಲ್ಕು ಹಂತಗಳ ರೋಡ್ ರೇಸ್ ಮಹಾರಾಷ್ಟ್ರ ಸರ್ಕಾರದ ಬೆಂಬಲದೊಂದಿಗೆ ನಡೆಯಲಿದೆ. ಈ ಕುರಿತು ಮಾತನಾಡಿದ ಪುಣೆ ಗ್ರ್ಯಾಂಡ್ ಟೂರ್ ಇನ್-ಚಾರ್ಜ್ ಅಧಿಕಾರಿ ಜಿತೇಂದ್ರ ದುಡಿ, “ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ನೆದರ್‌ಲ್ಯಾಂಡ್, ಆಸ್ಟ್ರೇಲಿಯಾ, ಚೀನಾ, ಮಲೇಶಿಯಾ, ಇಂಡೋನೇಷಿಯಾ, ಥೈಲ್ಯಾಂಡ್ ಮುಂತಾದ ಪ್ರಮುಖ ಸೈಕ್ಲಿಂಗ್ ರಾಷ್ಟ್ರಗಳ ತಂಡಗಳು ಈ ರೇಸ್‌ನಲ್ಲಿ ಪಾಲ್ಗೊಳ್ಳಲು ಬಲವಾದ ಆಸಕ್ತಿ ತೋರಿವೆ. ಭಾರತದಲ್ಲಿ ಸೈಕ್ಲಿಂಗ್ ಕ್ರೀಡೆಯ ಬೆಳವಣಿಗೆಗೆ ಯೂನಿಯನ್ ಸೈಕ್ಲಿಸ್ಟ್ ಇಂಟರ್ನ್ಯಾಷನಲ್ (UCI) ವಿಶೇಷವಾಗಿ ಉತ್ತೇಜನ ನೀಡುತ್ತಿದೆ ಎಂದರು.


ಬಜಾಜ್ ಪುಣೆ ಗ್ರ್ಯಾಂಡ್ ಟೂರ್ 2026 ನಾಲ್ಕು ರೋಚಕ ಹಂತಗಳನ್ನು ಒಳಗೊಂಡಿದೆ:


ಹಂತ 1: ಮುಲ್ಶಿ–ಮವಾಲ್ ಮೈಲ್ಸ್ — 91.8 ಕಿಮೀ, 956 ಮೀ ಏರಿಕೆಯೊಂದಿಗೆ

ಹಂತ 2: ಮರಾಠಾ ಹೆರಿಟೇಜ್ ಸರ್ಕ್ಯೂಟ್ — 109.15 ಕಿಮೀ, 1466 ಮೀ ಏರಿಕೆ

ಹಂತ 3: ವೆಸ್ಟರ್ನ್ ಘಾಟ್ಸ್ ಗೇಟ್‌ವೇ — 137.07 ಕಿಮೀ, 820 ಮೀ ಏರಿಕೆ

ಹಂತ 4: ಪುಣೆ ಪ್ರೈಡ್ ಲೂಪ್ — 99.15 ಕಿಮೀ, 560 ಮೀ ಏರಿಕೆ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top