ಸಂಸ್ಕೃತಜ್ಞರು ಬೃಹದ್ಗೀತೋತ್ಸವದಲ್ಲಿ ಭಾಗವಹಿಸುವಂತೆ ಶ್ರೀಗಳ ಕರೆ

Upayuktha
0


ಉಡುಪಿ: ಈ ಬಾರಿಯ ಸಂಸ್ಕೃತೋತ್ಸವ ವೈಶಿಷ್ಟ್ಯಪೂರ್ಣವಾಗಿದೆ. ಶ್ರೀಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಮಧ್ಯೆ ನಮ್ಮ ಸಂಸ್ಕೃತ ಮಹಾವಿದ್ಯಾಲಯದ ವಾರ್ಷಿಕೋತ್ಸವ ಮತ್ತು ಸಂಸ್ಕೃತೋತ್ಸವವೂ ನಡೆಯುತ್ತಿರುವುದು ಗೀತೋತ್ಸವಕ್ಕೂ ಶೋಭೆಯನ್ನು ತಂದಿದೆ. ಶ್ರೀಕೃಷ್ಣಮಠದಲ್ಲಿ ನಿತ್ಯವೂ ಸಂಸ್ಕೃತೋತ್ಸವ ನಡೆಯುತ್ತಿದೆ. ಯಾಕೆಂದರೆ ನಿತ್ಯವೂ ಗೀತೋತ್ಸವವೂ ನಡೆಯುತ್ತಿದೆ. ಸಂಸ್ಕೃತಜ್ಞರು ಉಡುಪಿಯ ಸಂಸ್ಕೃತ-ಶಾಸ್ತ್ರಶ್ರೀಮಂತಿಕೆಯ ಪರಿಚಯವನ್ನು ಮಾಡಿಕೊಡಬೇಕು ಎಂದು ಕರೆ ನೀಡಿದರು.


ಕಿರಿಯ ಪಟ್ಟದ ಶ್ರೀ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡುತ್ತಾ ಸಂಸ್ಕೃತವನ್ನರಿಯದೇ ಪರಿಪೂರ್ಣ ಭಾರತೀಯನಾಗಲು ಸಾಧ್ಯವಿಲ್ಲ. ಶತಮಾನಗಳಿಂದ ಪರಿಪೂರ್ಣ ಭಾರತೀಯತೆಯ ಸಂಸ್ಕೃತಜ್ಞರನ್ನು ನೀಡೀದ ಕೀರ್ತಿ ಉಡುಪಿ ಸಂಸ್ಕೃತ ಕಾಲೇಜಿನದ್ದು, ಇಂತಹ ಕಾಲೇಜು ಮತ್ತೊಂದು ಶತಮಾನವನ್ನು ಕಾಣಲಿ ಎಂದು ಆಶೀರ್ವಚಿಸಿದರು.



ಸಂಸ್ಕೃತೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗುರುವಾಯೂರಿನ ಡಾ. ಕೆ.ವಿ. ವಾಸುದೇವನ್ ಇವರು ಸಂಸ್ಕೃತ ಭಾಷೆಯು ಬಹುಕಾಲದಿಂದಲೂ ಭಾರತೀಯ ಇತರ ಭಾಷೆಗಳ ತಾಯಿಯಾಗಿದೆ. ದ್ರಾವಿಡ ಭಾಷೆಗಳ ಸಂಸ್ಕೃತಮೂಲದ್ದೇ ಆಗಿವೆ. ಅನೇಕ ಉದಾಹರಣೆಗಳನ್ನು ತೋರಿಸುತ್ತಾ ದ್ರಾವಿಡ ಶಬ್ದವೇ ಸಂಸ್ಕೃತಮೂಲದ್ದು ಎಂದು ಅಭಿಪ್ರಾಯ ಪಟ್ಟರು.


ಸ್ವಸ್ತಿವಾಚನಗೈದ ಶ್ರೀಮತೀ ಜಯಶ್ರೀ ಜಗದೀಶ್ ಅವರು ಅನುಭವವನ್ನು ಹಂಚಿಕೊಳ್ಳುತ್ತಾ ಉಡುಪಿ ಸಂಸ್ಕೃತ ಕಾಲೇಜಿನಲ್ಲಿದ್ದ ಉತ್ತಮ ಅಧ್ಯಾಪಕರ ಪರಂಪರೆ ಮುಂದುವರೆದಿರುವುದು ಸಂತೋಷದಾಯಕವಾಗಿದೆ ಎಂದರು.


ಮೊದಲಿಗೆ ವಿದ್ಯಾರ್ಥಿಗಳಾದ ಶ್ರೀಕೃಷ್ಣ, ಪ್ರಹ್ಲಾದ ಮೊದಲಾದವರು ವೇದಘೋಷಗೈದರು. ಎಸ್.ಎಮ್.ಎಸ್.ಪಿ ಸಭೆಯ ಕಾರ್ಯದರ್ಶಿ ವಿದ್ವಾನ್ ಗೋಪಾಲಕೃಷ್ಣ ಜೋಯಿಸರು ಪ್ರಸ್ತಾವನೆಗೈದು ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಯುತ ಚಂದ್ರಶೇಖರ ಆಚಾರ್ಯ ಉಪಸ್ಥಿತರಿದ್ದರು. ವಿದ್ವಾನ್ ಅಜಿತ ಆಚಾರ್ಯ ಧನ್ಯವಾದ ಸಮರ್ಪಿಸಿದರು. ಡಾ.ರಾಧಾಕೃಷ್ಣ ಬೆಂಗ್ರೋಡಿ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top