ಮಳೆ ಮಾಪನ ಯಂತ್ರ ದುರಸ್ತಿಗೆ ಆಗ್ರಹ
ಕೊಪ್ಪ: ಅಸಗೋಡು ಗ್ರಾಮ ಪಂಚಾಯ್ತಿಯ ಮಟ್ಟದಲ್ಲಿ ಮಳೆ ಮಾಪನ ಅಳವಡಿಸಲಾಗಿದ್ದು, 2023-24ನೇ ಸಾಲಿನಿಂದಲೂ (ಎರಡೂವರೆ ವರ್ಷಗಳಿಂದ) ಈ ಮಾಪನವು ಹಾಳಾಗಿದ್ದು, ಅನೇಕ ಬಾರಿ ಗ್ರಾಮ ಪಂಚಾಯತಿ ಮತ್ತು ಇಲಾಖೆಗಳ ಗಮನಕ್ಕೆ ತಂದಿದ್ದರೂ, ಇದುವರೆಗೆ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿರುವುದಿಲ್ಲ.
ಅಸಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಳೆ ಮಾಪನ ಯಂತ್ರ ಕೆಟ್ಟು ಹೋಗಿದ್ದರೂ ದುರಸ್ಥಿ ಮಾಡದೆ, ಕಳೆದ ಎರಡು ವರ್ಷಗಳಿಂದ ರೈತರಿಗೆ ಹವಾಮಾನ ಆಧಾರಿತ ವಿಮಾ ಪರಿಹಾರವನ್ನು ಅವೈಜ್ಞಾನಿಕ ಮಾನದಂಡ ಬಳಸಿ ಘೋಷಣೆ ಮಾಡಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಪ್ರತಿವರ್ಷವೂ ವಿಮಾ ಮಾನದಂಡದ ಟರ್ಮ್ ಶೀಟ್‌ನಲ್ಲಿ ಉಲ್ಲೇಖಿಸಿದ ಗರಿಷ್ಠ ಮಿತಿಗಿಂತಲೂ ಹೆಚ್ಚು ಮಳೆಯಾಗಿದ್ದು, ಅಸಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ರೈತರುಗಳು ತಮ್ಮ ನಿವಾಸಗಳಲ್ಲಿ ಅಳೆದಿರುವ ಮಳೆ ಮಾಪನದಿಂದ ದೃಢಪಟ್ಟಿರುತ್ತದೆ.
ಮಳೆಮಾಪನವು ದುರಸ್ಥಿಯಾಗದಿರುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಮತ್ತು ದುರಸ್ತಿ ಕ್ರಮ ಕೈಗೊಳ್ಳುವಂತೆ ಕೋರಿದ್ದರೂ ಸಹ ಕಂದಾಯ ಆಥವಾ ಸಂಬಂಧಿಸಿದ ಇತರ ಇಲಾಖೆಗಳ ಅಧಿಕಾರಿಗಳು ಪರಿಶೀಲನೆಗೂ ಬಾರದೇ, ಸೂಕ್ತ ದುರಸ್ತಿ ಕ್ರಮವನ್ನೂ ಕೈಗೊಳ್ಳದೇ ಇರುವುದು ಇಲಾಖೆ ಅಧಿಕಾರಿಗಳ ಬೇಜವಬ್ದಾರಿಯನ್ನು ತೋರಿಸುತ್ತದೆ.
ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ವಿಮಾ ಪರಿಹಾರಕ್ಕೆ, ಅತ್ಯಂತ ಕಡಿಮೆ ಮಳೆ ಬಿದ್ದಿರುವ ಸಂಬಂಧವಿಲ್ಲದ ಮತ್ತು ಹತ್ತಿರದ ಗ್ರಾಮಗಳ ದಾಖಲೆಗಳನ್ನು ಪರಿಗಣಿಸದೇ, ಇನ್ಯಾವುದೋ ಗ್ರಾಮದ ಕಡಿಮೆ ಮಳೆ ದಾಖಲೆ ಮಾಹಿತಿಯನ್ನು ಪಡೆದು, ಅದನ್ನು ಅತ್ಯಂತ ಹೆಚ್ಚು ಮಳೆ ಬಿದ್ದ ಅಸಗೋಡು ಗ್ರಾಮಕ್ಕೆ ಸಂಯೋಜಿಸಿ, ಅವೈಜ್ಞಾನಿಕವಾಗಿ ಅತ್ಯಂತ ಕಡಿಮೆ ಮೊತ್ತದ ಬೆಳೆ ವಿಮೆ ಪರಿಹಾರಗಳನ್ನು ಘೋಷಿಸಲಾಗುತ್ತಿದೆ. ಇದರಿಂದ ಇಲ್ಲಿನ ರೈತ ಸಮೂಹಕ್ಕೆ ಅತ್ಯಂತ ಘೋರ ಅನ್ಯಾಯವಾಗಿದ್ದು ತಕ್ಷಣವೇ ಮಳೆ ಪ್ರಮಾಣದ ವರದಿಯನ್ನು ಸ್ಥಳೀಯವಾಗಿ ಮಳೆ ಮಾಪನ ಮಾಡಿರುವ ರೈತರುಗಳಿಂದ ಪಡೆದು ಅದರಂತೆ ವರದಿಯನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ





