ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸುನಾದ ಸಂಗೀತ ಕಲಾಶಾಲೆಯನ್ನು ಉದ್ಘಾಟಿಸಲಾಯಿತು.
ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಉದ್ಘಾಟಿಸಿ, ನಮ್ಮ ಸಂಸ್ಥೆಯಲ್ಲಿ ಸಂಗೀತ, ಮೃದಂಗ ತರಗತಿ ಅತೀ ಅಗತ್ಯವಾಗಿತ್ತು. ಮಕ್ಕಳಿಗೆ ಅವಶ್ಯವಾಗಿರುವ ಈ ತರಗತಿಗಳಿಗೆ ನಮ್ಮ ಸಂಸ್ಥೆಯ ಬೆಂಬಲವಿದೆ ಎಂದರು.
ಕೋಶಾಧಿಕಾರಿ ಉದಯಶಂಕರ್ ನೀರ್ಪಾಜೆ ಅವರು ಮಾತನಾಡಿ, ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಬೇಕು. ಈ ನಿಟ್ಟಿನಲ್ಲಿ ಸುನಾದ ಸಂಗೀತ ಕಲಾಶಾಲೆ ಸೂಕ್ತ ವ್ಯವಸ್ಥೆಯನ್ನು ಮಾಡಿದೆ. ಮಕ್ಕಳಿಗೆ ಒದಗಿದ ವಿಪುಲ ಅವಕಾಶವನ್ನು ಸದುಪಯೋಗಪಡಿಸಬೇಕು ಮತ್ತು ಈ ನಿಟ್ಟಿನಲ್ಲಿ ಸಂಸ್ಥೆಯು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲ ಸಂದೀಪ್ ಆಚಾರ್ಯ ಅವರು ಮಾತನಾಡಿ, ಸೂಕ್ತ ಕಾಲಘಟ್ಟದಲ್ಲಿ ಈ ಕಲಾ ಶಾಲೆ ಉದ್ಘಾಟನೆಗೊಂಡಿದೆ. ಸಂಸ್ಥೆಯ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ ಎಂದು ಹೇಳಿದರು.
ಮಂಗಳೂರು ಹವ್ಯಕ ಸಭಾ ಅಧ್ಯಕ್ಷೆ ಗೀತಾದೇವಿ ಸಿ. ಅವರು ಶುಭ ಹಾರೈಸಿದರು. ವಿದುಷಿ ವಾಣಿಪ್ರಸಾದ್, ಶಿಕ್ಷಕ ವೆಂಕಟ ಯಶಸ್ವಿ ಕಬೆಕ್ಕೋಡು ಉಪಸ್ಥಿತರಿದ್ದರು. ಕಬೆಕ್ಕೋಡು ಗೋಪಾಲಕೃಷ್ಣ ಭಟ್ ಪ್ರಸ್ತಾಪಿಸಿದರು. ಕಬೆಕ್ಕೋಡು ಬಾಲಸುಬ್ರಹ್ಮಣ್ಯ ಭಟ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ ಶಾಸ್ತ್ರೀಯ ಸಂಗೀತ, ಮೃದಂಗ ಕಲಿಯುವ ಆಸಕ್ತಿ ಇರುವವರು 8590495710 ಅಥವಾ 6282614334 ಮೂಲಕ ಸಂಪರ್ಕಿಸಬೇಕಾಗಿ ಶಿಕ್ಷಕ ವೆಂಕಟಯಶಸ್ವಿ ಕಬೆಕ್ಕೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


