ಲಯನ್ಸ್ ಪುತ್ತೂರು: ಕುಮಾರ್ ಪೆರ್ನಾಜೆ, ಸೌಮ್ಯ ದಂಪತಿಗೆ ಗ್ರಾಮೀಣ ಸಾಧಕ ಪುರಸ್ಕಾರ

Upayuktha
0


ಪೆರ್ನಾಜೆ: ಪ್ರಗತಿಪರ ಜೇನು ಕೃಷಿಕ, ಬರಹಗಾರ ಕುಮಾರ್ ಪೆರ್ನಾಜೆ ದಂಪತಿಗಳನ್ನು ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ಸ್ಥಾಪಕ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಕುಮಾರ್ ಪೆರ್ನಾಜೆ, ಸೌಮ್ಯ ಅವರನ್ನು ಶಾಲು ಪೇಟ ಹಾರ ಹಣ್ಣು ಹಂಪಲುಗಳನ್ನು ನೀಡಿ ಗೌರವಿಸಿದರು.


ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಕಾವಿನ ಹಿರಿಯರಾದ ಮೋಹನ್ ಶಣೈ ಬಂಡಸಾಲೆ ಮಂಜಣ್ಣ ಎಂದೇ ಖ್ಯಾತರಾದ ಮಾಲೀಕರು ದಿನಸಿ ಅಂಗಡಿ ಮಾಲೀಕರು ಕೆಎಸ್ಆರ್ಟಿಸಿ ನಿವೃತ್ತ ಟಿಸಿಯಾಗಿ ಮಾಜಿ ಉದ್ಯೋಗಿ ದಿನೇಶ್ ಗೌಡ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಲಾಯಿತು. ಪ್ರಾಂತ್ಯ ಅಧ್ಯಕ್ಷ ಎಂ ಆನಂದ ರೈ ಮತ್ತು ಪತ್ನಿ, ಲಯನ್ಸ್ ವಲಯ ಅಧ್ಯಕ್ಷ ಜಗನ್ನಾಥ ರೈ ಗುತ್ತು ವಲಯ ರಾಯಭಾರಿ ರಮೇಶ್ ರೈ ಸಾಂತ್ಯ, ಸಮಾರಂಭದ ಅಧ್ಯಕ್ಷರು ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಕೆ ಇಬ್ರಾಹಿಂ ಹಾಜಿ, ಕ್ಲಬ್ ಕೋಶಾಧಿಕಾರಿ ರಮೇಶ್ ಆಳ್ವ ಆಲೆಪ್ಪಾಡಿ ಗುತ್ತು, ಕ್ಲಬ್‌ನ ಕಾರ್ಯದರ್ಶಿ ದೇವಣ್ಣ ರೈ ಮುದರ್ಪಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿಜಯ ಗ್ರಾಮೀಣ ಅಭಿವೃದ್ಧಿ ಮಂಡಳಿ ಪ್ರತಿಷ್ಠಾನ ಮಂಗಳೂರು ಘಟಕದ ಆಡಳಿತ ಮಂಡಳಿ ನಿರ್ದೇಶಕ ಜಯಪ್ರಕಾಶ್ ರೈ, ವಿಜಯ ಗ್ರಾಮೀಣ ಅಭಿವೃದ್ಧಿ ಮಂಡಳಿ ಕಾವು ಈಶ್ವರಮಂಗಲ ಘಟಕದ ಅಧ್ಯಕ್ಷ ಪಾವನ ರಾಮ ರವರು ಸಹಕರಿಸಿದರು. ಸುರೇಖಾ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಈ ಒಂದೇ ವರ್ಷದಲ್ಲಿ ನಾಲ್ಕು ಪ್ರಶಸ್ತಿ ಸನ್ಮಾನಗಳನ್ನು ಸ್ವೀಕರಿಸಿದ ದಂಪತಿಗಳು ಕಲಾಕುಂಜ ದಾವಣಗೆರೆ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ ಸಂಸ್ಕೃತಿ ಸಾಧಕ ಸಿರಿ ರಾಷ್ಟ್ರಪ್ರಶಸ್ತಿ ನೀಡಿದರು. ಆರ್ ಪಿ ಕಲಾ ಸೇವಾ ಟ್ರಸ್ಟ್ ರಿ ಪಾಂಬರ್ ಪುತ್ತೂರಲ್ಲಿ ಅಂತರ್ ರಾಜ್ಯಮಟ್ಟದ ಕೃಷಿ ರತ್ನ ಪ್ರಶಸ್ತಿ ನೀಡಿದರು.



Post a Comment

0 Comments
Post a Comment (0)
To Top