"ಕೇಶವ ಕಲ್ಪ"ದಲ್ಲಿ ಮಕ್ಕಳ ಯಶಸ್ವಿ ನೃತ್ಯ ಪ್ರದರ್ಶನ

Upayuktha
0


ಬೆಂಗಳೂರು: ನಾಟ್ಯೇಶ್ವರ ನೃತ್ಯ ಶಾಲೆಯ ಗುರುಗಳಾದ ಕಲಾಯೋಗಿ ಶ್ರೀ ಕೆ.ಪಿ. ಸತೀಶಬಾಬು ಹಾಗೂ ಶ್ರೀಮತಿ ವಾಣಿ ಸತೀಶಬಾಬು ಅವರು  "ನಾಟ್ಯೇಶ್ವರ ನೃತ್ಯ-ಸಂಗೀತ ಉತ್ಸವ-2025" ಎಂಬ ಎರಡು ದಿನಗಳ ಕಾರ್ಯಕ್ರಮವನ್ನು ಬೆಂಗಳೂರಿನ ಮಲ್ಲೇಶ್ವರದ ಲಿಂಕ್ ರಸ್ತೆಯಲ್ಲಿರುವ "ಕೇಶವ ಕಲ್ಪ" ಸಭಾಂಗಣದಲ್ಲಿ ಆಯೋಜಿಸಿದ್ದರು.


ಮೊದಲನೆಯ ದಿನ ಸುರಭಿ ಗಾನ ಮಂಡಲಿ ನಿರ್ದೇಶಕರಾದ ವಿದುಷಿ ಶ್ರೀಮತಿ ವಿಮಲಾ ಸೊರಬ್ ವಿದ್ಯಾರ್ಥಿಗಳಿಂದ  ಸಂಗೀತದೋಂದಿಗೆ ಪ್ರಾರಂಭವಾಯಿತು. ಎರಡನೆ ತಂಡ ರಾಗಿಣಿ ಸಂಗೀತ ನೃತ್ಯಾಲಯದ ಗುರು ವಿದುಷಿ ಶ್ರೀರಂಜಿನಿ ಉಮೇಶ್ ವಿದ್ಯಾರ್ಥಿ ವೃಂದದವರು ಭರತನಾಟ್ಯ ಕಾರ್ಯಕ್ರಮ ನೀಡಿದರು.


ಕೊನೆಯ ತಂಡ ಸಪ್ತಸ್ವರ ನೃತ್ಯಾಲಯ ಕಲ್ಚರಲ್ ಆರ್ಟ್ ಸೆಂಟರ್ ಗುರು ವಿದುಷಿ ಮಂಜುಳ ಜಗದೀಶ್ ವಿದ್ಯಾರ್ಥಿ ವೃಂದದವರು ಅದ್ಭುತ  ಭರತನಾಟ್ಯ ಪ್ರಸ್ತುತಪಡಿಸಿದರು. ಅತಿಥಿಗಳಾಗಿ ರೋಟರಿ ಸಂಸ್ಥೆಯ ಇಂದಿರಾನಗರ ವತಿಯಿಂದ ಸೌಮ್ಯ ಶ್ರೀಕಾಂತ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು. 


ಎರಡನೆಯ ದಿನದ ಕಾರ್ಯಕ್ರಮವು ಜಪಮಾಲಾಸರ ಸ್ಥೂಲ್ ಆಫ್ ಡ್ಯಾನ್ಸ್ ಅಂಡ್ ಮ್ಯೂಸಿಕ್  ಗುರು ಲಲಿಥಾ ವಿದ್ಯಾರ್ಥಿ ವೃಂದದವರ ಸಂಗೀತದೊಂದಿಗೆ ಆರಂಭವಾಯಿತು. ಎರಡನೆಯ ತಂಡ ನೃತ್ಯತ್ವಿಶಿ ಸ್ಕೂಲ್ ಆಫ್ ಡ್ಯಾನ್ಸ್  ಗುರು ವಿದುಷಿ ಅನುರಾಧಾ ಹೆಗ್ಡೆ ಹಾಗೂ ವಿದ್ಯಾರ್ಥಿ ವೃಂದದವರಿಂದ  ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಿಯಾಯ್ತು. ಕೊನೆಯ ತಂಡವಾಗಿ ನಾಟ್ಯೇಶ್ವರ ನೃತ್ಯ ಶಾಲೆಯ  ಕಿರಿಯ ಹಾಗೂ ಹಿರಿಯ ವಿದ್ಯಾರ್ಥಿನಿಯರಿಂದ  ಅದ್ಭುತ ಭರತನಾಟ್ಯ ಮೂಡಿಬಂತು. ಅತಿಥಿಯಾಗಿ ಭಾವ ನೂಪುರ ಡ್ಯಾನ್ಸ್  ಅಕಾಡೆಮಿಯ ಕಲಾತ್ಮಕ ನಿರ್ದೇಶಕರಾದ ವಿದುಷಿ ಮೀನಾಕ್ಷಿ ಪ್ರಸಾದ್  ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top