ಕಾಕೋಳು ಸರ್ಕಾರೀ ಶಾಲಾ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ

Upayuktha
0
ಪಾಂಚಜನ್ಯ ಪ್ರತಿಷ್ಠಾನದಿಂದ ಆಯೋಜನೆ




ಬೆಂಗಳೂರು: ಪಾಂಚಜನ್ಯ ಪ್ರತಿಷ್ಠಾನ ವತಿಯಿಂದ ರಾಜಾನುಕುಂಟೆ ಸಮೀಪ, ದೊಡ್ಡಬಳ್ಳಾಪುರ ರಸ್ತೆ , ಕಾಕೋಳು ಸರ್ಕಾರೀ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಆವರಣದ ಬಯಲು ರಂಗಮಂದಿರದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಮತ್ತು ಸಂವಾದ ನಡೆಯಿತು .


ಅಂಕಣಕಾರ್ತಿ ಶ್ರೀಮತಿ ರೂಪಾ ಗುರುರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದಲ್ಲಿ ಅರ್ಥಪೂರ್ಣ ಸಕಾರಾತ್ಮಕ ಬದಲಾವಣೆಯನ್ನು ತರಲು ನಿರಂತರವಾಗಿ ಶ್ರಮಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನದ ಕಾರ್ಯ ಸ್ಪೂರ್ತಿದಾಯಕವಾಗಿದೆ - ವಿಶೇಷವಾಗಿ ಗ್ರಾಮೀಣ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ, ಸಮರ್ಪಿತ ಶಿಕ್ಷಕರು ಯುವ ಮನಸ್ಸುಗಳನ್ನು ರೂಪಿಸಲು ತೆಗೆದುಕೊಳ್ಳುತ್ತಿರುವ ಪ್ರಾಮಾಣಿಕ ಪ್ರಯತ್ನಗಳು ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು   .


ಶಾಲಾ ಮುಖ್ಯ ಶಿಕ್ಷಕಿ ಅನಿತಾ ಲಕ್ಷ್ಮಿ , ಪಾಂಚಜನ್ಯ ಪ್ರತಿಷ್ಠಾನ ವಿಶ್ವಸ್ಥರಾದ ಮುರಳಿ ಕಾಕೋಳು , ಸ್ಥಳೀಯ ಶಾಲಾ ಉಸ್ತುವಾರಿ , ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿಜೇತ ಮೊದಲಾದವರು ಉಪಸ್ಥಿತರಿದ್ದರು .


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top