ಭಾರತದಲ್ಲೇ ವಿವೇಕಾನಂದ ಪದವಿ ಕಾಲೇಜಿಗೆ Cloud Campaign – Cohort 1 ನಲ್ಲಿನಂ.1 ಸ್ಥಾನ : ಗೂಗಲ್‌ನಿಂದ ಅಗ್ರಮಾನ್ಯ ಮಾನ್ಯತೆ

Upayuktha
0


ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜು ಮಂಗಳೂರು ವಿಶ್ವವಿದ್ಯಾಲಯದಅಡಿಯಲ್ಲಿ ಬರುವ ಏಕೈಕ ಪದವಿ ಕಾಲೇಜಾಗಿ, ಉoogಟe Google Developer Group On Campus (GDGoC) ಆಯೋಜಿಸಿದ್ದ Cloud Campaign – Cohort 1 ನಲ್ಲಿ ಭಾರತದ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ.


ಈ ಸಾಧನೆ ಮೂಲಕ, ವಿವೇಕಾನಂದ ಕಾಲೇಜು ಮೊದಲ ಬಾರಿ ರಾಷ್ಟ್ರೀಯ ಮಟ್ಟದಲ್ಲಿ ನಂ.1 ಸ್ಥಾನ ಪಡೆದ GDGoC ಅಧ್ಯಾಯವುಳ್ಳ ಮಂಗಳೂರಿನ ವಿಶ್ವವಿದ್ಯಾಲಯದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


GDGoC ಎಂದರೆ ಏನು?

Google Developer Group On Campus (GDGoC) ಎಂಬುದು Google Developersನ ಆಶ್ರಯದಲ್ಲಿ ನಡೆಯುವ ಜಾಗತಿಕ ವಿದ್ಯಾರ್ಥಿ ವೇದಿಕೆ ಆಗಿದ್ದು, ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಕಲಿಕೆ, ಸಹಕಾರ ಮತ್ತು ಹೊಸ ಯೋಜನೆಗಳ ನಿರ್ಮಾಣಕ್ಕೆ ಅವಕಾಶ ನೀಡುತ್ತದೆ.


Cloud Campaign ಇದರ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದುಆಗಿದ್ದು, ವಿದ್ಯಾರ್ಥಿಗಳು Google Cloud Technology ಕುರಿತು ತರಬೇತಿ ಪಡೆದು, ಪ್ರಾಜೆಕ್ಟುಗಳ ಮೂಲಕ ತಮ್ಮ ಕೌಶಲ್ಯ ಪ್ರದರ್ಶಿಸುತ್ತಾರೆ.


ವಿವೇಕಾನಂದ ಕಾಲೇಜಿನ ಅಸಾಧಾರಣ ಸಾಧನೆ– ಈಗ ಭಾರತದ No.1!

ಕಾಲೇಜಿನ GDGoC ತಂಡವು, III BCA ವಿದ್ಯಾರ್ಥಿ ಸಚಿನ್‍ ಉಪರ್ಣ ಅವರ ನೇತೃತ್ವದಲ್ಲಿ, ದೇಶದ ನೂರಾರು ಕಾಲೇಜುಗಳ ನಡುವೆಯೂಅತ್ಯುತ್ತಮ ಪ್ರದರ್ಶನ ನೀಡಿ ಭಾರತದ Top 5 ಕಾಲೇಜುಗಳಲ್ಲಿ ಮೊದಲ ಸ್ಥಾನ ಪಡೆದು ವಿಶಿಷ್ಠ ಸಾಧನೆ ಸಾಧಿಸಿದೆ. ಗಣಕ ಶಾಸ್ತ್ರ ವಿಭಾಗದ ಉಪನ್ಯಾಸಕರು ಹಾಗೂ ವಿಭಾಗದ ಮುಖ್ಯಸ್ಥ  ಪ್ರಕಾಶ್‍ಕುಮಾರ್ ಪಿ. ಅವರ ಪ್ರೊತ್ಸಾಹದಿಂದ ವಿದ್ಯಾರ್ಥಿಗಳು ನಿರಂತರವಾಗಿ ಹೊಸ ತಂತ್ರಜ್ಞಾನಗಳನ್ನು ಅರಿತು ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.


ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ತಂಡದ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಈ ಸಾಧನೆಗೆ ಪ್ರಶಂಸೆ ಸಲ್ಲಿಸಿದ್ದಾರೆ. 


“ಭಾರತದ No.1 ಸ್ಥಾನವನ್ನು ಗಳಿಸಿರುವುದು ನಮ್ಮ ಕಾಲೇಜಿನ ತಾಂತ್ರಿಕ ಸಾಮಥ್ರ್ಯ, ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತುಅಧ್ಯಾಪಕರ ಸಮರ್ಪಣೆಯ ನೇರ ಫಲ. Google Developers ವತಿಯಿಂದದೊರೆತ ಈ ಮಾನ್ಯತೆ, ನಮ್ಮ ಸಂಸ್ಥೆಯ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ರಾಷ್ಟ್ರೀಯ ಮಟ್ಟದ ಮುದ್ರೆಯಾಗಿದೆ.”


ಮುರಳಿಕೃಷ್ಣ ಕೆ.ಎನ್

ಸಂಚಾಲಕರು

ವಿವೇಕಾನಂದಕಾಲೇಜು ಪುತ್ತೂರು



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top