ಬದಿಯಡ್ಕ: ಕಾಸರಗೋಡು ಮಾಡತ್ತಡ್ಕ ಕುಂಟಿಕಾನ ಶ್ರೀ ಹರಿಹರ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಬೆಳಕು ಮಹೋತ್ಸವದ ಅಂಗವಾಗಿ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ವತಿಯಿಂದ 143ನೇ ವೈವಿಧ್ಯಮಯ ನಿತ್ಯನೂತನ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ಸಹಸ್ರಾರು ಪ್ರೇಕ್ಷಕ ಜನಸ್ತೋಮದೊಂದಿಗೆ ಬಹು ವಿಜೃಂಭಣೆಯಿಂದ ನಡೆಯಿತು.
ಡಾ. ವಾಣಿಶ್ರೀ ಕಾಸರಗೋಡು ನಿರೂಪಣೆ ಹಾಗೂ ಸಾಹಿತ್ಯಾಮೃತ ಕಾರ್ಯಕ್ರಮ ನೆರವೇರಿಸಿದರು. ಗಾನಾಮೃತ ಕಾರ್ಯಕ್ರಮ ಸಂಗೀತ ರತ್ನ ಮೇಘರಾಜ್ ಆಚಾರ್ಯ ಅವರ ಸುಮಧುರ ಗಾಯನದೊಂದಿಗೆ ಮೂಡಿ ಬಂತು. ಸಂಸ್ಥೆಯ ದಾಖಲೆ ಸಾಧಕಿ ಪ್ರೀತಿಕಾ ಪ್ರಸಾದ್ ಅವರ ರಿಂಗ್ ನೃತ್ಯ ಎಲ್ಲರನ್ನೂ ಆಕರ್ಷಿಸಿತು. ಪುಟಾಣಿ ಸಾಧಕಿ ಮಾನ್ವಿಸಾಗರ್ ಅವರ ಯೋಗ ನೃತ್ಯ ಕಾರ್ಯಕ್ರಮಕ್ಕೆ ರಂಗು ಕೊಟ್ಟಿತು.
ಸಂಸ್ಥೆಯ ಕಲಾ ಮಾಣಿಕ್ಯಗಳಾದ ಶ್ರೇಯಸೂರ್ಯ, ಭವಿಷ್ಯ, ವಿಸ್ಮಯ, ಲಕ್ಷ್ಮಿಪ್ರಿಯ, ಹರ್ಷಿಕ, ಪ್ರಿತ್ವಿಕ, ವಿನ್ಯ, ಪ್ರಜ್ಞಾ ಇನ್ನಿತರ ಕಲಾವಿದರ ಬಹುವಿಧ ಪ್ರಕಾರಗಳ ನೃತ್ಯ ಅಪಾರ ಕಲಾಭಿಮಾನಿಗಳ ಗಮನ ಸೆಳೆಯಿತು. ನಿರಂತರ ಕನ್ನಡ ಕಾರ್ಯಕ್ರಮ ನೀಡುವ ಏಕೈಕ ಕನ್ನಡ ಸಂಸ್ಥೆಯಾದ ಗಡಿನಾಡ ಕನ್ನಡ ಸಂಸ್ಥೆಯ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು ಅವರಿಗೆ ಫಲ ಪುಷ್ಪ ಶ್ರೀ ಹರಿಹರ ದೇವರ ಪ್ರಸಾದ, ಸ್ಮರಣಿಕೆ ನೀಡಿ ಕನ್ನಡ ಕಾರ್ಯಕ್ರಮಕ್ಕೆ ಹರಸಲಾಯಿತು.
ಭಾಗವಹಿಸಿದ ಎಲ್ಲಾ ಕನ್ನಡ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಮಂದಿರದ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಅಚ್ಯುತ ಭಟ್, ಪ್ರೇಮಲತಾ, ಚೈತ್ರಾ ಗುರುಪ್ರಸಾದ್ ಮುಂತಾದ ಗಣ್ಯರು ಉಪಸ್ಥಿರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


