ಶೇಡಿಕಾವು ಅಯ್ಯಪ್ಪ ದೀಪೋತ್ಸವ: ಸಾಹಿತ್ಯ-ಗಾನ-ನೃತ್ಯ ವೈಭವ

Upayuktha
0


ಕುಂಬಳೆ: ಕುಂಬಳೆ ಶೇಡಿಕಾವು ಶ್ರೀ ಅಯ್ಯಪ್ಪ ದೇವಸ್ಥಾನದ ಶ್ರೀ ಅಯ್ಯಪ್ಪ ದೀಪೋತ್ಸವದ ಅಂಗವಾಗಿ ಡಾ. ವಾಣಿಶ್ರೀ ಕಾಸರಗೋಡು ಅವರ ನೇತೃತ್ವದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.), ಕಾಸರಗೋಡು ವತಿಯಿಂದ 144ನೇ ವೈವಿಧ್ಯಮಯ ಸಾಹಿತ್ಯ–ಗಾನ–ನೃತ್ಯ ವೈಭವ ಕಾರ್ಯಕ್ರಮ ಭವ್ಯವಾಗಿ ನಡೆಯಿತು.


ಸಾಹಿತ್ಯ ಸಿಂಚನ ಕಾರ್ಯಕ್ರಮವನ್ನು ಡಾ. ವಾಣಿಶ್ರೀ ಕನ್ನಡ ಸಾಹಿತ್ಯದ ಮುಖೇನ ನೆರವೇರಿಸಿದರು. ಗಾನ ವೈಭವದಲ್ಲಿ ಸಂಸ್ಥೆಯ ಕನ್ನಡ ಸಂಗೀತ ಕಲಾವಿದರು ವಿಶ್ವನಾಥ ಪುತ್ತಿಗೆ, ಮುರಳಿ ನೀರ್ಚಾಲ್, ಕೃಪಾ ಕಿರಣ, ದಿವಾಕರ ಕಾಸರಗೋಡು, ಈಶ್ವರ ಸೂರಂಬೈಲ್ ಹಾಗೂ ಸುರೇಶ್ ಪೈಕ ಸಮೂಹ ಗಾನ ಕಾರ್ಯಕ್ರಮ ನೀಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.


ಎರಡುವರೆ ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸಮೂಹ ನೃತ್ಯಗಳೇ ವಿಶೇಷ ಆಕರ್ಷಣೆಯಾಗಿ ದ್ದವು. ರಿಂಗ್ ಡಾನ್ಸ್, ಯೋಗ ನೃತ್ಯ, ಜನಪದ, ಭರತನಾಟ್ಯ, ಭಕ್ತಿ ನೃತ್ಯ, ಯಕ್ಷ ನೃತ್ಯ, ಸಾಹಸ ನೃತ್ಯ, ಅಜ್ಜಿ–ಮೊಮ್ಮಕ್ಕಳ ನೃತ್ಯ, ಅಮ್ಮ–ಮಗಳ ನೃತ್ಯ, ಅಕ್ಕ–ತಂಗಿ ನೃತ್ಯ ಸೇರಿದಂತೆ ಹಲವು ವೈವಿಧ್ಯಮಯ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನ ಗೆದ್ದವು. ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶ್ರೀ ಕೃಷ್ಣ ವೇಷಧಾರಿಗಳೂ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.


ನೃತ್ಯ ವಿದುಷಿ ರೇಖಾ ದಿನೇಶ್ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಲಾಸೇವೆ ಸಲ್ಲಿಸಿದ 68ಕ್ಕೂ ಅಧಿಕ ಕಲಾವಿದರಿಗೆ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ನಾರಾಯಣ ಗುರು ಸ್ವಾಮಿ ಹಾಗೂ ಬಳಗದವರ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೀಪೋತ್ಸವ ಸಮಿತಿಯ ಗಣ್ಯರು ಡಾ. ವಾಣಿಶ್ರೀ ಅವರನ್ನು ಸನ್ಮಾನಿಸಿದರು. ಸಮಿತಿಯ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಸಂದೀಪ್ ಆರಿಕ್ಕಾಡಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top