ಆಯುರ್ವೇದ ವಿಶ್ವ ರತ್ನ ಪ್ರಶಸ್ತಿಗೆ ಡಾ. ಸುರೇಶ ನೆಗಳಗುಳಿ ಆಯ್ಕೆ

Upayuktha
0


ಮಂಗಳೂರು: ಆಯುರ್ವೇದಕ್ಕೆ ಸಲ್ಲಿಸಿರುವ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ ಮಂಗಳೂರು ಕಣಚೂರು ಆಯುರ್ವೇದ ಕಾಲೇಜಿನ ಮುಖ್ಯ ಸಲಹೆಗಾರ ಹಾಗೂ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಕ್ಷಾರ ತಜ್ಞ ಡಾ ಸುರೇಶ ನೆಗಳಗುಳಿ ಇವರನ್ನು ಪ್ರತಿಷ್ಠಿತ "ಆಯುರ್ವೇದ ವಿಶ್ವ ರತ್ನ ಪ್ರಶಸ್ತಿ"ಗೆ ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರಿನ ಡಾ. ಗಿರಿಧರ ಕಜೆ ತಿಳಿಸಿರುತ್ತಾರೆ.


ನೆಗಳಗುಳಿ ಅವರು ಬಂಟ್ವಾಳ ಮೂಲದ ನೆಗಳಗುಳಿಯವರಾಗಿದ್ದು 35 ವರ್ಷ ಲಾಗಾಯ್ತು ವೈದ್ಯ ಶಿಕ್ಷಣದ ಅನೇಕ ಹುದ್ದೆಗಳಲ್ಲಿ ಕಾರ್ಯವೆಸಗಿದ್ದು ಮೂಡಬಿದ್ರೆ ಆಯುರ್ವೇದ ಕಾಲೇಜಿನ ಸುದೀರ್ಘ ಕಾಲವಧಿ ಪ್ರಾಚಾರ್ಯರಾಗಿದ್ದಾರೆ. ಶೋರಾನೂರ್ ಮಣಿಪಾಲ ಕೊಪ್ಪಗಳಲ್ಲೂ ಸೇವೆ ಮಾಡಿದವರು.

ಪ್ರಸ್ತುತ ಕಣಚೂರ್ ಆಯುರ್ವೇದ ಕಾಲೇಜು ಆಸ್ಪತ್ರೆಯ ಸ್ಥಾಪಕ ಸಲಹೆಗಾರರಾಗಿ ಮತ್ತು ಶಸ್ತ್ರ ಚಿಕಿತ್ಸಕರಾಗಿ ಮೂಲವ್ಯಾಧಿ ಕ್ಷಾರ ತಜ್ಞರಾಗಿದ್ದಾರೆ.


ಸುಮಾರು 1500 ಮೂಲವ್ಯಾಧಿ ಕ್ಷಾರ ಚಿಕಿತ್ಸೆ, ಮೂತ್ರ ಕಲ್ಲು ಚರ್ಮ ರೋಗಗಳಲ್ಲೂ ಸಾಕಷ್ಟು ಮಂದಿಗೆ ಚಿಕಿತ್ಸೆ ನೀಡಿದ್ದಾರೆ. ಮಧುಮೇಹ ವ್ರಣದಿಂದ ಕಾಲು ಕತ್ತರಿಸುವ ರೋಗಿಗಳನ್ನು ಯಶಸ್ವಿಯಾಗಿ ಗುಣ ಪಡಿಸಿದ್ದಾರೆ. ಸಾಹಿತ್ಯದಲ್ಲೂ ಕ್ರಿಯಾಶೀಲರಾಗಿದ್ದು ದ.ಕ. ಜಿಲ್ಲೆಯ ಗಜಲ್ ಕವಿಗಳೆಂದು ಪ್ರಖ್ಯಾತರಾಗಿದ್ದಾರೆ. ತುಷಾರ ಚಿತ್ರಕವನ ಸ್ಪರ್ಧೆಯಲ್ಲಿ 130 ಕ್ಕೂ ಹೆಚ್ಚು ಬಾರಿ ವಿಜೇತರಾಗಿದ್ದು ಜಯಕಿರಣ ಪತ್ರಿಕೆಯಲ್ಲಿ ಪ್ರಕಟವಾದ ಕವನಗಳ ಸಂಕಲನ ಕಾವ್ಯ ಕಿರಣವನ್ನು ಲೋಕಾರ್ಪಣೆ ಮಾಡಿದ್ದಾರೆ.


ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದಾರೆ. ಬದಲಾಗದವರು ಎಂಬ ಚಿತ್ರದಲ್ಲೂ ನಟಿಸಿದ್ದಾರೆ. ಜೆಸಿ, ರೋಟರಿ, ಲಯನ್ ಸಂಘಗಳಲ್ಲೂ ಸಕ್ರಿಯರಾದವರು. ಇವರಿಗೆ ಈ ಪ್ರಶಸ್ತಿಯನ್ನು 2025 ರ ಡಿಸೆಂಬರ್ 25 ರಿಂದ 28 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ (ಗೇಟ್ ಸಂಖ್ಯೆ 6) ನಡೆಯಲಿರುವ 2 ನೇ ಆಯುರ್ವೇದ ವಿಶ್ವ ಶೃಂಗಸಭೆಯಲ್ಲಿ ಪ್ರದಾನ ಮಾಡಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top