ಮೌನ ಹಲವಾರು ಉತ್ತರ ಅಡಗಿಕೊಂಡಿರುವ ನಮ್ಮ ಆಂತರಿಕ ಚಿಹ್ನೆ. ಕೆಲವರಿಗೆ ಮಾತಿಗಿಂತ ಮೌನವೇ ಅತ್ಯಂತ ಸೂಕ್ತವಾಗಿ ಹೋಲುತ್ತದೆ. ಕೆಲವೊಮ್ಮೆ ನಮ್ಮ ಮನಸ್ಸು ಪದಗಳಿಂದ ಹೇಳಲು ಆಗದಿದ್ದರೂ ಮೌನದ ಮೂಲಕ ಹೇಳಲು ಸಾಧ್ಯವಾಗುತ್ತದೆ. ಮೌನ ಜಾರುವಾಗ ಕಣ್ಣೀರು ಸರ್ವೇ ಸಾಮಾನ್ಯ. ಕೆಲವೊಮ್ಮೆ ಕೆಲವೊಂದು ಪರಿಸ್ಥಿತಿಗಳಿಂದ ನಮ್ಮ ಮೌನ ಸರಿಯಾದ ಪ್ರತಿಕ್ರಿಯೆ ನೀಡುತ್ತದೆ.ಮಾತುಗಳು ಗದ್ದಲ ಮಾಡಬಹುದು, ಆದರೆ ಮೌನ ನಮ್ಮೊಳಗಿನ ಶಬ್ದಗಳನ್ನು ಕೇಳುವ ಅವಕಾಶ ನೀಡುತ್ತದೆ. ಮೌನದಲ್ಲಿ ನಾವು ನಮ್ಮ ತಪ್ಪು, ನಮ್ಮ ಭಾವನೆ, ನಮ್ಮ ಕನಸು—ಇವೆಲ್ಲವನ್ನೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ನಮ್ಮನ್ನು ನಾವು ಅರಿತುಕೊಳ್ಳಲು, ಮನಸ್ಸನ್ನು ಶಾಂತವಾಗಿಡಲು ಮತ್ತು ಸರಿಯಾದ ದಾರಿಯನ್ನು ಆಯ್ಕೆ ಮಾಡಲು ಮೌನವೇ ಅತ್ಯಂತ ಶಕ್ತಿಯುತ ಮಾರ್ಗ.
ಮೌನವೆಂಬುದು ಮಾತಿಗಿಂತಲೂ ದೊಡ್ಡ ಶಕ್ತಿ. ಕೆಲವೊಮ್ಮೆ ನಾವು ಹೇಳದ ಮಾತುಗಳು ಹೇಳಿದ ಸಾವಿರ ಮಾತಿಗಿಂತ ಮೌನ ಕೆಲವೊಮ್ಮೆ ಹೆಚ್ಚು ಪರಿಣಾಮ ಬೀರುತ್ತದೆ. ಮನುಷ್ಯ ಮನದ ಆಳವನ್ನು ಅರ್ಥಮಾಡಿಕೊಳ್ಳಲು ಮೌನವೆಂಬ ಕನ್ನಡಿ ಸಾಕು. ಮೌನ ನಮ್ಮ ಆಲೋಚನೆಗಳಿಗೆ ಗತಿ ನೀಡುತ್ತದೆ. ಭಾವನೆಗಳಿಗೆ ಸ್ಪಷ್ಟತೆ ನೀಡುತ್ತದೆ. ಬೇಸರ, ಕೋಪ,ಗೊಂದಲ ಇವುಗಳೆಲ್ಲ ಮೌನವೇ ಅತಿಯಾದ ಸುಂದರವಾದ ಉತ್ತರ. ಮೌನದಲ್ಲಿ ನಮ್ಮ ಆತ್ಮದಲ್ಲಿ ನಿಜವಾದ ಧ್ವನಿ ಅಡಗಿರುತ್ತದೆ.
-ಅಂಜಲಿ ಮುಂಡಾಜೆ
ಎಸ್ ಡಿ ಯಂ ಕಾಲೇಜು ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



