ಹುಬ್ಬಳ್ಳಿಯಲ್ಲಿ ಮಿಂಚಿದ "ಶನಿ ಮಹಾತ್ಮೆ"

Upayuktha
0


ಹುಬ್ಬಳ್ಳಿ: ಮಂಗಳೂರಿನ ಕಿಶೋರ್ ಡಿ ಶೆಟ್ಟಿ ನೇತೃತ್ವದ ಶ್ರೀ ಲಲಿತೆ ತಂಡದವರು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾ ಭವನದಲ್ಲಿ ಪ್ರದರ್ಶಿಸಿದ "ಶನಿ ಮಹಾತ್ಮೆ" ಕನ್ನಡ ಪೌರಾಣಿಕ ನಾಟಕವು ಪ್ರೇಕ್ಷಕರನ್ನು ಬೆರಗುಗೊಳಿಸಿತು.


ಹುಬ್ಬಳ್ಳಿಯ ಶನಿ ಪೂಜಾ ಸೇವಾ ಸಮಿತಿಯವರು ಸಾಮೂಹಿಕ ಶನಿ ಪೂಜೆ ನಡೆಸಿ ಶನಿ ದೇವರ ಕಥೆಯನ್ನು ನಾಟಕದ ಮೂಲಕ ಪ್ರಸ್ತುತಿಗೈದರು. ಶನಿ ಜನ್ಮ, ಶನಿ ಪ್ರಭಾವವನ್ನು ಬೇರೆ ಬೇರೆ ಯುಗಗಳಲ್ಲಿ ತೋರುವ ನವರಸ ಭರಿತ ಕಥಾ ವಸ್ತುವನ್ನು ಹೊಂದಿದ ಕದ್ರಿ ನವನೀತ ಶೆಟ್ಟಿ ಅವರು ರಚಿಸಿದ ಈ ನಾಟಕದ 48ನೇ ಪ್ರದರ್ಶನ ಇದಾಗಿದೆ.


ಅದ್ದೂರಿ ಸಂಪ್ರದಾಯಿಕ ರಂಗ ವಿನ್ಯಾಸ, ಆಧುನಿಕ ಬೆಳಕಿನ ವಿನ್ಯಾಸ, ಪೂರ್ವ ಮುದ್ರಿತ ಧ್ವನಿ, ಸೊಗಸಾದ ವೇಷ ಭೂಷಣ, ಹಿತ ಮಿತ ಸಂಗೀತ, ಪ್ರಬುದ್ಧ ಕಲಾವಿದರ ಭಾವ ಪೂರ್ಣ ಅಭಿನಯಗಳೊಂದಿಗೆ ಅಚ್ಚುಕಟ್ಟಾಗಿ ಪ್ರದರ್ಶನಗೊಂಡ ನಾಟಕವನ್ನು ಪ್ರೇಕ್ಷಕರು ಭಕ್ತಿ ಭಾವದಿಂದ ಆಸ್ವಾದಿಸಿದರು.



ಇದೇ ಸಂದರ್ಭದಲ್ಲಿ ನಾಟಕ ರಚನೆ ಮಾಡಿದ ಬಹು ಮುಖ ಪ್ರತಿಭೆಯ ಕಲಾವಿದ ಕದ್ರಿ ನವನೀತ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಉದ್ಯಮಿಗಳಾದ ರಮೇಶ್ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಅರ್ಚಕ ಅಕ್ಷಯ ಉಡುಪ ಅತಿಥಿಗಳಾಗಿ ಪಾಲ್ಗೊಂಡರು. ಶನಿ ಪೂಜಾ ಸಮಿತಿಯ ಸತೀಶ್ ಡಿ ಶೆಟ್ಟಿ ಅವರು ಅಭಿನಂದಿಸಿದರು. ಸಮಿತಿಯ ಪ್ರಧಾನರಾದ ಅನಂತ ಪದ್ಮನಾಭ ಐತಾಳ್, ಕೃಷ್ಣ ಶೆಟ್ಟಿ, ರಮಾನಂದ ಶೆಟ್ಟಿ, ವಿವೇಕ್ ಪೂಜಾರಿ ಉಪಸ್ಥಿತರಿದ್ದರು.


ಶ್ರೀ ಲಲಿತೆ ತಂಡದ ಯಜಮಾನ ಕಿಶೋರ್ ಡಿ ಶೆಟ್ಟಿ, ನಾಟಕ ನಿರ್ದೇಶಕ ಜೀವನ್ ಉಳ್ಳಾಲ್, ಪ್ರಸರಣ ಸಂಯೋಜಕ ಪ್ರದೀಪ್ ಆಳ್ವ ಕದ್ರಿ ಅವರನ್ನು ಗೌರವಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top