ಉಡುಪಿಗೆ ಭೇಟಿ ನೀಡಲು ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಆಹ್ವಾನ

Upayuktha
0


ಉಡುಪಿ: ಪೂಜ್ಯ ಪರ್ಯಾಯ ಪುತ್ತಿಗೆ ಶ್ರೀಪಾದರ ವಿಶ್ವ ಗೀತಾ ಪರ್ಯಾಯದ ಸುಸಂದರ್ಭದಲ್ಲಿ ಇದೇ ಡಿಸೆಂಬರ್ 27 ರಂದು ಅರ್ಪಿಸಲ್ಪಡುವ ಸ್ವರ್ಣಮಯ ಪಾರ್ಥಸಾರಥಿ ರಥ ಸಮರ್ಪಣಾ ಮಹೋತ್ಸವದಲ್ಲಿ ಅಭ್ಯಾಗತರಾಗಿ ಭಾಗಿಯಾಗುವಂತೆ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಆದಿತ್ಯನಾಥ್ ಯೋಗಿಯವರನ್ನು ಲಕ್ನೋ ನಗರದ ಅವರ ನಿವಾಸದಲ್ಲಿ ಆಮಂತ್ರಿಸಲಾಯಿತು.


ಇತ್ತೀಚಿಗೆ ನಡೆದ ಸನ್ಮಾನ್ಯ ಪ್ರಧಾನಮಂತ್ರಿಗಳು ಭಾಗವಹಿಸಿ ಅತ್ಯಂತ ಯಶಸ್ವಿಯಾದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದ ಬಗ್ಗೆ ವಿಚಾರಿಸಿ ಯೋಗೀಜಿ ಸಂತಸ ಪಟ್ಟರು.


ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ಹಾಗೂ ಜನಪ್ರಿಯ ಹಿರಿಯ ಪತ್ರಕರ್ತ ಶ್ರೀ ರವೀಂದ್ರ ಜೋಶಿಯವರು ಕಾರ್ಯಕ್ರಮದ ವಿವರಗಳನ್ನು ನೀಡಿದರು.

ಸನ್ಮಾನ್ಯ ಯೋಗಿಜಿಯವರು ಇಷ್ಟರಲ್ಲಿಯೇ ಉಡುಪಿಗೆ ಆಗಮಿಸಲಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top