ಅನನ್ಯ ರಾವ್, ಆಶಿಶ್‌ ಶಂಕರ್ ಗೆ ಸಕ್ಷಮದಿಂದ ಗೌರವಾಭಿನಂದನೆ

Upayuktha
0


ಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಭಾರತೀಯ ನೌಕಾ ಪಡೆಗೆ ಸಬ್ ಲೆಫ್ಟಿನೆಂಟ್ ಆಗಿ ಆಯ್ಕೆ ಆದ ಅನನ್ಯ ರಾವ್ ಹಾಗೂ ಭಾರತೀಯ ವಾಯುಪಡೆಗೆ ತಾಂತ್ರಿಕ ಅಧಿಕಾರಿಯಾಗಿ ಆಯ್ಕೆಗೊಂಡ ಆಶಿಶ್ ಶಂಕರ್ ಇವರನ್ನು ಅಭಿನಂದಿಸಿ ಗೌರವಿಸಲಾಯಿತು.


ಅನನ್ಯ ರಾವ್ ಇವರು ಮಂಗಳೂರು ಕೊಂಚಾಡಿ ನಿವಾಸಿ ಸತೀಶ್ ರಾವ್ ಹಾಗೂ ವೀಣಾ ರಾವ್ ದಂಪತಿಗಳ ಸುಪುತ್ರಿಯಾಗಿದ್ದು ಪ್ರತಿಷ್ಠಿತ ಎನ್.ಐ.ಟಿ.ಕೆ. ವಿದ್ಯಾಸಂಸ್ಥೆಯಲ್ಲಿ ಮೆಕ್ಯಾನಿಕಲ್ ಬಿ. ಟೆಕ್ ಪದವಿಯನ್ನು ಪಡೆದಿದ್ದಾರೆ. ಬಹು ಆದಾಯದ ವೃತ್ತಿಯ ಅವಕಾಶವನ್ನು ಪಡೆದಿದ್ದರೂ ಕೂಡ ಅದನ್ನು ತಿರಸ್ಕರಿಸಿ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುವ ಇವರ ಮನದಿಂಗಿತಕ್ಕೆ ಹೆತ್ತವರು ಪ್ರೋತ್ಸಾಹ ನೀಡಿದ್ದಾರೆ. 


ಪುತ್ತೂರಿನ ವಳಂಕುಮ್ಮೇರಿ ವೆಂಕಟಕೃಷ್ಣ ಮತ್ತು ಸುಜಾತ ದಂಪತಿಗಳ ಪುತ್ರ ಆಶಿಶ್ ಶಂಕರ್ ನಿಟ್ಟೆಯ ಪ್ರತಿಷ್ಠಿತ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಂತ್ರಜ್ಞಾನ ಕಾಲೇಜಿನ ಇಂಜಿನಿಯರಿಂಗ್ ಪದವೀಧರ. ಪ್ರೌಢ ಶಿಕ್ಷಣದ ಸಮಯದಲ್ಲೇ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುವ ಕನಸನ್ನು ಹೊಂದಿದ್ದ ಆಶಿಶ್‌ಗೆ ಹೆತ್ತವರು ಸಂಪೂರ್ಣ ಸಹಕಾರವನ್ನು ನೀಡಿ ಪ್ರೋತ್ಸಾಹಿಸಿದ್ದಾರೆ.




ಸಮಾಜಕ್ಕೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಸಮಿತಿಯು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಕ್ಷಮ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಭಟ್ ಕಾಕುಂಜೆಯವರು ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ್ ಹೊಸಮನೆಯವರು ಮಕ್ಕಳ ನಡೆ ಹಾಗೂ ಹೆತ್ತವರ ಪ್ರೋತ್ಸಾಹವನ್ನು ಅಭಿನಂದಿಸಿ ಹಿತನುಡಿಗಳನ್ನಾಡಿದರು. ಜಿಲ್ಲಾ ಸಮಿತಿಯ ಕಾರ್ಯದರ್ಶಿ ಹರೀಶ್ ಪ್ರಭುರವರು ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top