ಪುತ್ತೂರು: ಪುತ್ತೂರು ಶಿವಸದನ ಹಿರಿಯ ನಾಗರಿಕರ ಹಾಗೂ ವಸತಿ ನಿಲಯದಲ್ಲಿ ಮಂಗಳೂರಿನ ಶ್ರೀ ಜಗನ್ನಾಥ ರಾವ್ ಅವರ ನೇತೃತ್ವದ 10 ಮಂದಿ ಪಾಠಕರ ತಂಡದಿಂದ ರುದ್ರ ಪಾರಾಯಣ ಹಾಗೂ ಇತರ ವೇದ ಸೂಕ್ತಗಳ ಪಠಣ ಭಕ್ತಿಭಾವದಿಂದ ಅತ್ಯುತ್ತಮವಾಗಿ ನೆರವೇರಿತು.
“ನಮಃ ಶಿವಾಯ” ಮಂತ್ರಗಳಿಂದ ಕೂಡಿದ ಈ ಪವಿತ್ರ ರುದ್ರ ಪಾರಾಯಣವು ಭಗವಾನ್ ಶಿವನಿಗೆ ಅರ್ಪಿಸಲ್ಪಡುವ ಅತ್ಯಂತ ಶಕ್ತಿಶಾಲಿ ವೇದ ಪಠಣವಾಗಿದ್ದು, ಇದರಿಂದ ಮನಶಾಂತಿ, ಆತ್ಮಸ್ಥೈರ್ಯ, ರೋಗಭಯ ನಿವಾರಣೆ, ಅಡೆತಡೆಗಳ ಪರಿಹಾರ ಹಾಗೂ ನಕಾರಾತ್ಮಕತೆಯಿಂದ ಮುಕ್ತಿಯನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಶಾಂತಿ, ಸೌಖ್ಯ, ಅಭಿವೃದ್ಧಿ ಹಾಗೂ ಕಷ್ಟಕರ ಸಮಯದಲ್ಲಿ ಧೈರ್ಯ ನೀಡುವ ಮೂಲಕ ಶುಭ ಫಲಗಳನ್ನು ತರುತ್ತದೆ ಎಂದು ಭಕ್ತರು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಆಗಮಿಸಿದ ಶ್ರೀ ಬಿ.ವಿ. ರಾವ್ ಹಾಗೂ ಶ್ರೀಮತಿ ವಿದ್ಯಾ ರಾವ್ ಅವರು ದೀಪ ಪ್ರಜ್ವಲನ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಎಲ್ಲರೂ ಶ್ರದ್ಧಾ–ಭಕ್ತಿಯಿಂದ ಸೂಕ್ತ ಪಠಣ ಮಾಡಿ ಮಂಗಳಾರತಿ ಬೆಳಗಿದರು.
ಅನಂತರ ಬೆಂಗಳೂರಿನಿಂದ ಆಗಮಿಸಿದ ವಿಕಾಸ ಕವಿ ಶ್ರೀ ಬಿ.ವಿ. ರಾವ್ ಅವರ ಕವಿತಾ ವಾಚನ ಮನಸೂರೆಗೊಂಡಿತು. ಅವರ ಕಂಠಸೌಂದರ್ಯ ಮತ್ತು ಭಾವಪೂರ್ಣ ವಾಚನ ಶ್ರೋತೃಗಳ ಹೃದಯ ಸ್ಪರ್ಶಿಸಿತು. ಈ ಕವನಗಳ ಆಧಾರದಲ್ಲಿ ಭರತನಾಟ್ಯ, ಗೀತನಾಟಕ ಹಾಗೂ ಭಜನೆಗಳು ರೂಪುಗೊಳ್ಳುತ್ತಿರುವುದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಮುಂಬೈಯ ಶ್ರೀ ಜನಾರ್ಧನ ರಾವ್ ಅವರು ತಮ್ಮ ಪತ್ನಿಯ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಭೋಜನವನ್ನು ಪ್ರಾಯೋಜಿಸಿದರು. ಇಂತಹ ಪವಿತ್ರ ಕಾರ್ಯಕ್ರಮ ಶಿವಸದನದಲ್ಲಿ ನೆರವೇರಿರುವುದು ಇಲ್ಲಿನ ನಿವಾಸಿಗಳ ಪುಣ್ಯವೆಂದು ಎಲ್ಲರೂ ಅಭಿಪ್ರಾಯಪಟ್ಟರು.
ಭೋಜನ ವ್ಯವಸ್ಥೆಯಲ್ಲಿ ಶ್ರೀ ಕರುಣ್ ಬೆಳ್ಳೆ, ಶ್ರೀ ಮೋಹನ್ ದಾಸ್ ಫಿಲಿಂಜ, ಶ್ರೀ ದಿನಕರ್ ರಾವ್, ಶ್ರೀ ಚೇತನ ಶರ್ಮ, ಶ್ರೀಮತಿ ಗಾಯತ್ರಿ ಫಿಲಿಂಜ ಸೇರಿದಂತೆ ಸಿಬ್ಬಂದಿ ವರ್ಗ, ಶಿಕ್ಷಕಿಯರು, ಮೆಟ್ರನ್ ಹಾಗೂ ಮ್ಯಾನೇಜರ್ ಅವರು ಸಹಕರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

