ಕವನ: ವಾಗ್ದೇವಿ

Upayuktha
0


ಕಚ್ಛಪಿ ಪಿಡಿದಿಹ ಸರಸತಿ ದೇವಿಯೆ

ನಿಚ್ಚಳ ಮನವನು ನೀಡಮ್ಮ

ಹಚ್ಚುತ ದೀಪವ ಬೆಳಗುವೆನಾರತಿ

ಸಚ್ಚರಿತದ ಮನವೀಯಮ್ಮ


ಧವಳದ ವಸ್ತ್ರದಿ ಮಿನುಗುವ ತಾಯಿಯೆ

ಕವಿಮನದಲಿ ನೆಲೆ ನಿಲ್ಲಮ್ಮ

ರವಿಕಾಂತಿಯ ಮೊಗ ಪೊಂದಿಹ ಮಾತೆಯೆ

ಸವಿಯಕ್ಷರವನು ಬರೆಸಮ್ಮ


ಪುಸ್ತಕಧಾರಿಣಿ ವೀಣಾಪಾಣೀ

ಹಸ್ತವ ಶಿರದಲಿ ಇರಿಸಮ್ಮ

ಮಸ್ತಕಕಿನಿತೂ ಜಾನವನೆರೆಯುತ

ಶಿಸ್ತನು ಬಾಳಲಿ ತಾರಮ್ಮ


ರಸನದಿ ನೆಲೆಸಿರೆ ಸ್ತುತಿಸುವೆನನುದಿನ

ನಸುನಗೆ ಬೀರುತ ಬಾರಮ್ಮ

ಹೊಸತನ ತುಂಬಿಸಿ ಶಕುತಿಯನೀಯುತ

ಮಿಸುಪನು ಬದುಕೊಳಗಿರಿಸಮ್ಮ


ಸೌಮ್ಯ ಪ್ರಸಾದ್, ಹಾಸನ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)
To Top