ಇಡ್ಯಾ ವಿದ್ಯಾದಾಯಿನೀ ಹಿರಿಯ ಪ್ರಾಥಮಿಕ ಶಾಲೆ: ನೂತನ ವೇದಿಕೆ ಉದ್ಘಾಟನೆ

Upayuktha
0


ಸುರತ್ಕಲ್‌: ಸುರತ್ಕಲ್ ನ ಹಿಂದೂ ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಅನುದಾನಿತ ಇಡ್ಯಾ ವಿದ್ಯಾದಾಯಿನೀ ಹಿರಿಯ ಪ್ರಾಥಮಿಕ ಶಾಲೆಯ ಹೆಚ್. ಯು. ಅನಂತಯ್ಯ ನವತಿ ಸಂಭ್ರಮದ ಸಭಾಂಗಣದಲ್ಲಿ ಮೀನಾಕ್ಷಿ ಮತ್ತು ಸಹೋದರಿಯರಾದ ಜಯಲಕ್ಷ್ಮಿ ಮತ್ತು ಶಾಂತಿಯವರು ತಮ್ಮ ತಂದೆ ಟಿ. ಪಿ. ಕೇಶವನ್ ಮತ್ತು ತಾಯಿ ಅನುರಾಧ ಕೇಶವನ್ ಅವರ ಸವಿ ನೆನಪಿಗಾಗಿ ನಿರ್ಮಿಸಿರುವ ಅನುರಾಧ ಕೇಶವನ್ ವೇದಿಕೆಯ ಉದ್ಘಾಟನಾ ಸಮಾರಂಭವು ಜರುಗಿತು.


ಶಾಲೆಯ ನಿಕಟಪೂರ್ವ ಸಂಚಾಲಕರಾದ ಹೆಚ್. ಯು. ಅನಂತಯ್ಯ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡುತ್ತಾ, ಮಾತೆ ಸರಸ್ವತಿಯು ಸಂಸ್ಥೆಯಲ್ಲಿ ನಡೆಯಬೇಕಾದ ಸತ್ಕಾರ್ಯಗಳನ್ನು ದಾನಿಗಳಿಂದ ಮಾಡಿಸುತ್ತಾಳೆ ಎಂದರು.


ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಎಸ್. ಹತ್ವಾರ್ ಮಾತನಾಡಿ ಶಾಲೆಗೆ ಅವಶ್ಯವಾಗಿದ್ದ ವೇದಿಕೆಯ ಕೊಡುಗೆಗಾಗಿ ಮೀನಾಕ್ಷಿ ಹಾಗೂ ಸಹೋದರಿಯರಿಗೆ ಕೃತಜ್ಞತೆ ಸಲ್ಲಿಸಿದರು.


ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್. ಕೋಶಾಧಿಕಾರಿ ಹೆಚ್. ಎಲ್. ರಾವ್, ಸಂಘದ ಪದಾಧಿಕಾರಿಗಳಾದ ಪ್ರಸಿದ್ಧ, ಮೃದುಲಾ, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಯ ಆಚಾರ್, ವಿದ್ಯಾದಾಯಿನೀ ಪ್ರೌಢ ಶಾಲಾ ಮುಖ್ಯ ಶಿಕ್ಷಕ ವಸಂತ ಕುಮಾರ್, ಶಾಲಾ ಸಂಚಾಲಕಿ ಕಸ್ತೂರಿ. ಪಿ. ಮುಖ್ಯ ಶಿಕ್ಷಕಿ ಶಾಂತ ಹಾಗೂ ಅಧ್ಯಾಪಕ ವೃಂದ ದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top