ಸ್ಫೂರ್ತಿ ಸೆಲೆ: ನಾವು ಜೀವನದಲ್ಲಿ ಕಲಿತ ಪಾಠಗಳು

Upayuktha
0


ಹಲೋ, ಹೇಗಿದ್ದೀರಾ?

ಬದುಕು ನಮ್ಮ ಪಾಲಿಗೆ ಒಂದು ಶಾಲೆ ಇದ್ದಂತೆ. ನಾವು ಶಾಲೆಯಲ್ಲಿ ಕಲಿತ ಪಾಠಕ್ಕಿಂತ ಬದುಕಿನಲ್ಲಿ ಕಲಿತಿದ್ದೇ ಹೆಚ್ಚು.


ಬದುಕು ನಾವು ಅಂದುಕೊಂಡಷ್ಟು ಸರಳ ಇಲ್ಲ ಮತ್ತು ಜಟಿಲ ಕೂಡ ಅಲ್ಲ. ಎಲ್ಲೋ ಒಂದು ಕಡೆ ಓದಿದ ನೆನಪು. ಯಾವ ವಿಶ್ವ ವಿದ್ಯಾನಿಲಯ  ಕೂಡ ಕಲಿಸದ ಪಾಠವನ್ನು ಬಡತನ, ಹಸಿವು ಕಲಿಸುತ್ತವೆ. ಆದರೆ ಬದುಕಿನಲ್ಲಿ ನಮ್ಮ ಜೀವನದ ಅಂಗವಾಗಿ ಬರುವ ವ್ಯಕ್ತಿಗಳು ನಮಗೆ ಗೊತ್ತಿಲ್ಲದಂತೆ ಪಾಠ. ಕಲಿಸಿ ಹೋಗುತ್ತಾರೆ.


ಎಷ್ಟೋ ಸಾರಿ ನಾವೆಷ್ಟು ಪ್ರಾಮಾಣಿಕರಾಗಿ ಇರಬೇಕೆಂದು ಅಂದುಕೊಂಡರೂ, ನಮಗೆ ಸಮಯ ಸಾಧಕತನದ, ಇನ್ನೊಬ್ಬರನ್ನು ಯಾಮಾರಿಸಿ ಬದುಕುವ, ನಮಗೆ ಗೊತ್ತಿಲ್ಲದಂತೆ ನಮ್ಮನ್ನು ಚದುರಂಗದ ದಾಳವನ್ನಾಗಿ ಉಪಯೋಗಿಸುವ, ನಮಗೆ ಗೊತ್ತಿಲ್ಲದಂತೆ ಜೀವನ ಎಂಬ ಕ್ರಿಕೆಟ್ ಮೈದಾನದಲ್ಲಿ ನಮ್ಮನ್ನು ಔಟ್ ಮಾಡುವ ಜನರು ನಮಗೆ ಯಾವಾಗಲೂ ಅಲರ್ಟ್ ಆಗಿರುವ ಪಾಠವನ್ನು ಕಲಿಸಿ ಹೋಗುತ್ತಾರೆ.


ಆದರೆ ಕೆಲವೊಂದು ಸಾರಿ ನಾವೆಷ್ಟು ಬುದ್ಧಿವಂತರು ಎಂದುಕೊಂಡರೂ ನಮಗೆ ಗೊತ್ತಿಲ್ಲದೆ ಮೂರ್ಖರಾಗಿರುವುದು ಉಂಟು. ಕೆಲವೊಂದು ಪಾಠಗಳು ನಮಗೆ ನೋವಿನ ಪರಿಚಯ ಮಾಡಿಕೊಟ್ಟರೂ ನಮಗೆ ಹೇಗೆ ನೋವು ನುಂಗಿ ವಿಷಕಂಠರಾಗುವುದನ್ನು ಕಲಿಸಿ ಕೊಡುತ್ತವೆ. ಆದರೆ ಕೆಲವೊಂದು ಕಲಿತ ಪಾಠಗಳು  ನಮಗೆ ಜೀವನದಲ್ಲಿ ಹಣದ ಪ್ರಾಮುಖ್ಯತೆ, ಸಂಬಂಧಗಳ ಮುಖವಾಡವನ್ನು ಕಿತ್ತೆಸೆದು ನಮಗೆ ಗೊತ್ತಿಲ್ಲದಂತೆ ವಾಸ್ತವದ ಪರಿಚಯ ಮಾಡಿ ಕೊಡುತ್ತವೆ.


ಆದರೆ ಜೀವನದಲ್ಲಿ ಕಲಿತ ಪಾಠಗಳು ಜೀವನದಲ್ಲಿ ನಮ್ಮನ್ನು ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು ಎಂದು ಕೂಡ ಕಲಿಸುತ್ತವೆ. ಅವು ನಮಗೆ ಕಳಿಸಿ ಕೊಡುವ ಪಾಠ ಒಂದೇ, ಯಾರಿಗೆ ಯಾರೋ ಪುರಂದರ ವಿಠಲ. ನಿನ್ನ ಜೀವನಕ್ಕೆ ನೀನೆ ಹೊಣೆ.


ಬದುಕಿನಲ್ಲಿ ಇದ್ದಾಗ ಬಂದು ನೋಡದ ಜನ, ಸತ್ತಾಗ ಮುಖ ನೋಡಲು ಓಡೋಡಿ ಬರುವ ಜನ ನಮ್ಮ ಮೌಲ್ಯ ಎಷ್ಟು ಎಂದು ಪಾಠದ ಮೂಲಕ ಕಲಿ ಕೊಡುತ್ತಾರೆ.


ನಾವು ಕಲಿತ ಪಾಠಗಳು ನಮ್ಮನ್ನು ಬಲಿಷ್ಟರನ್ನಾಗಿ ಮಾಡಿದರೆ ನಾವು ಕಲಿತಿದ್ದಕ್ಕೂ ಸಾರ್ಥಕ. ಬದುಕೆಂಬ ಶಾಲೆಯಲ್ಲಿ ಒಬ್ಬೊಬ್ಬರಾಗಿ ಬರುವ ಟೀಚರ್ ಗಳು ನೋವು ಎಂಬ ಬೆತ್ತ ಹಿಡಿದುಕೊಂಡು ಬಂದು ನಮಗೆ ವಾಸ್ತವದ ಪಾಠ ಕಲಿಸಿ ಕೊಟ್ಟರೆ, ಕಷ್ಟ, ಅಪವಾದ ಎಂಬ ವಾರ್ನಿಂಗ್ ಬೆಲ್, ನಮ್ಮನ್ನು ಕ್ರಿಯಾಶೀಲವಾಗಿ ಇಡುತ್ತವೆ.


ಬನ್ನಿ ನಾವು ಕಲಿತ ಪಾಠಗಳಿಂದ ಬುದ್ಧಿ ಕಲಿಯೋಣ.  ಏನಂತೀರಾ...?


- ಗಾಯತ್ರಿ ಸುಂಕದ, ಬದಾಮಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top