ಮೂಡುಬಿದಿರೆ: ಮೂಡುಬಿದಿರೆಯ ರೋಟರಿ ವಿದ್ಯಾ ಸಂಸ್ಥೆಗಳಲ್ಲಿ ಶುಕ್ರವಾರ ವಾರ್ಷಿಕೋತ್ಸವದ ಸುಮಧುರ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬ್ಯಾಂಡ್ ಸೆಟ್ ಮತ್ತು ಪೂರ್ಣ ಕುಂಭಗಳೊಂದಿಗೆ ಅತಿಥಿಗಳನ್ನು ಆಹ್ವಾನಿಸಿ, ಸ್ವಾಗತ ನೃತ್ಯ ಪ್ರದರ್ಶನದೊಂದಿಗೆ ಆಗಮಿಸಿದ ಎಲ್ಲ ಅತಿಥಿ ಅಭ್ಯಾಗತರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಶಾಲೆಯ ವಿದ್ಯಾರ್ಥಿಗಳ ತಂಡದ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.
ರೋಟರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೋ: ಅನಂತ ಕೃಷ್ಣ ರಾವ್ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂದು ಸಂಸ್ಥೆಯ 45ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದೇವೆ. ನಮ್ಮ ಶಾಲೆಯೂ ನಿರಂತರವಾಗಿ ನೂರಕ್ಕೆ ನೂರು ಫಲಿತಾಂಶ ಗಳಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಎಲ್ಲಾ ಅಧ್ಯಾಪಕ ವೃಂದದವರನ್ನು ಅಭಿನಂದಿಸುತ್ತ ಅತಿಥಿಗಣ್ಯರನ್ನು ಸ್ವಾಗತಿಸಿದರು.
ನಂತರ ರೋಟರಿ ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತ ವೀರ್ ಜೈನ್ ಇವರು "2025-26"ನೇ ಸಾಲಿನ ಶಾಲಾ ಶೈಕ್ಷಣಿಕ ವರದಿಯನ್ನು ವಾಚಿಸಿದರು.
ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅವರ ಸಾಧನೆಯನ್ನು ಗುರುತಿಸಿ, ಪರಿಚಯಿಸಿ ಗೌರವಿಸಲಾಯಿತು. ನಮ್ಮ ಶಾಲೆಯ ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ ಮೋಹನ್ ಹೊಸ್ಮಾರ್ ಇವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಮೂಡಬಿದಿರೆ ಅಧ್ಯಕ್ಷ ನಾಗರಾಜ್ ಹೆಗ್ಡೆ ಇವರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯಿದು ಎನ್ನುತ್ತಾ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ವಾರ್ಷಿಕೋತ್ಸವ ಸಂಭ್ರಮಕ್ಕೆ ಶುಭ ಹಾರೈಸಿದರು.
ಹಾಗೆಯೇ ಕಾರ್ಯಕ್ರಮದಲ್ಲಿ 2024-25 ನೇ ಸಾಲಿನ SSLC ಯಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಪ್ರೌಢ ವಿಭಾಗದ ಶಿಕ್ಷಕಿ ನವೀನಾ ಇವರು ಪರಿಚಯಿಸಿದರು. ಹಾಗೆಯೇ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲೆಯ ಉತ್ತಮ NCC ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಸಹ ಈ ಸಂದರ್ಭದಲ್ಲಿ ವಿಶೇಷವಾಗಿ ಗುರುತಿಸಿ ಗೌರವಿಸಿದರು.
ಶಾಲೆಯಲ್ಲಿ ನಿರಂತರವಾಗಿ ಮಕ್ಕಳ ಶಿಕ್ಷಣ ಅಭಿವೃದ್ಧಿಗಾಗಿ ನಡೆಯುತ್ತಿರುವ ವಿಶೇಷ ತರಗತಿಯಾದ ಕ್ಲಾಸ್ ಸಾಥಿಯಲ್ಲಿ ಗಳಿಸಿದ ವಿಶೇಷ ಬಹುಮಾನವನ್ನು ಶಾಲಾ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್ ಇವರು ಸ್ವೀಕರಿಸಿದರು. ಹಾಗೆಯೇ ಕ್ಲಾಸ್ ಸಾಥಿ ತರಗತಿಯನ್ನು ಉತ್ತಮವಾಗಿ ನಡೆಸುತ್ತಿರುವ ರೇಖಾ ವೆಂಕಟೇಶ್, ಲೋನಾ, ಹಾಗೂ ಭಾರತಿ ಜಿ ಇವರಿಗೆ ಕ್ಲಾಸ್ ಸಾಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟ್ಯಾಗ್‌ಹೈವ್ ಸಂಸ್ಥೆಯ ಬೆಳವಣಿಗೆ ಮತ್ತು ಸಂಪರ್ಕ ವಿಭಾಗದ ನಿರ್ದೇಶಕ ರುದ್ರೇಶ್ ಲಕ್ಷ್ಮ ನಾಯಕ್ ಇವರು ಕ್ಲಾಸ್ ಸಾಥಿ ಮಕ್ಕಳಿಗೆ ಎಷ್ಟು ಮುಖ್ಯ ಮತ್ತು ಅದರ ಉಪಯೋಗ ತಿಳಿಸಿದರು. ಮತ್ತು ಕ್ಲಾಸ್ ಸಾಥಿ ತಂತ್ರಜ್ಞಾನವನ್ನು ರೋಟರಿ ಆಂಗ್ಲ ಮಾಧ್ಯಮ ಅತ್ಯುತ್ತಮ ವಾಗಿ ಬಳಸುತ್ತಿದ್ದೆ. ಹಾಗೂ ಮಕ್ಕಳು ಇದರ ಉಪಯೋಗ ಪಡೆಯುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಾಲೆಗೆ ದಾನಿಗಳಾದ ವಿದ್ಯಾರ್ಥಿ ಈಶಾನ್ವಿ, ಲಾಸ್ಯವಿ ಇವರ ಪೋಷಕರಾದ ಪ್ರಶಾಂತ್ ಇವರನ್ನು ಗೌರವಿಸಲಾಯಿತು. ಹಿ. ಪ್ರಾ ವಿಭಾಗದ ಶಿಕ್ಷಕಿ ರೂಪಾ ಇವರು ಮುಖ್ಯ ಅತಿಥಿಗಳಾದ ಉದಯ್ ಕುಮಾರ್ ಇರ್ವತ್ತೂರು ಇವರನ್ನು ಪರಿಚಯಿಸಿದರು.
ಉದಯ್ ಕುಮಾರ್ ಇವರು, ಭಾಷೆ ನಮ್ಮ ಹೃದಯದ ಹಾಡು ಭಾಷೆಗೆ ಮಧುರವಾದ ಹಿನ್ನೆಲೆಗಳಿವೆ. ನೆನಪಿನ ಬುತ್ತಿ ಕಟ್ಟಿ ಕೊಡುವುದು ಶಾಲಾ ದಿನಗಳು, ಹೆತ್ತವರಿಗೆ ಮತ್ತು ಶಾಲಾ ಅಧ್ಯಾಪಕರಿಗೆ ಇಂದು ವಿಶೇಷ ದಿನ. ಮಕ್ಕಳಲ್ಲಿ ಬುದ್ದಿ ವಿಕಸನ ಆಗುತ್ತಿದೆ. ಹೃದಯ ಶ್ರೀಮಂತಿಕೆ ಕಡಿಮೆಯಾಗುತ್ತಿದೆ. ನಾವು ಅದನ್ನು ಗಮನಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕೆಂದು ನುಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ವಿದ್ಯಾಸಂಸ್ಥೆಯ ಅಧ್ಯಕ್ಷ ನಾರಾಯಣ್ ಪಿ.ಎಂ ಇವರು, ಇಂದು ಶಾಲಾ ಮಕ್ಕಳ ದಿನ, ವಿದ್ಯಾರ್ಥಿಗಳು ಅಂಕಗಳಿಸುವುದು ಮಾತ್ರ ಶಿಕ್ಷಣವಲ್ಲ. ಆಟೋಟ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುವುದು ಒಂದು ಶಿಕ್ಷಣವೇ. ನಮ್ಮ ಶಾಲೆಯೂ ರಾಜ್ಯದಲ್ಲಿಯೇ ಅತ್ಯುತ್ತಮ ಶಾಲೆ ಎಂದು ಹೆಸರುವಾಸಿ ಆಗಿದೆ. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸಿ ಕಾಳಜಿ ವಹಿಸುತ್ತೇವೆ ಎಂದರು.
ನಂತರ ಎಲ್ಲಾ ಅತಿಥಿ ಅಭ್ಯಾಗತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶಾಲಾ ಸಂಚಾಲಕ ಪ್ರವೀಣ್ ಚಂದ್ರ ಜೈನ್, ಆರ್ ಪಿ. ಯು. ಸಿ & ಸಿಬಿಎಸ್ ಸಿ ಸಂಚಾಲಕ ಜೆ. ಡಬ್ಲೂ ಪಿಂಟೋ, ರೋಟರಿ ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತ ವೀರ್ ಜೈನ್, ಆರ್ ಪಿ ಯು ಸಿ ಪ್ರಾಂಶುಪಾಲ ರವಿ ಕುಮಾರ್, ರೋಟರಿ ಸೆಂಟ್ರಲ್ ಶಾಲೆಯ ಮುಖ್ಯೋಪಾಧ್ಯಾ ಯಿನಿ ಲಕ್ಷ್ಮಿ ಮರಾಠೆ, ಹಿರಿಯ ಸಂಯೋಜಕ ಗಜಾನನ ಮರಾಠೆ, ವಿವಿಧ ವಿಭಾಗದ ಸಂಯೋಜಕರಾದ ಪ್ರಫುಲ್ಲಾ, ಡೀಲನ್ ಮಸ್ಕರೇನಸ್, ಗಾಯಿತ್ರಿ, ವಿದ್ಯಾರ್ಥಿ ನಾಯಕರಾದ ಕುಮಾರಿ ಪ್ರಶ್ನಾ, ಕುಮಾರಿ ಧನ್ವಿ ಶೆಟ್ಟಿ, ವಿಖ್ಯಾತ್ ಪಿ ಶೆಟ್ಟಿ, ರೋಟರಿಯ ಸದಸ್ಯರಾದ ಕೆ ಆರ್ ಪಂಡಿತ್, ರವಿಪ್ರಸಾದ್ ಉಪಾಧ್ಯಾಯ,ಪ್ರಭಾಕರ್, ದಾಮೋದರ್ ಶೆಟ್ಟಿಗಾರ್, ಅಬ್ದುಲ್ ರೌಫ್, ಯತಿರಾಜ್ ಕುಮಾರ್, ಮೀನಾಕ್ಷಿ ನಾರಾಯಣ್, ಪೂರ್ಣಿಮಾ ದಾಮೋದರ್ ಶೆಟ್ಟಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ನೆರೆದ ಪ್ರೇಕ್ಷಕರನ್ನು ಮನೋರಂಜಿಸಿದರು. ರೋಟರಿ ಆಂಗ್ಲ ಮಾಧ್ಯಮದ ಆಡಳಿತ ಅಧಿಕಾರಿಗಳಾದ ಪ್ರಫುಲ್ ಡಿಸೋಜ ಇವರು ವಂದಾರ್ಪಣೆ ಮಾಡಿದರು. ಶಿಕ್ಷಕರಾದ ಪ್ರೇಮಲತಾ ಹಾಗೂ ವಿದೀಪ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


