ಮೂಡುಬಿದಿರೆ: ರೋಟರಿ ವಿದ್ಯಾ ಸಂಸ್ಥೆಗಳಲ್ಲಿ 45ನೇ ವಾರ್ಷಿಕೋತ್ಸವ

Upayuktha
0


ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಅಮರಾವತಿ ಸಭಾಂಗಣದಲ್ಲಿ ಅತ್ಯಂತ ಅದ್ದೂರಿಯಾಗಿ 2025-26 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಶುಕ್ರವಾರ (ಡಿ.12) ನಡೆಯಿತು. ಈ ಕಾರ್ಯಕ್ರಮದಲ್ಲಿ ಬ್ಯಾಂಡ್ ಸೆಟ್ ಮತ್ತು ಪೂರ್ಣ ಕುಂಭಗಳೊಂದಿಗೆ ಶಾಲಾ ಧ್ವಜವನ್ನು ಅರಳಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅದರೊಂದಿಗೆ ಕಲಾಕೃತಿಗಳ ದ್ವಾರ ಮಂಟಪ ಅನಾವರಣಗೊಳಿಸಲಾಯಿತು. 


ವಿದ್ಯಾರ್ಥಿಗಳ ಸುಮಧುರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ರೋಟರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೋ: ಅನಂತ ಕೃಷ್ಣ ರಾವ್ ಇವರು ಅತಿಥಿಗಳನ್ನು ಸ್ವಾಗತಿಸಿ. ಶಾಲೆಯ ಸ್ಥಾಪಕ ಅಧ್ಯಕ್ಷರಾದ ಅಮರನಾಥ್ ಶೆಟ್ಟಿಯವರ ಸುಂದರ ಕಲ್ಪನೆಯೊಂದಿಗೆ ಮೂಡಿಬಂದ ಸಂಸ್ಥೆಯೆ ರೋಟರಿ ವಿದ್ಯಾಸಂಸ್ಥೆ. ಶಿಕ್ಷಣ ಎಂಬುದರಿಂದ ಆತ್ಮಜ್ಯೋತಿ ಬೆಳಗಿಸಬೇಕು. ಮಕ್ಕಳಲ್ಲಿರುವ ಜ್ಞಾನ ಶಕ್ತಿಯನ್ನು ಪ್ರಜ್ವಲಿಸಬೇಕು ಎಂದರು.


ನಂತರ ದೀಪಬೆಳಗಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಬಳಿಕ ವಿವಿಧ ವಿಭಾಗದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.


ರೋಟರಿ ಶಾಲಾ ಪ್ರೌಢ ವಿಭಾಗದ ಶಿಕ್ಷಕಿ ವಿನಯಾ ಇವರು ಮುಖ್ಯ ಅತಿಥಿ, ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಅವರನ್ನು ಪರಿಚಯಿಸಿದರು. ಬಳಿಕ ಮಾತನಾಡಿದ ಮುಖ್ಯ ಅತಿಥಿಗಳು ಸಾಮಾಜಿಕವಾಗಿ, ಭೌತಿಕವಾಗಿ, ಶಾರೀರಿಕವಾಗಿ ನಮ್ಮನ್ನು ತೊಡಗಿಸಿಕೊಳ್ಳುವುದು ನಿಜವಾದ ಶಿಕ್ಷಣ. ಮಕ್ಕಳ ಮೇಲೆ ಸೂಕ್ಷ್ಮಗಮನ ಹರಿಸುವುದು ಅತಿ ಅಗತ್ಯ ಎಂದು ನುಡಿದರು.


ಮತ್ತೊಬ್ಬ ಅತಿಥಿ, ಮೂಡಬಿದಿರೆ ರೋಟರಿ ಕ್ಲಬ್‌ನ ಕಾರ್ಯದರ್ಶಿಗಳಾದ ಪವನ್ ಪೈ ಇವರು ಸಿಕ್ಕ ಅವಕಾಶಗಳನ್ನು ಉಪಯೋಗಿಸಿ ದಿಟ್ಟತನದಿಂದ ನ್ಯಾಯಯುತವಾಗಿ ಬದುಕಬೇಕೆಂದು ತಿಳಿಸಿದರು.


ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ನಾರಾಯಣ್ ಪಿ.ಎಂ ಅವರು ವಿದ್ಯಾಭ್ಯಾಸ ಅಲ್ಲದೆ ಎಲ್ಲಾ ರೀತಿಯ ಶಿಕ್ಷಣಗಳು ಹಾಗೂ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ರೋಟರಿ ವಿದ್ಯಾಸಂಸ್ಥೆಯು ಮಾರ್ಗದರ್ಶನ ನೀಡುತ್ತಿದೆ ಎಂದರು.


ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್, ಆರ್ ಪಿಯುಸಿ ಮತ್ತು ಸಿಬಿಎಸ್‌ಸಿ ಸಂಚಾಲಕ ಜೆ. ಡಬ್ಲೂ ಪಿಂಟೋ, ರೋಟರಿ ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯಿನಿ ಲಕಾ ಅನಂತ ವೀರ್ ಜೈನ್ ಆರ್, ಪಿಯುಸಿ ಪ್ರಾಂಶುಪಾಲ ರವಿ ಕುಮಾರ್, ರೋಟರಿ ಸೆಂಟ್ರಲ್ ಶಾಲೆಯ  ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಮರಾಠೆ, ಹಿರಿಯ ಸಂಯೋಜಕ ಗಜಾನನ ಮರಾಠೆ, ವಿವಿಧ ವಿಭಾಗದ ಸಂಯೋಜಕರಾದ ಪ್ರಫುಲ್ಲಾ, ಡೀಲನ್ ಮಸ್ಕರೇನಸ್, ಗಾಯಿತ್ರಿ, ವಿದ್ಯಾರ್ಥಿ ನಾಯಕರಾದ ಕುಮಾರಿ ಪ್ರಶ್ನಾ, ಕುಮಾರಿ ಧನ್ವಿ ಶೆಟ್ಟಿ, ವಿಖ್ಯಾತ್ ಪಿ ಶೆಟ್ಟಿ ಉಪಸ್ಥಿತರಿದ್ದರು.


ಅಬ್ದುಲ್ ರೌಫ್, ನಾಗರಾಜ್ ಪಿ.ಎಂ, ಎ ಎಂ ಕುಮಾರ್, ಪ್ರಭಾಕರ, ಪಿ. ಕೆ ಥೋಮಸ್, ಸಹನಾ ನಾಗರಾಜ್, ಇನ್ನರ್ ವೀಲ್ ಅಧ್ಯಕ್ಷೆ ಶ್ವೇತಾ ಜೈನ್, ಇನ್ನರ್ ವೀಲ್ ಸದಸ್ಯರಾದ ಶೋಭಾ ಸಿಕ್ವೆರಾ, ವೀಣಾ ರತ್ನರಾಜ್ ಅವರು ವಿವಿಧ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.


ಆಗಮಿಸಿದ ಎಲ್ಲಾ ಅತಿಥಿ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆರ್ ಪಿ ಯು ಸಿ & ಸಿಬಿಎಸ್ಸಿ ಸಂಚಾಲಕ ಜೆ ಡಬ್ಲೂ ಪಿಂಟೋ ಇವರು ವಂದನಾರ್ಪಣೆ ಮಾಡಿದರು. ಶಿಕ್ಷಕಿಯರಾದ ಗಾಯತ್ರಿ ಮತ್ತು ಪ್ರಣಾಮಿ ಕಾರ್ಯಕ್ರಮದ ನಿರೂಪಣೆಗೈದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
To Top