ಸ.ಪ್ರ.ದ ಕಾಲೇಜು ಪುಂಜಾಲಕಟ್ಟೆಯಲ್ಲಿ “ಮೇಕ್ ಅಂಡ್ ಗ್ರ್ಯಾಬ್ ದ ಮಾರ್ಕೆಟ್”

Upayuktha
0


ಪುಂಜಾಲಕಟ್ಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪುಂಜಾಲಕಟ್ಟೆ ಇದರ ಐಕ್ಯೂಎಸಿ, ಇನ್ಸ್‌ಟಿಟ್ಯೂಷನ್ಸ್ ಇನೋವೇಷನ್ ಕೌನ್ಸಿಲ್, ವಿದ್ಯಾರ್ಥಿ ಪ್ರತಿಭಾ ವೇದಿಕೆ ಹಾಗೂ ಉದ್ಯಮಶೀಲತೆ ಅಭಿವೃದ್ಧಿ ಕೋಶದ ಸಂಯುಕ್ತ ಆಶ್ರಯದಲ್ಲಿ “ಮೇಕ್ ಅಂಡ್ ಗ್ರ್ಯಾಬ್ ದ ಮಾರ್ಕೆಟ್” ಎಂಬ ವಿಶಿಷ್ಟ ಮಾರುಕಟ್ಟೆ ಚಟುವಟಿಕೆ ಇಂದು (ಡಿ.17) ಕಾಲೇಜು ಆವರಣದಲ್ಲಿ ಜರುಗಿತು.


ಕಾರ್ಯಕ್ರಮದ ಉದ್ಘಾಟನೆ: 

ಕಾರ್ಯಕ್ರಮವನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಆಚಾರ್ಯ ಉದ್ಘಾಟಿಸಿದರು; ಪ್ರಾಂಶುಪಾಲರಾದ ಪ್ರೊ. ಮಾಧವ ಅಧ್ಯಕ್ಷತೆ ವಹಿಸಿ, ಉದ್ಯಮಶೀಲತೆ, ಹೊಸತನ ಮತ್ತು ತಂಡ ಸಹಭಾಗಿತ್ವದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಪ್ರೋತ್ಸಾದಾಯಕ ನುಡಿಗಳನ್ನು ಆಡಿದರು‌. 


ಮೇಳದ ವೈಶಿಷ್ಟ್ಯಗಳು:

ಒಟ್ಟು ಆರು ಸ್ಟಾಲ್‌ಗಳಲ್ಲಿ ವಿದ್ಯಾರ್ಥಿಗಳೇ ಸ್ವತಃ ತಯಾರಿಸಿದ ಸೃಜನಾತ್ಮಕ ಆಹಾರ ಪದಾರ್ಥಗಳು, ಕರಕುಶಲ ವಸ್ತುಗಳು, ಪರಿಸರ ಸ್ನೇಹಿ ಉತ್ಪನ್ನಗಳು ಹಾಗೂ ಮನರಂಜಕ ಆಟಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.


ಪ್ರತಿ ಸ್ಟಾಲ್‌ನಲ್ಲಿ ವಿದ್ಯಾರ್ಥಿಗಳ ನಾವೀನ್ಯತೆ, ಗ್ರಾಹಕ ಸಂಪರ್ಕ ಕೌಶಲ್ಯ ಹಾಗೂ ಮಾರುಕಟ್ಟೆ ನಿರ್ವಹಣಾ ಸಾಮರ್ಥ್ಯಗಳು ಸ್ಪಷ್ಟವಾಗಿ ಪ್ರದರ್ಶಿತವಾಗಿದ್ದು, ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಯಿತು.


ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಗ್ರಾಹಕರಾಗಿ ಸಕ್ರಿಯವಾಗಿ ಭಾಗವಹಿಸಿ ವಿವಿಧ ಸ್ಟಾಲ್‌ಗಳಲ್ಲಿ ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.


ಸ್ಟಾಲ್‌ಗಳಲ್ಲಿನ ಉದ್ಯಮ ಮಾದರಿಗಳು ಹಾಗೂ ಆಕರ್ಷಕ ಮಾರಾಟ ತಂತ್ರಗಳನ್ನು ನೋಡಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದು, ಇಂತಹ ಚಟುವಟಿಕೆಗಳು ಭವಿಷ್ಯದ ಉದ್ಯಮಿಗಳಿಗೆ ದಾರಿದೀಪವಾಗುತ್ತವೆ ಎಂದು ಅಭಿಪ್ರಾಯಪಟ್ಟರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top