ಮಂಗಳೂರು: ಸ್ಥಳೀಯ ನಾಟೇಕಲ್ಲಿನಲ್ಲಿ ನೂತನವಾಗಿ ಪ್ರಾರಂಭವಾದ ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಥಮ ಬಿ ಎ ಎಂ ಎಸ್ ಪದವಿ ತರಗತಿಗಳ ಪ್ರಾರಂಭೋತ್ಸವದ ಉದ್ಘಾಟನೆಯು ಗುರುವಾರ (ಡಿ.4) ವಿಧ್ಯುಕ್ತವಾಗಿ ಶಿಷ್ಯ ಉಪನಯನ ಕಾರ್ಯಕ್ರಮ ಸಹಿತವಾಗಿ ನೆರವೇರಿತು.
ಮಂಗಳೂರಿನ ಐಪಿಎಸ್ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಉದ್ಘಾಟನೆ ಮಾಡಿ ಆಯುರ್ವೇದದ ಪ್ರಾಧಾನ್ಯತೆ ಮತ್ತು ಶಿಸ್ತುಬದ್ಧ ಕಲಿಕೆಯ ಬಗ್ಗೆ ಮಾತನಾಡಿದರು.
ಇದರೊಂದಿಗೆ ಕಾಲೇಜಿಗೆ NABH ಮಾನ್ಯತೆ ದೊರಕಿದ್ದು ಇದರ ಉದ್ಘಾಟನೆಯನ್ನು ರಾಜೀವ ಗಾಂಧಿ ಅರೋಗ್ಯ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಅರ್ಜುನ್ ಎಸ್ ಒಡೆಯರ್ ಅವರು ಮಾಡುತ್ತ ವಿದ್ಯಾರ್ಥಿಗಳು ಕಲಿಕೆಯ ಸಮಯದ ಸದುಪಯೋಗ ಪಡಿಸುವ ಬಗ್ಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ರಾಜೀವ ಗಾಂಧಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಅಲೀಡ್ ಹೆಲ್ತ್ ಕೇರ್ ಅಧ್ಯಕ್ಷ ಡಾ ಇಫ್ಟಿಕರ್ ಫರೀದ್ ರವರು ಕಣಚೂರ್ ವಿದ್ಯಾ ಸಂಸ್ಥೆಯ ಹಿರಿಮೆ ಗರಿಮೆಗಳನ್ನು ಕೊಂಡಾಡುತ್ತ ಚೇರ್ಮನ್ ಡಾ ಹಾಜಿ ಯು ಕೆ ಮೋನು ಅವರ ಗುಣಗಾನ ಮಾಡಿದರು.
ಸಂಸ್ಥೆಯ ನಿರ್ದೇಶಕ ಅಬ್ದುಲ್ ರೆಹಮಾನ್ ಅವರು ಸ್ವಾಗತ ಭಾಷಣ ಮಾಡಿದರು ಮತ್ತು ಪ್ರಾಚಾರ್ಯರಾದ ಡಾ ವಿದ್ಯಾ ಪ್ರಭಾ ಅವರು ಸಂಸ್ಥೆಯ ಪಕ್ಷಿನೋಟ ಬೀರಿದರು.
ನೂತನ ವಿದ್ಯಾರ್ಥಿಗಳು ಧನ್ವಂತರಿ ದೇವರಿಗೆ ಪುಷ್ಪ ಅರ್ಚನೆ ಮಾಡಿ ಅನಂತರ ವಚ ಎಂಬ ಗಿಡಮೂಲಿಕೆ ಸಹಿತದ ಹಳದಿ ದಾರವನ್ನು ಅತಿಥಿಗಳ ಮೂಲಕ ಕಟ್ಟಿಸಿ ಪ್ರಮಾಣ ವಚನ ಮಾಡಿದರು.
ವೈದ್ಯಕೀಯದ ಮಹತ್ವ ಸಾರುವ ಸ್ವರಚಿತ ಗಜಲ್ ವಾಚಿಸಿದ ವೈದ್ಯಕೀಯ ಸಲಹೆಗಾರ ಡಾ ಸುರೇಶ ನೆಗಳಗುಳಿ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಸಮಾರಂಭ ಸಂಪನ್ನವಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



