ಉಡುಪಿ: "ಕಾಲೇಜಿನ ವಾಷಿ೯ಕ ಸಂಚಿಕೆಗಳಿಗೆ ಜೀವಂತಿಕೆ ಇದೆ; ಭಾವನಾತ್ಮಕ ಸಂಬಂಧಗಳನ್ನು ರೂಪಿಸುವ ಹೊತ್ತಿಗೆವೂ ಹೌದು.ಕಾಲೇಜಿನ ಸರ್ವಾಂಗೀಣ ಚಟುವಟಿಕೆಗಳನ್ನು ದಾಖಲಿಸುವುದರ ಜೊತೆಗೆ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳನ್ನು ಪ್ರತಿಫಲಿಸುವ ದರ್ಪಣವೆಂದರೆ ಕಾಲೇಜು ವಾಷಿ೯ಕ ಸಂಚಿಕೆಗಳು; ಈ ನಿಟ್ಟಿನಲ್ಲಿ ಉಡುಪಿ ಎಂಜಿಎಂ.ಸಂಧ್ಯಾ ಕಾಲೇಜಿನ ವಾರ್ಷಿಕ ಸಂಚಿಕೆ ಸಾರಥಿ ಅತ್ಯುತ್ತಮ ಕೃತಿಯಾಗಿ ಮೂಡಿ ಬಂದಿದೆ" ಎಂದು ಎಂಜಿಎಂ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.
ಇವರು ಟಿ. ಮೇೂಹನದಾಸ್ ಪೈ ಸ್ಮಾರಕ ಅಮೃತ ಸೌಧ ಸಭಾಂಗಣದಲ್ಲಿ ಹಮ್ಮಿಕೊಂಡ ಎಂಜಿಎಂ. ಸಂಧ್ಯಾ ಕಾಲೇಜಿನ ವಾಷಿ೯ಕ ಸಂಚಿಕೆ ಸಾರಥಿ ಲೇೂಕಾಪ೯ಣೆಗೊಳಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ದೇವಿದಾಸ್ ಎಸ್.ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂಜಿಎಂ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಂ.ವಿಶ್ವನಾಥ ಪೈ, ವಾಣಿಜ್ಯ ಶಾಸ್ತ್ರ ವಿಭಾಗದ ಸಂಯೇೂಜಕಿ ಡಾ. ಮಲ್ಲಿಕಾ ಎ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಕೃತಿಕಾ.ಪಿ. ಶೆಣೈ ಸ್ವಾಗತಿಸಿ, ಸಂಪಾದಕೀಯ ಮಂಡಳಿ ಉಪನ್ಯಾಸಕಿ ಕು.ದೀಪಿಕಾ ಸಂಚಿಕೆಯ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿದ್ಯಾರ್ಥಿ ಪ್ರತಿನಿಧಿ ಭಾಗ೯ವ ಅತಿಥಿ ಪರಿಚಯ ನೀಡಿದರು. ಉಪನ್ಯಾಸಕ ಮೊಹಮ್ಮದ್ ಯಾಸೀನ್ ಮನ್ನಾ ವಂದಿಸಿದರು. ಶ್ರೀಕರ ಟಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




