ಸಾಮಾಜಿಕ ಪರಿಸ್ಥಿತಿ: ಬಾಲ್ಯ ವಿವಾಹದ ಉದ್ದೇಶ ಇದಾಗಿತ್ತಾ?

Upayuktha
0

‎ನಮ್ಮ ಪೂರ್ವಜರು ಅನುಸರಿಸಿ ಆಚರಿಸುತ್ತಿದ್ದ ಪ್ರತಿಯೊಂದು ಆಚರಣೆಗಳು ಅವುಗಳದ್ದೆ ಆದ ಉದ್ದೇಶ ಮತ್ತು ಮಹತ್ವವನ್ನು ಹೊಂದಿವೆ. ಯಾವುದನ್ನೂ ಬೂಟಾಟಿಕೆಗೆ ಮಾಡಿದ್ದಲ್ಲ. ಅಂತಹ ಆಚರಣೆಗಳಲ್ಲಿ ಒಂದು ಈ ಬಾಲ್ಯ ವಿವಾಹ ಪದ್ಧತಿ. ಈ ಪದ್ದತಿಯ ಉದ್ದೇಶ ಕೂಡ ಒಳ್ಳೆಯದೇ ಆಗಿತ್ತು ಎಂದರೆ ನಂಬಲೇ ಬೇಕು.


‎ನಮ್ಮ ಪೂರ್ವಜರು ಪೂಜೆ ಪುನಸ್ಕಾರ, ಆಚಾರ, ನಡುವಳಿಕೆ ಎಲ್ಲಾ ವಿಚಾರದಲ್ಲಿ ನೈರ್ಮಲ್ಯ ಮತ್ತು ಪಾವಿತ್ರತೆಗೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದರು. ಅದರಂತೆಯೇ, ಪ್ರತಿಯೊಬ್ಬ ಸ್ತ್ರೀ ಅಥವಾ ಪುರುಷನಿಗೆ ವಿವಾಹ ಪೂರ್ವದಲ್ಲಿ ಅವರ ದೈಹಿಕ ಮತ್ತು ಮಾನಸಿಕ ಪಾವಿತ್ರತೆ ತುಂಬಾ ಮುಖ್ಯ ಎಂದು ನಂಬಿದ್ದರು. ಆದ್ದರಿಂದ ಮಕ್ಕಳಿಗೆ ಲೈಂಗಿಕ ಜ್ಞಾನ ಬೆಳೆಯುವ ಮೊದಲು ಅವರಿಗೆ ದಾಂಪತ್ಯ ಜೀವನ ಕಟ್ಟಿ ಕೊಡುವ ಯೋಚನೆ ಮಾಡಿ ಬಹು ಬೇಗನೆ ವಿವಾಹ ಮಾಡುವ ಮೂಲಕ ಸ್ತ್ರೀ ಪುರುಷರಲ್ಲಿನ ಪಾವಿತ್ರ್ಯ ಮತ್ತು ಮನಸ್ಸಿನ ನೈರ್ಮಲ್ಯ ಕಾಪಾಡುವ ಕೆಲಸ ಮಾಡುತ್ತಿದ್ದರು. ಕಾರಣ ಮದುವೆಗೆ ಮುಂಚೆ ಸ್ತ್ರೀ ಅಥವಾ ಪುರುಷ ಪರ ಸ್ತ್ರೀಯರ ಸಂಗ ಮಾಡಬಾರದು ಎಂದು. ಅವನ ಅಥವಾ ಅವಳ ಬುದ್ಧಿ ಬೆಳವಣಿಗೆ ಆಗುವ ಮೊದಲು ಅವರಿಗೆ ವಿವಾಹ ಮಾಡುವುದರಿಂದ ಅವರಿಬ್ಬರಲ್ಲಿ ತಾವು ದಂಪತಿಗಳು ಎಂಬ ಭಾವ ಚಿಕ್ಕಂದಿನಿಂದಲೇ ಮೂಡುವುದರಿಂದ ಅವರು ಪರ ಸಂಗ ಮಾಡುವ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ. ಅವರಲ್ಲಿ ಪವಿತ್ರತೆ ನೆಲೆಸುತ್ತದೆ.


‎ಮಕ್ಕಳಿಗೆ ಬುದ್ಧಿ ಬೆಳವಣಿಗೆ ಆಗುವ ಮೊದಲು ವಿವಾಹ ಪೂರೈಸದೆ ಇದ್ದರೆ, ಅವನು ಅಥವಾ ಅವಳು ಇನ್ನೊಬ್ಬರ ಸಂಗ ಮಾಡುವ ಮೂಲಕ ಮಾನಸಿಕ ಮತ್ತು ಶಾರೀರಿಕ ಪವಿತ್ರತೆಯನ್ನು ಹಾಳು ಮಾಡಿಕೊಳ್ಳಬಹುದು. ಪ್ರತಿಯೊಬ್ಬ ಸ್ತ್ರೀ ಅಥವಾ ಪುರುಷರ ಮನಸ್ಸು ಮತ್ತು ದೈಹಿಕ ಸುಖ ಎನ್ನುವಂತದ್ದು ಅವನ ಪತಿಗೆ ಮಾತ್ರ ಸೀಮಿತವಾಗಬೇಕು ಬದಲಾಗಿ ಆ ಪ್ರೀತಿ ಸುಖ ಹಂಚುವಂತೆ ಆಗಬಾರದು ಎನ್ನುವುದು ಅವರ ಉದ್ದೇಶವಾಗಿತ್ತು. ಇದು ವೈಜ್ಞಾನಿಕ ದೃಷ್ಟಿಕೋನದಲ್ಲಿ ಸರಿ ಹೊಂದದ ನಿರ್ಧಾರವಾದರೂ ಒಂದು ಹಂತದಲ್ಲಿ ಸರಿ ಒಳ್ಳೆಯದೇ ಅನಿಸುತ್ತದೆ.

‎ಪ್ರಸ್ತುತ ದಿನದಲ್ಲಿ ಬಹುತೇಕರು ವಿವಾಹ ಪೂರ್ವದಲ್ಲಿ ಪ್ರೀತಿ ಪ್ರೇಮದ ಸುಳಿಗೆ ಸಿಲುಕಿ, ಮಾನಸಿಕ ಮತ್ತು ದೈಹಿಕ ಸ್ವಾಸ್ತ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಬುದ್ಧಿ ಬೆಳವಣಿಗೆ ಆಗಿ ಲೈಂಗಿಕ ಜ್ಞಾನ ಬೆಳೆವಣಿಗೆಯಾಗುತ್ತಿದ್ದಂತೆ, ಹಲವಾರು ಪುರುಷರ ಸ್ತ್ರೀಯರ ವ್ಯಾಮೋಹಕ್ಕೆ ಸಿಲುಕಿ, ಯಾರನ್ನೋ ಪ್ರೀತಿಸಿ ಇನ್ಯಾರನ್ನೋ ವಿವಾಹವಾಗುವ ದೃಶ್ಯಗಳು ಪ್ರತಿನಿತ್ಯ ನಮ್ಮ ಕಣ್ಣಿಗೆ ಬೀಳುತ್ತಿವೆ. ನಮ್ಮ ಪೂರ್ವಜರ ಪ್ರಕಾರ ಇದು ಅನೈರ್ಮಲ್ಯತೆ. ಹೀಗಾಗಬಾರದು ಎನ್ನುವ ಉದ್ದೇಶದಿಂದ ಪೂರ್ವಜರು ಬಾಲ್ಯ ವಿವಾಹ ಎನ್ನುವ ಪದ್ಧತಿಯನ್ನು ಆಚರಿಸುತ್ತಿದ್ದರು.ವೈಜ್ಞಾನಿಕ ದೃಷ್ಟಿಕೋನದಲ್ಲಿ ಅದು ಸರಿಯಲ್ಲದಿದ್ದರು, ಒಂದು ಒಳ್ಳೆಯ ನಂಬಿಕೆ ಎಂದು ಹೇಳಬಹುದು.

- ‎ಹನುಮಂತ ಎಸ್ ಕೆ. ರಾಯಚೂರು.

‎ಪತ್ರಿಕೋದ್ಯಮ ವಿದ್ಯಾರ್ಥಿ,

ವಿವೇಕಾನಂದ ಕಾಲೇಜು ಪುತ್ತೂರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top