ಬೆಂಗಳೂರು: ವಿಶ್ವ ಆಯುರ್ವೇದ ಸಮ್ಮೇಳನದ ಕೊನೆಯ ದಿನವಾದ ಇಂದು ವಾಗ್ಮಿ ಕೆ.ಪಿ. ಪುತ್ತೂರಾಯ ಅವರು ಮಾತನಾಡಿ, ಪ್ರಕೃತಿ ನಮ್ಮನ್ನು ಬಿಟ್ಟಿರಬಹುದು. ಆದರೆ ನಾವು ಪ್ರಕೃತಿಯನ್ನು ಬಿಟ್ಟಿರಲಾಗದು. ಆಯುರ್ವೇದ ಪ್ರಕೃತಿಯನ್ನು ಅವಲಂಬಿಸಿದ್ದು, ಪ್ರಕೃತಿಯಲ್ಲಿ ಸಹಜವಾಗಿ ಸಿಗುವ ಔಷಧಗಳನ್ನೇ ಬಳಸಿ ಆರೋಗ್ಯ ಪೂರ್ಣ ಜೀವನ ನೀಡುವುದು ಆಯುರ್ವೇದದ ಹೆಚ್ಚುಗಾರಿಕೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ. ಅಶ್ವಥ್ ನಾರಾಯಣ್ ಸಿ.ಎನ್ ಮಾತನಾಡಿ, ಆಯುರ್ವೇದ ವಿಶ್ವ ಸಮ್ಮೇಳನ ಸರ್ಕಾರ ಮಾಡಬೇಕಾದ ಕಾರ್ಯ. ಇಂತಹ ಬೃಹತ್ ಕಾರ್ಯಕ್ರಮವನ್ನು ಡಾ. ಗಿರಿಧರ ಕಜೆಯವರು ವೈಯಕ್ತಿಕವಾಗಿ ಆಯೋಜಿಸಿರುವುದು ಶ್ಲಾಘನೀಯ. ನಾವು ಪದೇಪದೇ ಏನನ್ನು ಕೇಳುತ್ತೇವೆಯೋ ಅದು ಸರಿಯಾಗಿ ಮನದಟ್ಟಾಗುತ್ತದೆ. ಹಾಗಾಗಿ ಶಾಲಾ ದಿನಗಳಲ್ಲಿಯೇ ಆರೋಗ್ಯದ ವಿಚಾರಗಳನ್ನು ಕಲಿಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ನಮ್ಮ ಊಟದ ತಟ್ಟೆ ಆರೋಗ್ಯ ಪೂರ್ಣವಾದಾಗ ದೇಶ ಆರೋಗ್ಯ ಪೂರ್ಣವಾಗಲು ಸಾಧ್ಯ. ಇಂದು ನಾವೇನನ್ನು ಬೆಳೆಯುತ್ತೇವೆಯೋ ಅದನ್ನು ತಿನ್ನುತ್ತಿದ್ದೇವೆ. ಆದರೆ ನಾವು ಆರೋಗ್ಯ ಪೂರ್ಣವಾದ ಯಾವ ಆಹಾರವನ್ನು ತಿನ್ನಬೇಕೋ, ಅದನ್ನೇ ನಾವು ಬೆಳೆಯುವಂತಾದಾಗ ಸಮಾಜ ಸ್ವಸ್ಥವಾಗುತ್ತದೆ ಎಂದರು.
ರಾಜ್ಯ ಮಾಹಿತಿ ಆಯುಕ್ತರಾದ ಡಾ. ಮಹೇಶ್ ವಾಲ್ವೇಕರ್ ಮಾತನಾಡಿ, ಇಂದು ಆಯುರ್ವೇದದ ಪ್ರಭಾವ ಬೆಳೆಯುತ್ತಿದ್ದು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯುರ್ವೇದದ ಕುರಿತಾದ ಆಸಕ್ತಿ ಹೆಚ್ಚುತ್ತಿದೆ. ನಾವು ಆಯುರ್ವೇದ ವೈದ್ಯರು ಹಾಗೂ ವಿದ್ಯಾರ್ಥಿಗಳು ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆ ಮಾಡುವ ಮೂಲಕ ಭಾರತ ವಿಶ್ವಗುರುವಾಗಲು ನಮ್ಮ ಪಾತ್ರವನ್ನು ನಿರ್ವಹಿಸೋಣ ಎಂದು ಕರೆ ನೀಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

