ಮುಂಬಯಿ: JSW ಸ್ಪೋರ್ಟ್ಸ್ ಬೆಂಬಲಿತ ಹರಿಯಾಣ ಸ್ಟೀಲರ್ಸ್ ಅಕಾಡೆಮಿಯನ್ನು ರೋಹ್ತಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಗಿದೆ. ಭಾರತದ ಮುಂದಿನ ತಲೆಮಾರಿನ ಕಬಡ್ಡಿ ಪ್ರತಿಭಾವಂತರನ್ನು ಬೆಳೆಸಲು ಸಮರ್ಪಿತವಾಗಿರುವ ಈ ಆಧುನಿಕ ಸೌಲಭ್ಯ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ವಾತಾವರಣವನ್ನು ಒದಗಿಸಲು ಸಿದ್ಧವಾಗಿದೆ.
ಅಕಾಡೆಮಿಯಲ್ಲಿ ವಿವಿಧ ಟ್ರಯಲ್‌ಗಳು ಮತ್ತು ಟೂರ್ನಮೆಂಟ್‌ಗಳ ಮೂಲಕ ದೇಶದಾದ್ಯಂತ ಆಯ್ಕೆಗೊಂಡ 17 ರಿಂದ 22 ವರ್ಷದ 30 ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಸೇರಿಸಲಾಗಿದೆ. JSW ಸ್ಪೋರ್ಟ್ಸ್‌ನ ವೃತ್ತಿಪರ ಕಬಡ್ಡಿ ತಂಡ ಹಾಗೂ 2024ರ PKL-11 ಚಾಂಪಿಯನ್ ಆಗಿರುವ ಹರಿಯಾಣ ಸ್ಟೀಲರ್ಸ್ ತಂಡದ ಮಾರ್ಗದರ್ಶನದಲ್ಲಿ ಈ ಯುವ ಪ್ರತಿಭೆಗಳು ತರಬೇತಿ ಪಡೆಯಲಿವೆ. ಜೊತೆಗೆ, PKL ಯುವ ಯೋಜನೆಯಲ್ಲಿ ಒಳಗೊಂಡಿರುವ ಆಟಗಾರರೊಂದಿಗೆ, ಕಬಡ್ಡಿಯಲ್ಲಿ ದೀರ್ಘಕಾಲಿಕ ವೃತ್ತಿಜೀವನ ನಿರ್ಮಿಸಲು JSW ಯುವ ಆಟಗಾರರ ಅಭಿವೃದ್ದಿ ಕಾರ್ಯಕ್ರಮವೂ ಸಹಕಾರಿಯಾಗಲಿದೆ.
ಕ್ರೀಡಾಪಟುಗಳಿಗೆ ಟ್ಯೂಷನ್, ವಸತಿ, ಪೌಷ್ಟಿಕ ಆಹಾರ ಹಾಗೂ ಉನ್ನತ ಮಟ್ಟದ ಕ್ರೀಡಾ ತರಬೇತಿಯನ್ನು ಒಳಗೊಂಡ ಪೂರ್ಣ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಇದೇ ವೇಳೆ, ಹರಿಯಾಣ ಸ್ಟೀಲರ್ಸ್ ತಂಡದ ಹೆಸರಿನಲ್ಲಿ ವರ್ಷಪೂರ್ತಿ ನಡೆಯುವ ಹಳ್ಳಿಮಟ್ಟದ ಟೂರ್ನಮೆಂಟ್‌ಗಳಲ್ಲಿ ಸ್ಪರ್ಧಾತ್ಮಕ ಅನುಭವ ಪಡೆಯುವ ಅವಕಾಶವೂ ಲಭ್ಯವಾಗಲಿದೆ.
ಅಕಾಡೆಮಿ ಉದ್ಘಾಟನೆಯ ಕುರಿತು ಮಾತನಾಡಿದ ಹರಿಯಾಣ ಸ್ಟೀಲರ್ಸ್ ಮತ್ತು JSW Sportsನ CEO ದಿವ್ಯಾಂಶ್ ಸಿಂಗ್ “ಹರಿಯಾಣದಲ್ಲಿ ಹರಿಯಾಣ ಸ್ಟೀಲರ್ಸ್ ಅಕಾಡೆಮಿಯನ್ನು ಆರಂಭಿಸುವುದು ನಮಗೆ ಹೆಮ್ಮೆಯ ಕ್ಷಣ. ಭಾರತಕ್ಕೆ ಕಬಡ್ಡಿ ಆಟಗಾರರನ್ನು ಒದಗಿಸುವ ಪ್ರಮುಖ ಪ್ರತಿಭಾ ಕೇಂದ್ರವಾಗಿ ಈ ಅಕಾಡೆಮಿ ರೂಪುಗೊಳ್ಳಲಿದೆ ಎಂಬ ನಂಬಿಕೆ ಹೊಂದಿದ್ದೇವೆ ಎಂದರು.
ಅಕಾಡೆಮಿ ಕುರಿತು ಮಾತನಾಡಿದ ಹರಿಯಾಣ ಸ್ಟೀಲರ್ಸ್ ತಂಡದ ಮುಖ್ಯ ಕೋಚ್ ಮನ್‌ಪ್ರೀತ್ ಸಿಂಗ್ “ಈ ಅಕಾಡೆಮಿ ಹರಿಯಾಣ ಮತ್ತು ದೇಶದಾದ್ಯಂತ ಕಬಡ್ಡಿಗೆ ಹೊಸ ದಿಕ್ಕನ್ನು ತೋರಲಿದೆ. ಕಿರಿಯ ವಯಸ್ಸಿನಲ್ಲೇ ವಿಶ್ವಮಟ್ಟದ ಸೌಲಭ್ಯ ಮತ್ತು ತರಬೇತಿ ದೊರಕುವುದರಿಂದ ಆಟಗಾರರು ಸಮಗ್ರ ಹಾಗೂ ಶಕ್ತಿಶಾಲಿ ಕ್ರೀಡಾಪಟುಗಳಾಗಿ ಬೆಳೆವಂತೆ ಇದು ಸಹಕಾರಿಯಾಗುತ್ತದೆ ಎಂದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


