ಅಜ್ಞಾನಿ, ಬುದ್ಧಿ ಸ್ವಲ್ಪ ಕಡಿಮೆ ಇದ್ದವರು ತಪ್ಪೆಸಗಿದರೆ ಅಂಥವರನ್ನು ಕ್ಷಮಿಸಬಹುದು. ಆದರೆ ಅಹಂಕಾರದಿಂದ, ಗರ್ವದಿಂದ, ನಾನೇ ಎನ್ನುವ ನಿಲುವಿನಿಂದ, ಬೇಕು ಎಂದೇ ಈ ರೀತಿ ಮಾಡಿದೆ ಎಂದು ಅಧಟುತನದಿಂದ ನುಡಿದರೆ ಅದಕ್ಕೆ ಕ್ಷಮೆಯಿಲ್ಲ. ಕ್ಷಮಿಸಲೂ ಬಾರದು. ಆಂಥವರಿಗೆ ಪಶ್ಚಾತ್ತಾಪವೇ ಇಲ್ಲ, ಮೂರ್ಖರ ಸಾಲಿಗೆ ಸೇರಿದವರು.
ಅಜ್ಞಾನಿಗೆ ಸಮಾಧಾನದಿಂದ ಅರ್ಥವಾಗುವ ಹಾಗೆ ಹೇಳಿದರೆ ಆತ ಕೇಳಬಹುದು. ಆದರೆ ಮೂರ್ಖ, ಗರ್ವಿ ಕೇಳಲಾರನು. ಆತ ಯಾರ ಮಾತಿಗೂ ಕಿವಿಕೊಡನು. ಮಾತನಾಡುವಾಗ ಜಾಗ್ರತೆಯಾಗಿರೋಣ. ಮೂರ್ಖರೆಂದರೆ' ಅರೆಬೆಂದ ಅನ್ನದಂತೆ 'ಉಂಡರೆ ಅಜೀರ್ಣವಾಗಬಹುದು, ಶರೀರಕ್ಕೆ ಪಥ್ಯವಾಗದು. ಇದರಿಂದ ಊಟ ಮಾಡದಿರುವುದೇ ಮೇಲು. ಹಾಗೆಯೇ ಮೂರ್ಖರ, ಅಹಂಕಾರಿಗಳಿಂದ ದೂರವೇ ಇರಬೇಕು. ಅವರನ್ನು ಯಾರೂ ಗಮನಿಸುವುದಿಲ್ಲ ಎಂದು ಅವರಿಗನ್ನಿಸಬೇಕು. ಆಗ ಪಶ್ಚಾತ್ತಾಪವಾಗಿ ದಾರಿಗೆ ಬಂದು, ಎಲ್ಲರಂತೆ ಬದುಕಲೂ ಬಹುದು. ನೋಡಿ ಸ್ನೇಹ ಮಾಡಬೇಕು. ಜನಸಾಮಾನ್ಯರಂತೆ ಜೀವನ ನಡೆಸಿದವನು ನೆಮ್ಮದಿಯಾಗಿರಬಹುದು.
ಕೆಟ್ಟವರ, ದುಷ್ಟರ ಸಹವಾಸದಿಂದ ನಿತ್ಯವೂ ಒಂದಿಲ್ಲೊಂದು ಸಮಸ್ಯೆ, ತಲೆನೋವು. ಆರೋಗ್ಯಕರ ಸಮಸ್ಯೆಗೆ ಪರಿಹಾರವಿದೆ. ಇವರದೆಲ್ಲ ಅನಾರೋಗ್ಯ, ಸಮಾಜ ದ್ರೋಹ ಆಲೋಚನೆಗಳೇ. ಅದಕ್ಕಾಗಿ ದೂರವಿರುವುದೇ ಜಾಣತನ. ಬದುಕು ನಿಂತ ನೀರಲ್ಲ. ಹರಿಯುವ ನೀರಿಗೆ ಕಸಕಡ್ಡಿ, ಧೂಳು ಸೇರುವುದು ಸಹಜ. ಅದನ್ನೆಲ್ಲ ಬದಿಗೆ ತಳ್ಳಿ ನೀರು ಹರಿಯುವುದಿಲ್ಲವೇ? ಹಾಗೆಯೇ ನಾವು ಸಹ. ಬೇಕಾದ್ದನ್ನು ಸ್ವೀಕರಿಸಿ ಮುಂದೆ ಹೋಗೋಣ. ಬದಲಾವಣೆ ಬದುಕಿಗೆ ಹಿತವಾಗಿದ್ದರೆ ಸ್ವೀಕರಿಸೋಣ. 'ನಾನೇ ಪ್ರತ್ಯೇಕ' ಎಂದು ಕುಟುಂಬದಲ್ಲಿ, ಸಮಾಜದಲ್ಲಿ ಬದುಕಲಾಗದು. ನಿಯಮ ಎಲ್ಲರಿಗೂ ಒಂದೆ. ಹೊಂದಾಣಿಕೆಯ ತತ್ವವಿರಬೇಕು. ಇರುವಷ್ಟು ದಿನ ಅನುಸರಿಸಿಕೊಂಡು ಚೆನ್ನಾಗಿರೋಣ.
- ರತ್ನಾ ಕೆ ಭಟ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


