ಸಂಕಲ್ಪದಿಂದ ಸಾಧನೆಯತ್ತ: ಹೊಸ ವರ್ಷದ ಹೊಸ ಹಾದಿ

Upayuktha
0


"ಕ್ಯಾಲೆಂಡರ್ ಬದಲಿಸುವಷ್ಟೇ ಶ್ರದ್ಧೆಯಿಂದ ಹೊಸ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಮಾತ್ರ ಹೊಸ ವರ್ಷ ಗೆಲುವನ್ನು ತಂದುಕೊಡಲು ಸಾಧ್ಯ. ಹೊಸ ವರ್ಷ ಎಂಬುದು ಕೇವಲ ಕ್ಯಾಲೆಂಡರ್ ಬದಲಾವಣೆಗೆ ಸೀಮಿತವಾಗಬಾರದು. ಹಿಂದೂ ಸಂಸ್ಕೃತಿಯ ಪ್ರಕಾರ ನಾವು ಯುಗಾದಿಯನ್ನು ಹೊಸ ವರ್ಷವಾಗಿ ಆಚರಿಸಿದರೂ, ಇಂದಿನ ದಿನಗಳಲ್ಲಿ ಜನವರಿ 1ರ ಪ್ರಭಾವ ದೊಡ್ಡದಿದೆ. ಯುಗಾದಿಯನ್ನು ಕೇವಲ ಒಂದು ಹಬ್ಬವಾಗಿ ನೋಡುವ ಜನ, ಹೊಸ ಯೋಜನೆಗಳನ್ನು ಅಥವಾ ಸಂಕಲ್ಪಗಳನ್ನು ಮಾಡುವಾಗ ಜನವರಿ 1ರ ಮೇಲೆ ಅವಲಂಬಿತರಾಗುವುದು ಸಹಜ. 


​ಡಿಸೆಂಬರ್ ಬಂತೆಂದರೆ ಸಾಕು, ಮುಂದಿನ ವರ್ಷಕ್ಕಾಗಿ ನಮ್ಮ ಮನಸ್ಸಿನಲ್ಲಿ ನೂರಾರು ಯೋಜನೆಗಳು ಸೃಷ್ಟಿಯಾಗುತ್ತವೆ. ಚೆನ್ನಾಗಿ ಓದಿ ಅಂಕ ಗಳಿಸುವುದು, ಹೊಸ ಹವ್ಯಾಸ ಬೆಳೆಸಿಕೊಳ್ಳುವುದು, ಯೋಗಾಭ್ಯಾಸ, ಮೊಬೈಲ್-ಟಿವಿಗಳಂತಹ ವ್ಯಸನಗಳಿಂದ ದೂರವಿರುವುದು ಹಾಗೂ ಸಂಬಂಧಗಳನ್ನು ಗಟ್ಟಿಗೊಳಿಸುವುದು – ಹೀಗೆ ಹತ್ತಾರು ಸಂಕಲ್ಪಗಳು ಮೂಡುತ್ತವೆ.


​ಆದರೆ ಕೇವಲ ಯೋಜನೆಗಳಿಂದ ಬದುಕು ಬದಲಾಗದು. ಅವುಗಳನ್ನು ಎಷ್ಟು ಶ್ರದ್ಧೆಯಿಂದ ಅನುಷ್ಠಾನಕ್ಕೆ ತರುತ್ತೇವೆ ಎಂಬುದು ಮುಖ್ಯ. ಹೊಸ ವರ್ಷದ ಉತ್ಸಾಹದಲ್ಲಿ ಮಾಡಿದ ಸಂಕಲ್ಪಗಳು, ಪಾರ್ಟಿ ಮುಗಿಯುತ್ತಿದ್ದಂತೆಯೇ ಹಳೆಯದಾಗಿ ಕಾಣಲಾರಂಭಿಸುತ್ತವೆ. ಹೀಗೆ ಸಂಕಲ್ಪ ಮಾಡುವುದು, ಅದನ್ನು ಅರ್ಧಕ್ಕೇ ಬಿಡುವುದು ಅದೆಷ್ಟೋ ವರ್ಷಗಳಿಂದ ನಡೆಯುತ್ತಲೇ ಬಂದಿದೆ.


​ಈ ವರ್ಷವಾದರೂ ಅಂದುಕೊಂಡಿದ್ದನ್ನು ಸಾಧಿಸಬೇಕು ಎನ್ನುವವರಿಗೆ ಒಂದು ಸಣ್ಣ ಕಿವಿಮಾತು: ನಮಗೆ ಜನವರಿ 1 ಮಾತ್ರ ಹೊಸತಲ್ಲ; ನಾವು ಮನಸ್ಸು ಮಾಡಿದರೆ ಪ್ರತಿದಿನವೂ, ಪ್ರತಿಕ್ಷಣವೂ ಹೊಸತೇ! ಯಾವುದೇ ಕಾರ್ಯಸಿದ್ಧಿಗಾಗಿ ಹೊಸ ವರ್ಷಕ್ಕೆ ಕಾಯುವ ಬದಲು, ಪ್ರತಿದಿನವನ್ನೂ ಹೊಸ ಆರಂಭವೆಂದು ಭಾವಿಸಿ ಕಾರ್ಯಪ್ರವೃತ್ತರಾದಾಗ ಮಾತ್ರ ಗೆಲುವು ಸಾಧ್ಯ. ಇಡೀ ವರ್ಷದ ದೊಡ್ಡ ಪಟ್ಟಿ ಮಾಡುವ ಬದಲು, ಪ್ರತಿದಿನ ರಾತ್ರಿ ಮರುದಿನದ ಕೆಲಸಗಳ ಸಣ್ಣ ಪಟ್ಟಿ ಮಾಡುವುದು ನಮ್ಮಲ್ಲಿ ಶಿಸ್ತನ್ನು ರೂಢಿಸುತ್ತದೆ. ಹೀಗೆ ದಿನನಿತ್ಯದ ಸಣ್ಣ ಬದಲಾವಣೆಗಳೊಂದಿಗೆ ಸಾಗಿದರೆ, 2026ರ ಡಿಸೆಂಬರ್‌ನಲ್ಲಿ ಮುಂದಿನ ವರ್ಷದ ಯೋಜನೆ ಹಾಕುವ ಬದಲು, ಕಳೆದ ವರ್ಷದಲ್ಲಿ ನಾವೇನು ಸಾಧಿಸಿದೆವು ಎಂಬ ಪಟ್ಟಿಯನ್ನು ಹೆಮ್ಮೆಯಿಂದ ನೋಡಬಹುದು. ಬದುಕನ್ನು ಬದಲಿಸಲು ಒಂದು ಕ್ಷಣದ ಪ್ರೇರಣೆಗಿಂತ, ನಿರಂತರವಾದ ಶಿಸ್ತು ಮುಖ್ಯ.


"ಸಣ್ಣ ಸಣ್ಣ ಹಳ್ಳ ತೊರೆಗಳು ಸೇರಿಯೇ ಅಲ್ಲವೇ  ವಿಶಾಲವಾದ ನದಿಯೊಂದು ಸಾಗರವನ್ನು ಸೇರುವುದು!"


- ಪ್ರಿಯಾ ಶ್ರೀ ವಿಧಿ 

ದ್ವಿತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top