'ರಾವ್ಸ್‌ ಅಕಾಡೆಮಿ'ಯಿಂದ ಪ್ರೌಢಶಾಲಾ ಅಭ್ಯಾಸ ಪುಸ್ತಕಗಳೊಂದಿಗೆ ಉಚಿತ ಮಾದರಿ ಪ್ರಶ್ನೆಪತ್ರಿಕೆಗಳು

Upayuktha
0


ಬೆಂಗಳೂರು: ಸುಮಾರು ಒಂದೂವರೆ ದಶಕಗಳಿಂದ ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ಕೇವಲ ಅಭ್ಯಾಸ ಪುಸ್ತಕಗಳನ್ನು ಹೊರತರುತ್ತಿರುವ ಹೊರತರುತ್ತಿರುವ 'ರಾವ್ಸ್‌ ಅಕಾಡೆಮಿ' ಸಂಸ್ಥೆ ಈ ಸಾಲಿನಲ್ಲಿಯೂ 8, 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಅಭ್ಯಾಸ ಪುಸ್ತಕಗಳನ್ನು ಬಿಡುಗಡೆ ಮಾಡಿದೆ.


ನೇರವಾಗಿ ತರಗತಿಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ ಅಭ್ಯಾಸ ಮಾಡುವ ಎಲ್ಲಾ ವಿದ್ಯಾರ್ಥಿಗಳು ಕುಳಿತು ಪ್ರತಿಯೊಂದು ಅಧ್ಯಾಯದ ವಿಷಯವನ್ನೂ ಸಮಗ್ರವಾಗಿ ಅಧ್ಯಯನ ಮಾಡುವಲ್ಲಿ ಈ ಪುಸ್ತಕಗಳು ತುಂಬು ಸಹಕಾರಿ ಎನ್ನುವ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳ ಸಂದೇಹ ಪರಿಹಾರಕ್ಕೂ ಸಿದ್ಧರಿರುತ್ತಾರೆ.


ಬರೆದು ಪ್ರೌಡಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಶಾಲೆಯಲ್ಲಿನ ತರಗತಿ ಪ್ರವಚನ ಮುಗಿದೊಡನೆ 'ರಾವ್ಸ್ ಅಕಾಡೆಮಿ' ಪುಸ್ತಕಗಳಲ್ಲಿ ಬರೆದೂ ಅಭ್ಯಾಸ ಮಾಡಿದಲ್ಲಿ ಹೆಚ್ಚಿನ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.


8/9/10 ಮೂರೂ ತರಗತಿಗಳ ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಪುಸ್ತಕ ಲಭ್ಯವಿದ್ದು ಎಲ್ಲಾ ರೀತಿಯ ಬಹು ಆಯ್ಕೆ ಪ್ರಶ್ನೆಗಳು, ಬಿಟ್ಟ ಸ್ಥಳ ತುಂಬಿರಿ, ಹೊಂದಿಸಿ ಬರೆಯಿರಿ ಸೇರಿದಂತೆ 1, 2, 3, 4 ಅಂಕಗಳ ದೀರ್ಘ ಉತ್ತರ ಬರೆಯಲು ವೈಜ್ಞಾನಿಕವಾಗಿ ಅವಶ್ಯವಿರುವ ಸ್ಥಳಾವಕಾಶ ನೀಡುವುದರೊಂದಿಗೆ ಪ್ರತಿಯೊಂದು ಪ್ರಶ್ನೆಗೆ ಸಂಬಂದಿಸಿದ ಸರಿಯುತ್ತರಗಳನ್ನು ಸಹ ಪ್ರತ್ಯೇಕವಾಗಿ ನೀಡಲಾಗಿದೆ.


ಸದರಿ ಅಭ್ಯಾಸ ಪುಸ್ತಕಗಳನ್ನು ಕೊಂಡು ಅಭ್ಯಾಸ ಮಾಡುವ ವಿದ್ಯಾರ್ಥಿ ಬಳಗಕ್ಕೆ ರಾವ್ಸ್ ಅಕಾಡೆಮಿ ಶಿಕ್ಷಣ ತಜ್ಞರು ಸರ್ಕಾರದ ಶಿಕ್ಷಣ ಇಲಾಖೆಯ ನೀಲನಕ್ಷೆಗನುಗುಣವಾಗಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಜನವರಿ ತಿಂಗಳ ನಂತರ ಸಿದ್ಧಪಡಿಸಿ ಉಚಿತವಾಗಿ ಈ-ಮೇಲ್ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಲಿದೆ.


ವಿದ್ಯಾರ್ಥಿ- ಪೋಷಕ ಶಿಕ್ಷಕ ಸ್ನೇಹಿ ಈ ಪುಸ್ತಕಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು ಪ್ರತೀವರ್ಷ ಐದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಅಭ್ಯಾಸ ಪುಸ್ತಕಗಳ ನೆರವಿನಿಂದ ಬ್ಯಾಂಕ್ ಮತ್ತು ಡಿಸ್ಟಿಂಕ್ಷನ್ ಸ್ಥಾನಗಳನ್ನು ಪಬ್ಲಿಕ್ ಪರೀಕ್ಷೆಯಲ್ಲಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆಂದು ಹೆಮ್ಮೆಯಿಂದ ರಾವ್ ಅಕಾಡೆಮಿ ಸಂಸ್ಥೆ ತಿಳಿಸುತ್ತದೆ.


ಹೆಚ್ಚಿನ ಮಾಹಿತಿಗಾಗಿ ರಾವ್ಸ್ ಅಕಾಡೆಮಿ, ನಂ 51, ಡಿ.ವಿ.ಜಿ ರಸ್ತೆ, ಬಸವನಗುಡಿ, ಬೆಂಗಳೂರು-560004. ಮೊಬೈಲ್: 99005 75990 ಅಥವಾ 98443 28990 (ವಾಟ್ಸಪ್) ಗೆ ಸಂಪರ್ಕಿಸಬಹುದು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top