ಸಮಾಜ ಸೇವೆ ಅಥವಾ ಜನರಿಗೆ ಸೇವೆ ಒದಗಿಸಲು ಉಳ್ಳವರೇ ಮಾಡಬೇಕೆಂದೇನಿಲ್ಲ. ಇದ್ದುದರಲ್ಲಿಯೇ ಸೇವೆ ಮಾಡಬೇಕು ಅನ್ನುವ ಮನೋಧರ್ಮ ಇರಬೇಕು. ಮನುಷ್ಯ ಹುಟ್ಟಿದ ಮೇಲೆ ಭೂಮಿಯ ಋಣ ತಿರುವುದರೊಳಗೆ ಏನನ್ನಾದರೂ ಕೊಟ್ಟು ಹೋಗಬೇಕು ಅಂದಾಗಲೇ ಅದೊಂದು ಸಾರ್ಥವೆನಿಸುತ್ತದೆ.
ಆ ನಿಟ್ಟಿನಲ್ಲಿ ಹೇಳುವುದಾದರೆ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿಯ ಗ್ರಾಮದವರಾದ ಶ್ರೀ ಸೋಮಶೇಖರ ಹೊರಕೇರಿ ಅವರು ಮಧ್ಯಮ ಕುಟುಂಬದಲ್ಲಿ ಹಿರಿಯರಿಂದ ಬಂದಂತಹ ಉಚಿತ ಬಾಸಿಂಗ ಸೇವೆಯನ್ನು ಇವರು ಮುಂದುವರಿಸಿಕೊಂಡು ನಡೆದಿದ್ದಾರೆ. ಇವರ ಸುಪುತ್ರನು ಇವರ ಸೇವೆಗೆ ಕೈ ಜೋಡಿಸಿ ತಂದೆಯ ಜೊತೆ ಇದ್ದು ಅವರು ಈ ಕಾರ್ಯಪ್ರವೃತ್ತರಾಗಿದ್ದಾರೆ. ಸಾಮೂಹಿಕ ವಿವಾಹ ಹಾಗೂ ಉಚಿತ ಉಪನಯನಕ್ಕೆ ತಮ್ಮ ಬಾಸಿಂಗದ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹಾಗೂ ಇವರ ಸುಪುತ್ರ ಸ್ವತಃ ಅವರೇ ಬಾಸಿಂಗ ತಯಾರಿಸುತ್ತಾರೆ. ಹಾಗೇ ಇವರು ಸರಳತೆಯಿಂದ ಇದ್ದು ಧರ್ಮ ಕಾರ್ಯದಲ್ಲಿ ಭಾಗಿಯಾಗುತ್ತಾ ಊರಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಎಲ್ಲಿಯೇ ಬಾಸಿಂಗ ಸೇವೆ ಮಾಡಿದರೂ, ಸ್ವತಃ ತಮ್ಮ ಖರ್ಚಿನಲ್ಲಿ ಹೋಗಿ ಕೊಟ್ಟು ಬರುತ್ತಾರೆ. ಕರ್ನಾಟಕದಲ್ಲಿ ಸೇರಿದಂತೆ ಹೊರ ರಾಜ್ಯಗಳಿಗೂ ಸೇವೆ ಸಲ್ಲಿಸಿದ್ದಾರೆ.
ಇವರು ತಯಾರಿಸುವ ಬಾಸಿಂಗವು ನೈಸರ್ಗಿಕದಿಂದ ಕೂಡಿರುತ್ತದೆ. ಯಾವುದೇ ಕೃತಕ ಬೆಂಡು, ಪ್ಲ್ಯಾಸ್ಟಿಕ್ ಉಪಯೋಗಿಸುವುದಿಲ್ಲ. ದಾಂಡೇಲಿಯ ಸಮೀಪ ಇರುವ ಕೆರೆಯ ಅಂಚಿನಲ್ಲಿ ಬೆಳೆಯುವ ನೈಸರ್ಗಿಕ ಗಿಡದ ದಂಟುಗಳನ್ನು ಅಥವಾ ತೊಗಟೆ ಉಪಯೋಗಕ್ಕೆ ಬರುವ ಇತರ ಕಚ್ಚಾ ಪದಾರ್ಥಗಳನ್ನು ಉಪಯೋಗಿಸಿಕೊಂಡು ಬಾಸಿಂಗ ತಯಾರಿಸುತ್ತಾರೆ.
ಗ್ರಾಹಕರ ಮನೋಬಯಕೆ ತಕ್ಕಂತೆ ಲಕ್ಷ್ಮಿ ಪೂಜೆ, ಗಣಪತಿ ಪೂಜೆಗೆ ವಿನೂತನವಾದ ಹೊಸ ವಿನ್ಯಾಸ ಮತ್ತು ಅತ್ಯಾಕರ್ಷಕವಾಗಿ ತಯಾರಿಸುತ್ತಾರೆ. ಇದರ ಜೊತೆ ಬಾಗಿಲ ತೋರಣವನ್ನು ಚಿತ್ತಾಕರ್ಷಕವಾಗಿ ತಯಾರಿಸುತ್ತಾರೆ. ಇವರ ಸಾಮಾಜಿಕ ಉಚಿತ ಬಾಸಿಂಗ ಸೇವೆಯನ್ನು ಪರಿಗಣಿಸಿ ರಾಜ್ಯ ಮತ್ತು ಹೊರ ರಾಜ್ಯದಿಂದಲೂ ಗೌರವ ಪಾತ್ರರಾಗಿ ಅನೇಕ ಪ್ರಶಸ್ತಿ ಪುರಸ್ಕಾರದಿಂದ ಪುರಸ್ಕೃತರಾಗಿದ್ದಾರೆ.
- ಪ್ರಿಯಾ ಪ್ರಾಣೇಶ ಹರಿದಾಸ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




