ಆಳ್ವಾಸ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ

Upayuktha
0


ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ನಿರ್ವಹಣಾ ವಿಭಾಗವು(ಬಿಬಿಎ) ಕಾಲೇಜಿನ ಐಕ್ಯೂಎಸಿ ಅಡಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವುವನ್ನು ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.


ವಿಭಾಗದ ಹಿರಿಯ ವಿಧ್ಯಾರ್ಥಿ ಹಾಗೂ ಉದ್ಯಮಿ ವರುಣ್‌ರಾಜು ಮಾತನಾಡಿ,ಎಲ್ಲಾ ವಿದ್ಯಾರ್ಥಿಗಳು ಶೂನ್ಯಅನುಭವದಿಂದ ಆರಂಭಿಸುವುದು ಸಹಜ. ಆದರೆ ಶೂನ್ಯದಿಂದ ಆರಂಭಿಸುವುದು ಮುಖ್ಯವಲ್ಲ; ಮೌಲ್ಯಯುತ ಅನುಭವಗಳಿಂದ ಜೀವನ ರೂಪಿಸಿಕೊಳ್ಳುವುದು ಅಗತ್ಯ. 2015ರಲ್ಲಿ ನಾನು ಈ ಸಂಸ್ಥೆಗೆ ಸೇರಿದಾಗ ಸಂವಹನ ಕೌಶಲ್ಯವೂ ಸೇರಿದಂತೆ ಅನೇಕ ವಿಷಯಗಳಲ್ಲಿ ಆತ್ಮವಿಶ್ವಾಸದ ಕೊರತೆ ಇತ್ತು. ಆದರೆ ಅವಕಾಶಗಳನ್ನು ಸ್ವೀಕರಿಸಿ, ತೊಡಗಿಸಿಕೊಳ್ಳುವುದರ ಮೂಲಕ ಜೀವನಕ್ಕೆದೊಡ್ಡತಿರುವು ಲಭಿಸಿತು. ಅವಕಾಶಗಳನ್ನು ಕೈಬಿಟ್ಟರೆ, ನಾವು ಅದೇ ಸ್ಥಾನದಲ್ಲೇ ಉಳಿಯುತ್ತೇವೆ. ಆದರೆ ಅವಕಾಶಗಳನ್ನು ಸ್ವೀಕರಿಸಿ, ತೊಡಗಿಸಿಕೊಂಡಾಗ, ಜೀವನಕ್ಕೆ ಹೊಸ ಅರ್ಥ ದೊರೆಯುತ್ತದೆ. ಅಲ್ಲಿ ಸವಾಲುಗಳಿರುತ್ತವೆ, ವೈಫಲ್ಯಗಳಿರುತ್ತವೆ; ಆದರೆ ಆ ವೈಫಲ್ಯಗಳೇ ಜೀವನಕ್ಕೆ ಅನುಭವ, ಅನುಭವವೇ ಜ್ಞಾನ, ಮತ್ತು ಜ್ಞಾನವೇ ಯಶಸ್ಸಿನ ಮಾರ್ಗ ತೋರಿಸುತ್ತದೆ ಎಂದರು.


ಜರ್ಮನಿಯಲ್ಲಿಉದ್ಯೋಗದಲ್ಲಿರುವ ಇನ್ನೊರ್ವ ಹಿರಿಯ ವಿದ್ಯಾರ್ಥಿನಿ ವಂದನಾ ಮಾತನಾಡಿ,ಕಾರ್ಪೊರೇಟ್‌ ಜೀವನಕ್ಕೂ ವಿದ್ಯಾರ್ಥಿ ಜೀವನಕ್ಕೂ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಉದ್ಯೋಗಕ್ಷೇತ್ರದಲ್ಲಿ ಸ್ಪರ್ಧೆ, ಗಡುವು, ಒತ್ತಡ, ಹೊಣೆಗಾರಿಕೆ ಮತ್ತು ಜವಾಬ್ದಾರಿಗಳ ಜಗತ್ತನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಕಾಲೇಜಿನಲ್ಲಿರುವಾಗಲೇ ಕಾರ್ಪೊರೇಟ್‌ ಜೀವನಕ್ಕೆ ಸಿದ್ಧರಾಗುವುದು ಅಗತ್ಯ. ಹೀಗಾಗಿ, ಕಾಲೇಜಿನಲ್ಲಿಇರುವ ಅವಕಾಶಗಳನ್ನು ಬಳಸಿಕೊಳ್ಳಿ, ತಪ್ಪುಗಳನ್ನು ಮಾಡುವುದರಿಂದ ಹಿಂಜರಿಯಬೇಡಿ, ಜವಾಬ್ದಾರಿಯನ್ನು ಭಾರವೆಂದು ನೋಡುವುದಕ್ಕಿಂತ ಅವಕಾಶವೆಂದು ಪರಿಗಣಿಸಿ. ಇಲ್ಲಿ ತೊಡಗಿಸಿಕೊಳ್ಳುವಷ್ಟೂ ಮುಂದೆ ಬದುಕಿನಲ್ಲಿ ಸ್ಪರ್ಧಿಸುವ ಬಲ ಹೆಚ್ಚುತ್ತದೆ. ಇಲ್ಲಿ ಕಲಿತ ಕೌಶಲ್ಯಗಳು, ಪಡೆದ ಅನುಭವಗಳು, ಬೆಳೆಸಿದ ಆತ್ಮವಿಶ್ವಾಸ ಸದಾ ಸಹಕಾರಿ ಎಂದರು.


ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ವಿದ್ಯಾರ್ಥಿಗಳು ಧೈರ್ಯ, ಪರಿಶ್ರಮ ಮತ್ತು ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ಹಿರಿಯ ವಿದ್ಯಾರ್ಥಿಗಳ ಅನುಭವಗಳು ನಿಮ್ಮ ಜೀವನಕ್ಕೂ ಮಾರ್ಗದರ್ಶನವಾಗಲಿ ಎಂದರು.


ಕಾರ್ಯಕ್ರಮದಲ್ಲಿ ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಸುರೇಖಾರಾವ್, ಕರ‍್ಯಕ್ರಮ ಸಂಯೋಜಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಸೋನಿ, ವಿಧ್ಯಾರ್ಥಿ ಸಂಯೋಜಕರಾದ ಸಪ್ತಶ್ರೀ ಹಾಗೂ ಸುಗಂಧಿಇದ್ದರು. ಖುಷಿ ನಿರೂಪಿಸಿ, ಶ್ರೀಷ್ ಸ್ವಾಗತಿಸಿ, ಗಾಯತ್ರಿ ವಂದಿಸಿದರು. ಸುಮನ ಹಾಗೂ ವಿಸ್ಮಯ ಅತಿಥಿಗಳನ್ನು ಪರಿಚಯಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Advt Slider:
To Top