ಇಳಿ ವಯಸ್ಸಿನ ಸಂಜೆ ; ಮಾರ ಮತ್ತು ಇತರ ಕಥೆಗಳು ಜನಾರ್ಪಣೆ

Upayuktha
0


ಬೆಂಗಳೂರು: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಮತ್ತು ಪರಸ್ಪರ ಸಹಯೋಗದಲ್ಲಿ ಡಾ .ಆರ್. ವೆಂಕಟಸುಬ್ಬಯ್ಯ ರವರ ಇಳಿ ವಯಸ್ಸಿನ ಸಂಜೆ ಹಾಗು ಡಾ. ಬಿ .ಪಿ ರಾಮಯ್ಯ ರವರ ಮಾರ ಮತ್ತು ಇತರ ಕಥೆಗಳು ಕಥಾಸಂಕಲನವನ್ನು ನಗರದ ಜೆ.ಸಿ.ರಸ್ತೆಯ ಕನ್ನಡ ಭವನ ನಯನ ಸಭಾಂಗಣದಲ್ಲಿ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಜನಾರ್ಪಣೆಗೊಳಿಸಿ ಮಾತನಾಡುತ್ತ ತಳಸಮುದಾಯದ ತೊಳಲಾಟವನ್ನು ಉತ್ತಮ ಕಥಾಹಂದರವಾಗಿ ಚಿತ್ರಿಸಿರುವ ಈ ಕಥಾಸಂಕಲನ ಭಾವನಾತ್ಮಕವಾಗಿ ಓದುಗರನ್ನು ಸೆರೆಹಿಡಿದಿಡುತ್ತದೆ ಎಂದು ಅಭಿಪ್ರಾಯ ಪಟ್ಟರು.


ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ , ಪರಸ್ಪರ ಅಧ್ಯಕ್ಷ ಆರ್. ರಾಮಚಂದ್ರ , ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ನ ಕೆಂಪಣ್ಣ ಮತ್ತು ಬಿ.ಕೆ .ಸುರೇಶ , ಡಾ. ಸತ್ಯಮಂಗಲ ಮಹದೇವ ಉಪಸ್ಥಿತ ರಿದ್ದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top