ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನ ಕಿರೀಟಕ್ಕೆ ಮತ್ತೊಂದು ಗರಿ
ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ 25-26 ನೇ ಸಾಲಿನ ಪುರಂದರೋತ್ಸವ ಪ್ರಶಸ್ತಿಯನ್ನು, ಈ ಬಾರಿ ಹಿರಿಯ ದಾಸ ಸಾಹಿತ್ಯ ವಿದ್ವಾಂಸರೂ, ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್‌ನ ಸಹ ಕಾರ್ಯದರ್ಶಿಗಳೂ ಆದ ಡಾ. ಶೀಲಾ ದಾಸ್ ಅವರಿಗೆ ನೀಡಿ ಗೌರವಿಸಲಿದ್ದಾರೆ. ಜನವರಿ 17ರಂದು ತಿರುಮಲದಲ್ಲಿ ನಡೆಯುತ್ತಿರುವ ಪುರಂದರ ದಾಸರ ಆರಾಧನೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದೆಂದು ಟಿ.ಟಿ.ಡಿ.ಯ ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷ ಅಧಿಕಾರಿಗಳಾದ ವೇದಮೂರ್ತಿ ಪಂಡಿತ್ ಆನಂದ ತೀರ್ಥಾಚಾರ ಪಗಡಾಲ ಅವರು ತಿಳಿಸಿದ್ದಾರೆ.
ಡಾ.ಶೀಲಾ ದಾಸ್ ಅವರು ಮೂಲತಃ ದಾಸರ ನಾಡಾದ ರಾಯಚೂರಿನವರು. ದಿ.ಪಾಂಡುರಂಗ ದಾಸ್ ಹಾಗೂ ದಿ.ಸುಶೀಲಾಬಾಯಿ ಅವರ ಪುತ್ರಿ ಇವರ ಜನನ 11.2 1964. ಇವರ ಪತಿ ನರಸಿಂಹರಾವ್. ಇವರಿಗೆ ಇಬ್ಬರು ಮಕ್ಕಳು ಮಗಳು ಕಾವ್ಯ ವಿನಯ ಗಲಗಲಿ ಹಾಗೂ ಮಗ ಕೊಪ್ಪರೇಶ. ಡಾ ಶೀಲಾ ದಾಸ್ ಅವರು ಸ್ನಾತಕೋತ್ತರ ಶಿಕ್ಷಣ ಎಂ.ಎ ಕನ್ನಡ, ಗುಲ್ಬರ್ಗ ವಿಶ್ವವಿದ್ಯಾಲಯ ಕಲ್ಬುರ್ಗಿ 1986 ರಲ್ಲಿ ಹಾಗೂ PhD ಪದವಿ ಗುಲ್ಬರ್ಗ ವಿಶ್ವವಿದ್ಯಾಲಯ, ವಿಷಯ ಸುಳಾದಿಗಳು ಒಂದು ಅಧ್ಯಯನ 2004 ರಲ್ಲಿ ಮಾಡಿರುತ್ತಾರೆ.
1987 ರಿಂದ ತಾರಾನಾಥ್ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಹಾಗೂ ನಂತರದಲ್ಲಿ ಲಕ್ಷ್ಮಿವೆಂಕಟೇಶ್ವರ ದೇಸಾಯಿ ಮಹಾವಿದ್ಯಾಲಯ, ರಾಯಚೂರಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ.
ಕೃತಿಗಳು: ಕೃತಿಯಲ್ಲಿ ಹರಿದಾಸ ಕಿರಣ.ಕಾಣ್ವಕಿರಣ.ಸೀಗಿಗೌರಿ ಹಾಡುಗಳು, ಕಾಣ್ವಸಂಕೀರ್ತನ, ಮಹಿಳಾ ಹರಿದಾಸರು. ಆಯ್ದ ಪ್ರಬಂಧಗಳು. ಆಯ್ದ ಸಣ್ಣ ಕಥೆಗಳು, ಸುಳಾದಿಗಳು ಒಂದು ಅಧ್ಯಯನ, ಮತ್ತು ಹತ್ತು ಸಹ ಸಂಪಾದನಾ ಕೃತಿಗಳು.
ಸಾಹಿತ್ಯ ಪರಿಷತ್ ಬೆಂಗಳೂರಿನಲ್ಲಿ ಸದಸ್ಯರಾಗಿ, ದಾಸ ಸಾಹಿತ್ಯ ಅಧ್ಯಯನ ಕೇಂದ್ರ ರಾಯಚೂರಿನಲ್ಲಿ ಕಾರ್ಯದರ್ಶಿಯಾಗಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಯಚೂರಿನಲ್ಲಿ ಉಪಾಧ್ಯಕ್ಷರಾಗಿ, ಜಿಲ್ಲಾ ಬ್ರಾಹ್ಮಣ ಮಹಿಳಾ ಸಮಾಜ ರಾಯಚೂರಿನಲ್ಲಿ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ. ಪ್ರಸ್ತುತ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನ ಸಹ ಕಾರ್ಯದರ್ಶಿಗಳಾಗಿದ್ದಾರೆ.
ಪ್ರಶಸ್ತಿಗಳು: ವಿಜಯೇಂದ್ರ ಪುರಸ್ಕಾರ, ಕುಂಭಕೋಣಂ, ಗುರುಗೋವಿಂದ ಪ್ರಶಸ್ತಿ, ಬೆಂಗಳೂರು, ಕನ್ನಡ ರತ್ನ ಪ್ರಶಸ್ತಿ, ರಾಯಚೂರು, ಕರ್ನಾಟಕ ಸೇವಾ ರತ್ನ ಪ್ರಶಸ್ತಿ, ಕಣ್ವಶ್ರೀ ಪ್ರಶಸ್ತಿ, ಯಾಜ್ಞವಲ್ಕ ಆಶ್ರಮ ಚಾಮರಾಜಪೇಟೆ ಬೆಂಗಳೂರು, ಕನಕಶ್ರೀ ಪ್ರಶಸ್ತಿ, ದಾಸ ವಾಣಿ ಕರ್ನಾಟಕ ಇವರ 2025 ನೇ ಸಾಲಿನ ದಾಸ ಪುರಂದರ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಲಭಿಸಿರುತ್ತವೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


