ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರಿಗೆ ಪುರಂದರೋತ್ಸವ ಪ್ರಶಸ್ತಿ

Upayuktha
0

ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ನೀಡುತ್ತಿರುವ ಪುರಸ್ಕಾರ




ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ 25-26 ನೇ ಸಾಲಿನ ಪುರಂದರೋತ್ಸವ ಪ್ರಶಸ್ತಿಯನ್ನು, ಈ ಬಾರಿ ಹಿರಿಯ ದಾಸ ಸಾಹಿತ್ಯ ವಿದ್ವಾಂಸರೂ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಅವರಿಗೆ ನೀಡಿ ಗೌರವಿಸಲಿದ್ದಾರೆ. 


ಇದೇ ಜನವರಿ ದಿನಾಂಕ 17ರಂದು ತಿರುಮಲದಲ್ಲಿ ನಡೆಯುತ್ತಿರುವ ಪುರಂದರ ದಾಸರ ಆರಾಧನೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುವುದೆಂದು ಟಿ.ಟಿ.ಡಿ.ಯ ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷ ಅಧಿಕಾರಿಗಳಾದ ವೇದಮೂರ್ತಿ ಪಂಡಿತ್ ಆನಂದ ತೀರ್ಥಾಚಾರ ಪಗಡಾಲ ಅವರು ತಿಳಿಸಿದ್ದಾರೆ.


ಶ್ರೀ ನರಸಿಂಹ ವಿಠಲ ಅಂಕಿತದಿಂದ 200 ಕ್ಕೂ ಹೆಚ್ಚು ಸಂಕೀರ್ತನೆಗಳನ್ನು ರಚಿಸಿದ್ದಾರೆ. ಹತ್ತಕ್ಕೂ ಹೆಚ್ಚು ಮೌಲ್ಯಯುಕ್ತ ಗ್ರಂಥಗಳನ್ನು ರಚಿಸಿದ್ದಾರೆ. ಉಗಾ-ಭೋಗ, ಸುಳಾದಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಇವರು ವಾಙ್ಮಯ ಲೋಕದಲ್ಲಿ ಹೆಸರುವಾಸಿಯಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಅವರಿಗೆ ವಿಜಯೇಂದ್ರ ಪ್ರಶಸ್ತಿ, ದಾಸ ಸಾಹಿತ್ಯ ರತ್ನ ಪ್ರಶಸ್ತಿ, ರಂಗ ವಿಠ್ಠಲ ಪ್ರಶಸ್ತಿ, ಸಿರಿ ಗೋವಿಂದ ವಿಠ್ಠಲ ಪ್ರಶಸ್ತಿ, ವಿಪ್ರಶ್ರೀ ಪ್ರಶಸ್ತಿ, ಪ್ರಸನ್ನ ವೆಂಕಟ ದಾಸರ ಪ್ರಶಸ್ತಿ ಸಂದಿವೆ.


ಪುರಂದರೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್‌ ನ ಗೌರವಾಧ್ಯಕ್ಷರಾಗಿದ್ದಾರೆ. ಈ ಸಂದರ್ಭದಲ್ಲಿ, ಟ್ರಸ್ಟ್‌ ನ ಸದಸ್ಯರೆಲ್ಲರೂ ಅವರನ್ನು ಅಭಿನಂದಿಸಿದ್ದಾರೆ.


Post a Comment

0 Comments
Post a Comment (0)
To Top