ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಕು|| ಅಭಿಜ್ಞ ಪಿ. ಕಶ್ಯಪ್ ಅವರಿಂದ "ನಾದ ನಮನ"

Upayuktha
0


ಮಂತ್ರಾಲಯ: ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಗುರುರಾಯರ ಮೂಲ ಬೃಂದಾವನ ಸನ್ನಿಧಾನವಿರುವ ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಬೆಂಗಳೂರಿನ  ಬಿ.ಕೆ. ಪ್ರಸನ್ನಕುಮಾರ್ ಮತ್ತು ವಿಜಯಲಕ್ಷ್ಮಿ ಅವರ ಸುಪುತ್ರಿ ಹಾಗೂ ವಿದುಷಿ  ಲಕ್ಷ್ಮೀ ವರುಣ್ ಮತ್ತು ವಿದುಷಿ ಶ್ರೀಮತಿ ವಿಜಯಾ ಭಟ್ ಅವರ ಶಿಷ್ಯೆ ಕು|| ಅಭಿಜ್ಞ ಪಿ. ಕಶ್ಯಪ್ ಅವರು ಸಲ್ಲಿಸಿದ "ನಾದ ನಮನ" ಕಾರ್ಯಕ್ರಮದಲ್ಲಿ ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹಲವಾರು ಅಪರೂಪದ ಹರಿದಾಸರ ಪದಗಳನ್ನು ತಾರತಮ್ಯೋಕ್ತವಾಗಿ ಪ್ರಸ್ತುತಪಡಿಸಿದರು.

ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ವಿದ್ವಾನ್  ಎಸ್. ಶಶಿಧರ್ ಹಾಗೂ ಮೃದಂಗ ವಾದನದಲ್ಲಿ ವಿದ್ವಾನ್  ಶ್ರೀನಿವಾಸ್ ಅನಂತರಾಮಯ್ಯ ಸಹಕರಿಸಿದರು. ನಂತರ ಕಾರ್ಯಕ್ರಮದ ಸಂಚಾಲಕರು ಕಲಾವಿದರಿಗೆ ಅನುಗ್ರಹ ಸಂದೇಶ ಪತ್ರ ಮತ್ತು ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top