ISPL ಸೀಸನ್ 3 ಗೆ ಬಲಿಷ್ಠ ತಂಡ ನಿರ್ಮಿಸಿದ ಚೆನ್ನೈ ಸಿಂಗಮ್ಸ್; ಕೇತನ್‌ ಮ್ಹಾತ್ರೆ ಮರುಸೇರ್ಪಡೆ

Upayuktha
0




ಮುಂಬಯಿ: ISPL ಸೀಸನ್ 3 ನಲ್ಲಿ ಚೆನ್ನೈ ಸಿಂಗಮ್ಸ್ ಬಲಿಷ್ಠವಾದ ತಂಡವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದು, ಸಂದೀಪ್ ಗುಪ್ತಾ, ರಾಜ್‌ದೀಪ್ ಗುಪ್ತಾ ಮತ್ತು ಟಾಲಿವುಡ್ ನಟ ಸೂರ್ಯ ಶಿವಕುಮಾರ್ ಅವರ ಸಹ-ಮಾಲೀಕತ್ವದ ಫ್ರಾಂಚೈಸಿಯಾಗಿದೆ. 


₹26.40 ಲಕ್ಷಕ್ಕೆ ಸಹಿ ಹಾಕಿ ಕೇತನ್‌ ಮ್ಹಾತ್ರೆ ತಂಡಕ್ಕೆ ಪುನಃ ಮರಳಿದ್ದು, ಈ ಹರಾಜಿನ ಮೂರನೇ ಅತ್ಯಧಿಕ ಖರೀದಿ ಇದಾಗಿದೆ. ಕಳೆದ ಮೂರು ಸೀಸನ್‌ಗಳಿಂದ ಸಿಂಗಮ್ಸ್ ತಂಡದಲ್ಲಿದ್ದ ಕೇತನ್‌ ಮ್ಹಾತ್ರೆ ಅವರ ಪುನರಾಗಮನವು ತಂಡವನ್ನುಮತ್ತಷ್ಠು ಬಲಗೊಳಿಸಲಿದೆ. 


₹20.02 ಲಕ್ಷಕ್ಕೆ ಅದ್ಭುತ ಬ್ಯಾಟ್ಸ್‌ಮನ್ ಜಗನ್ನಾಥ್ ಸರ್ಕಾರ್, ಸರ್ಫರಾಜ್ ಖಾನ್ (₹12 ಲಕ್ಷ), ಮೊಹಮ್ಮದ್ ನದೀಮ್ (₹5.50 ಲಕ್ಷ), ಅಮನ್ ಯಾದವ್ (₹3.80 ಲಕ್ಷ), ನಾಗೇಶ್ ವಾಡೇಕರ್ (₹3 ಲಕ್ಷ), ಸಂಭಾಜಿ ಪಾಟೀಲ್ (₹3 ಲಕ್ಷ), ಮೊಯೊದ್ದಿನ್ ಶೇಖ್ (₹3 ಲಕ್ಷ), ಕಿಸಾನ್ ಸತ್ಪುಟೆ (₹3 ಲಕ್ಷ), ಮತ್ತು ಗಣೇಶ್ ಶಿಲ್ಲಿಕ್ಯಾತರ್ (₹3 ಲಕ್ಷ) ತಂಡಕ್ಕೆ ಸೇರಿದ್ದಾರೆ. 


ಚೆನ್ನೈ ತಂಡವು ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಿದ್ದು, ಅನುರಾಗ್ ಸರ್ಷರ್ (₹19.20 ಲಕ್ಷ) ಮತ್ತು ಆಶಿಶ್ ಪಾಲ್ (₹5.25 ಲಕ್ಷ) ಮತ್ತು ಸುನಿಲ್ ಕುಮಾರ್ (₹3 ಲಕ್ಷ) ಅವರನ್ನು ಸೇರಿಸಿಕೊಂಡಿದ್ದಾರೆ. 


ಆಲ್‌ರೌಂಡರ್‌ ವಿಭಾಗದಲ್ಲಿ ಅಂಕುರ್ ಸಿಂಗ್ (₹11 ಲಕ್ಷ), ರಾಜೇಶ್ ಸೋರ್ಟೆ (₹10 ಲಕ್ಷ) ಮತ್ತು ಧೀರಜ್ ಸಿಂಗ್ (₹3.60 ಲಕ್ಷ) ಇರಲಿದ್ದಾರೆ. ಹಾಗೆಯೆ ಯುವ ಪ್ರತಿಭೆಗಳಿಗೂ ತಂಡದಲ್ಲಿ ಅವಕಾಶ ನೀಡಿದ್ದು,  U-19 ಬೌಲರ್‌ಗಳಾದ ಆರ್ಯನ್ ಖಾರ್ಕರ್ (₹4 ಲಕ್ಷ) ಮತ್ತು ಅಂಕಿತ್ ಯಾದವ್ (₹3 ಲಕ್ಷ) ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 


ಹರಾಜಿನ ಬಳಿಕ ಮಾತನಾಡಿದ ಚೆನ್ನೈ ಸಿಂಗಮ್ಸ್ ತಂಡದ ಸಹ ಮಾಲೀಕ ರಾಜದೀಪ್ ಗುಪ್ತಾ 'ಕಳೆದ ಸೀಸನ್‌ಗಿಂತ ಈ ಈ ಸೀಸನ್ ದೊಡ್ಡದ್ದಾಗಿದ್ದು, ISPL ಸೀಸನ್ 3ಕ್ಕೆ ಕಾಲಿಡುತ್ತಿದ್ದಂತೆ ನಮ್ಮ ಗಮನ ದೇಶದ ಅತ್ಯುತ್ತಮ ಟೆನಿಸ್ ಬಾಲ್ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸುವುದಾಗಿದೆ ಎಂದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top