ಸಂತ ಜೋಸೆಫರ ಬಾಲಕರ ಪ್ರೌಢ ಶಾಲೆಯಲ್ಲಿ ಕ್ರಿಸ್‌ಮಸ್ ಹಬ್ಬದ ಸಡಗರ

Upayuktha
0


ಬಳ್ಳಾರಿ: ದೇವರೇ ಮಾನವರಾಗಿ ಭುವಿಯಲ್ಲಿ ಜನಿಸಿ ಜಗತ್ತಿಗೆ ಪ್ರೀತಿ, ಶಾಂತಿಯನ್ನು ಸಾರಿ ಮಾನವೀಯತೆಯನ್ನು ಮೆರೆದಂತಹ ಪ್ರಭು ಕ್ರಿಸ್ತರ ಜನನವೇ ಕ್ರಿಸ್‌ಮಸ್ ಹಬ್ಬವೆಂದು ಫಾದರ್ ಲಿಯೋ ಮೈಕಲ್‌ರವರು ಸಂತ ಜೋಸೆಫರ ಬಾಲಕರ ಪ್ರೌಢ ಶಾಲೆಯಲ್ಲಿ ನಡೆದ ಕ್ರಿಸ್‌ಮಸ್ ಕಾರ್ಯಕ್ರಮದ ಅಧ್ಯಕ್ಷ ಭಾಷಣದಲ್ಲಿ ನುಡಿದರು. ಮುಖ್ಯ ಅತಿಥಿಗಳಾದ ಫಾದರ್ ಅರೋಗ್ಯನಾಥನ್‌ರವರು ಎಲ್ಲಾ ಧರ್ಮಗಳು ಸಾರುವ ಸಂದೇಶ ಒಂದೇ ಅದು ಪರರನ್ನು ಪ್ರೀತಿಯಿಂದ ಕಾಣುವುದು ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ರಂಗನಾಥ್ ಸಿ.ಆರ್.ಪಿ.ರವರು ಮಾತನಾಡುತ್ತಾ ಮಕ್ಕಳು ಶಾಲೆಯಲ್ಲಿ ಶಿಕ್ಷಣದ ಜೊತೆಗೆ  ಚಟುವಟಿಕೆಗಳ ಮೂಲಕ ಜ್ಞಾನವನ್ನು ಪಡೆಯುತ್ತಾರೆ, ಪಾಲಕರು ಮನೆಯಲ್ಲಿ ಮಕ್ಕಳ ಅಂದಿನ ಕಲಿಕೆಯ ಬಗ್ಗೆ ವಿಚಾರಿಸಬೇಕು, ಸಭೆಗಳಲ್ಲಿ ಭಾಗವಹಿಸಬೇಕು ಎಂದರು.   


ಫಾದರ್ ಅಮಲ್ ರಾಜ್, ಫಾದರ್ ಲೂರ್ದ್ ರಾಜ್, ಫಾದರ್ ರಾಯಪ್ಪ,ವಿಶ್ವನಾಥ್, ಇ.ಸಿ.ಓ.ರವರು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳ ಮನಮೋಹಕ ನೃತ್ಯಗಳು ಹಾಗೂ ಕ್ರಿಸ್ತ ಜನನದ ಸ್ಥಬ್ಧ ಚಿತ್ರಗಳ ದೃಶ್ಯಾವಳಿಗಳು ಎಲ್ಲಾರನ್ನು ಮೈಮರೆಯುವಂತೆ ಮಾಡಿದವು. ಶಾಲಾ ವ್ಯವಸ್ಥಾಪಕರಾದ ಫಾದರ್ ದಾನಪ್ಪ ಮೂಲಿಮನಿ ಹಾಗೂ ಸಹಾಯಕ ಗುರುಗಳಾದ ಫಾದರ್ ಕೆನಡಿರವರ ನೇತೃತ್ವದಲ್ಲಿ ಶಿಕ್ಷಕ-ಸಿಬ್ಬಂದಿ ಅವರ ಮಾರ್ಗದರ್ಶನದಲ್ಲಿ ವಿಶ್ವಕ್ಕೆ ಶಾಂತಿ ಸಹಬಾಳ್ವೆಯ ಸಂದೇಶ ನೀಡಿದ್ದ ದಯಾಮಯ ಏಸುಕ್ರಿಸ್ತರ  ಜನ್ಮದಿನದ ಈ ಮಕ್ಕಳ ಕಾರ್ಯಕ್ರಮವು ಎಲ್ಲರ ಮನಸೆಳೆಯಿತು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top