ಅಲೋಶಿಯಸ್ ವಿವಿಯಲ್ಲಿ ಹಿಂದಿ ಸ್ಪರ್ಧೆಗಳ ಆಯೋಜನೆ ಕೌಶಲ್ಯವೇ ಜೀವನದ ಅತ್ಯಂತ ಶಕ್ತಿಶಾಲಿ ಅಸ್ತ್ರ–ಡಾ. ಮುಕುಂದ ಪ್ರಭು

Upayuktha
0


ಮಂಗಳೂರು: 2025ರ ಡಿಸೆಂಬರ್ 17ರಂದು ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ), ಮಂಗಳೂರು ಮತ್ತು ಬ್ಯಾಂಕ್ ಆಫ್ ಬರೋಡಾ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಿಂದಿ ಪ್ರಬಂಧ ಬರವಣಿಗೆ ಮತ್ತು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಯಿತು. 2026ರ ಜನವರಿ 10ರಂದು ಆಚರಿಸಲಿರುವ ವಿಶ್ವ ಹಿಂದಿ ದಿನ – 2026ದ ಅಂಗವಾಗಿ ಈ ಸ್ಪರ್ಧೆಗಳು ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ನಡೆದವು.


ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬ್ಯಾಂಕ್ ಆಫ್ ಬರೋಡಾ, ಮಂಗಳೂರು ಶಾಖೆಯ ಮುಖ್ಯ ವ್ಯವಸ್ಥಾಪಕ (ರಾಜಭಾಷಾ) ಡಾ. ಬಾಲಮುರುಗನ್ ಅವರು ಭಾರತೀಯ ಭಾಷೆಗಳು ಪರಸ್ಪರ ಸಂಪರ್ಕ ಸಾಧಿಸುವ ಕಾರ್ಯ ಮಾಡುತ್ತವೆ ಎಂದು ಹೇಳಿದರು. ವಿಶೇಷ ಅತಿಥಿ, ಬ್ಯಾಂಕ್ ಆಫ್ ಬರೋಡಾ (VRDF), ಮಂಗಳೂರು ಶಾಖೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ರಾಜ ಅವರು ವಿದ್ಯಾರ್ಥಿಗಳನ್ನು ಸ್ಟಾರ್ಟ್-ಅಪ್ ಆರಂಭಿಸಲು ಪ್ರೇರೆಪಣೆ ನಿಡಿದರು.


ಕಾರ್ಯಕ್ರಮದ ಅಧ್ಯಕ್ಷರಾದ ಡಾ. ಮುಕುಂದ ಪ್ರಭು ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇಂದಿನ ಕಾಲದಲ್ಲಿ ಕೌಶಲ್ಯವೇ ಜೀವನದ ಅತ್ಯಂತ ಶಕ್ತಿಶಾಲಿ ಅಸ್ತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಸಂಯೋಜಕರಾದ ಡಾ. ಮಹಬೂಬಅಲಿ ಎ. ನದಾಫ ಅವರು ಅತಿಥಿಗಳನ್ನು ಸ್ವಾಗತಿಸಿದರು. ಜೆಸಿಕಾ ಕ್ರಾಸ್ಟಾ ಮತ್ತು ಅವರ ತಂಡ ಪ್ರಾರ್ಥನಾ ಗೀತೆಯನ್ನು ಹಾಡಿದರು. ಅರ್ಪಿತ್ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.

• ಹಿಂದಿ ಪ್ರಬಂಧ ಬರವಣಿಗೆಯ ವಿಷಯ: “ರಾಷ್ಟ್ರೀಯ ಶಿಕ್ಷಣ ನೀತಿ 2020 : ವಿದ್ಯಾರ್ಥಿಗಳಿಗಾಗಿ ಸವಾಲುಗಳು ಮತ್ತು ಅವಕಾಶಗಳು”

• ಭಾಷಣ ಸ್ಪರ್ಧೆಯ ವಿಷಯ: “ಸಂಪರ್ಕ ಭಾಷೆಯಾಗಿ ಭಾರತೀಯ ಭಾಷೆಗಳು”

ವಿಶ್ವವಿದ್ಯಾಲಯದ 40 ಮಂದಿ ಸ್ಪರ್ಧಾಳುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top