ಎಸ್.ಕೆ. ಮೋದಿ ನ್ಯಾಷನಲ್ ಶಾಲೆಯ ವತಿಯಿಂದ ಇಕೋ ಸಂಸ್ಕೃತಿ ಪಯಣ ಮ್ಯಾರಥಾನ ಅಭಿಯಾನ

Upayuktha
0


ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘ, ಎಸ್ ಕೆ ಮೋದಿ ನ್ಯಾಷನಲ್ ಶಾಲೆ, ಬಳ್ಳಾರಿ  ಶಾಲಾ ವತಿಯಿಂದ ಶುಕ್ರವಾರದಂದು ಬೆಳಿಗ್ಗೆ 6.30 ಗಂಟೆಗೆ  "ಇಕೋ ಸಂಸ್ಕೃತಿ ಪಯಣ ಮ್ಯಾರಥಾನ್ " ಅಭಿಯಾನವನ್ನು ಆರಂಭಿಸಲಾಯಿತು . ಇದು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಅಭಿಯಾನವಾಗಿದೆ.ಈ ಅಭಿಯಾನಕ್ಕೆ ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಶೋಭಾರಾಣಿ ಮೇಡಂ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‍ಕೆ ಮೋದಿ ಶಾಲೆಯ ಅಧ್ಯಕ್ಷರು ಏಳುಬೆಂಚಿ ರಾಜಶೇಖರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ಎಸ್ ಕೆ ಮೋದಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ  ಅಣ್ಣ ವಿರೂಪಾಕ್ಷಪ್ಪ,  ವಸಂತಕುಮಾರ ಗೌಡ ಪಾಟೀಲ್, ಪ್ರಾಂಶುಪಾಲರಾದ  ಸುನಂದಾ ಎಂ ಪಾಟೀಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣದ ಮಹತ್ವ ಹಾಗೂ ಮಕ್ಕಳಿಗೆ ಪರೀಕ್ಷಾ ಭಯವನ್ನು ಹೋಗಲಾಡಿಸಲು ಸಲಹೆಯನ್ನು ನೀಡಿದರು. ಸಾಧನೆ ಎನ್ನುವುದು ರಾತ್ರೋರಾತ್ರಿ ಆಗುದಲ್ಲ ಅದಕ್ಕೆ ಶ್ರಮ ಪಡಬೇಕು, ಸತತ ಪ್ರಯತ್ನಿಸಬೇಕು ಎಂಬ ಸ್ಫೂರ್ತಿಯ ನುಡಿಗಳನ್ನು ಮಕ್ಕಳಿಗೆ ತಿಳಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಅಧ್ಯಕ್ಷರು ಶ್ರೀ ಏಳುಬೆಂಚಿ ರಾಜಶೇಖರರವರು ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಎಂಬ ವಿಷಯದ ಕುರಿತು ಮಾತನಾಡಿದರು. ನಂತರ ಇಕೋ ಸಂಸ್ಕೃತಿ ಪಯಣ  ಅಭಿಯಾನ ಪ್ರಾರಂಭವಾಯಿತು. ಶಾಲೆಯಿಂದ ಪ್ರಾರಂಭವಾಗಿ  ವಿದ್ಯಾನಗರ ಸರ್ಕಲ್, ಸುಧಾ ಕ್ರಾಸ್ ಮಾರ್ಗವಾಗಿ ಪ್ರಮುಖ ಸರ್ಕಲ್ ಗಳಲ್ಲಿ ಮ್ಯಾರ್ಥನ್ ಓಟ ಜರುಗಿತು. ಸಾರ್ವಜನಿಕರಿಗೆ ವೃಕ್ಷದ ಬೀಜಗಳನ್ನು ಕೊಡುವುದರ ಮೂಲಕ ಹಸಿರು ಸಂಸ್ಕೃತಿ ಮಹತ್ವವನ್ನು ಸಾರಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top