ಬೆಂಗಳೂರು: ಕಲಾ ಕ್ಷೇತ್ರಕ್ಕೆ ಕಳೆದ ನಾಲ್ಕು ದಶಕಗಳಿಂದ ವಿಭಿನ್ನ ರೀತಿಯಲ್ಲಿ ಸೇವೆ ಸಲ್ಲಿಸಿರುವ ಅಂತರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಡಾ. ಟಿ.ವಿ. ರಾಮಪ್ರಸಾದ್ ಮತ್ತು ಪ್ರಖ್ಯಾತ ನೃತ್ಯ ವಿದುಷಿ ಇಂದಿರಾ ಕಡಾಂಬಿ ಅವರ ಅಂಬಾಲಂ ಫೌಂಡೇಶನ್ ಸಂಸ್ಥೆಯು "ಆರಾಧನಾ ಕಲಾ ಸಮಾರಾಧನೆ" ಶೀರ್ಷಿಕೆ ಅಡಿಯಲ್ಲಿ ಡಿ. 6 ಮತ್ತು 7ರಂದು ವಿಭಿನ್ನ ಕಲಾ ಪ್ರಸ್ತುತಿಗಳನ್ನು ಆಯೋಜಿಸಿದೆ.
ನಗರದ ಮಲ್ಲೇಶ್ವರಂನ ಸೇವಾ ಸದನ ಸಭಾಂಗಣದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಡಿ. 6ರಂದು ಬೆಳಗ್ಗೆ 9:30ಕ್ಕೆ ಪ್ರಖ್ಯಾತ ಕಲಾವಿದೆ ಲಲಿತಾರಾಮ್ ರಾಮಚಂದ್ರನ್ ರವರು "ಎಸ್. ರಾಜಮ್ ಅವರ ಲ್ಯಾಂಡಿಂಗ್ ಕಾಂಪೋಸಿಶನ್" ಬಗ್ಗೆ ವಿಶೇಷ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಎರಡನೇ ಅವಧಿಯಲ್ಲಿ ಬೆಳಗ್ಗೆ 10 ಗಂಟೆ 15 ನಿಮಿಷಕ್ಕೆ ಪ್ರೊ. ಡಾ. ಪರಿಮಳ ಗುರುಮೂರ್ತಿ ಅವರು "ಎಸ್. ರಾಜಮ್ ಅವರ ಮ್ಯೂಸಿಕ್ ಅಂಡ್ ಪೆಡಿಗೋಗಿ" ಬಗ್ಗೆ ಪ್ರೌಢ ಉಪನ್ಯಾಸ ನೀಡಲಿದ್ದಾರೆ. ಮೂರನೇ ಅವಧಿಯಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಖ್ಯಾತ ಕಲಾವಿದ ಟಿ.ವಿ. ರಾಮಪ್ರಸಾದ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಚೇರಿಯನ್ನು ಪ್ರಸ್ತುತಪಡಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಪ್ರೊ. ಪರಿಮಳ ಗುರುಮೂರ್ತಿಯವರು "ಪ್ರೊಫೆಸರ್ ಪಿಎಸ್ ಶ್ರೀನಿವಾಸರಾವ್ ಅವರು ಸಂಗೀತ ಸಂಯೋಜಿಸಿದ ಅಷ್ಟಪದಿಯ ಜಗದೇವ ಕವಿಯ ಗೀತ ಗೋವಿಂದ (ಹಿಂದುಸ್ತಾನಿ ರಾಗದಲ್ಲಿ) ವಿಷಯ ಕುರಿತು ಪ್ರೌಢ ಉಪನ್ಯಾಸ ನೀಡಲಿದ್ದಾರೆ. ಇದೇ ಅವಧಿಯಲ್ಲಿ ವಿದುಷಿ ಇಂದಿರಾ ಕಡಾಂಬಿಯವರು ಅಭಿನಯ ಕುರಿತಾದ ವಿಶೇಷ ಕಾರ್ಯಗಾರವನ್ನು ನಡೆಸಿಕೊಳ್ಳುತ್ತಿದ್ದಾರೆ.
ಸಂಜೆ 5 ಗಂಟೆಗೆ ಪಂಡಿತ್ ಅಭಿಜಿತ್ ಮತ್ತು ತಂಡದವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿ ನೆರವೇರಲಿದೆ. ಸಂಜೆ 6:45 ಕ್ಕೆ ಪ್ರಖ್ಯಾತ ಕಲಾವಿದ ಆನೂರು ಅನಂತ ಕೃಷ್ಣ ಶರ್ಮ ಮತ್ತು ತಂಡದವರಿಂದ ಲಯ ಲಾವಣ್ಯ ವಿಶೇಷ ವಾದ್ಯ ವೈಭವ ರಂಜಿಸಲಿದೆ.
ಡಿ. 7ರಂದು ಬೆಳಗ್ಗೆ 9:30ಕ್ಕೆ ಜಯಂತಿ ಸುಬ್ರಮಣ್ಯಂ ಮತ್ತು ನಿತ್ಯ ಕಲ್ಯಾಣಿ ವೈದ್ಯನಾಥನ್ ಅವರಿಂದ ಪ್ರೌಢ ಚರ್ಚೆ ನಡೆಯಲಿದೆ. (ವಿಷಯ: ಬಾನಿ ಮತ್ತು ಅಭಿನಯ ಕ್ಷೇತ್ರಕ್ಕೆ ಕಲಾನಿಧಿ ನಾರಾಯಣ ಅವರ ಕೊಡುಗೆ) ಬೆಳಗ್ಗೆ 10:45 ಕ್ಕೆ ರಮಾ ಭಾರದ್ವಾಜ ಮತ್ತು ಇಂದಿರಾ ಕಡಾಂಬಿ ಅವರು ಸಂಯುಕ್ತ ನೃತ್ಯ ಸಮರ್ಪಣೆಯನ್ನು ಮಾಡಲಿದ್ದಾರೆ.
ಅಂದು ಮಧ್ಯಾಹ್ನ 2ಗಂಟೆಗೆ ಪ್ರಖ್ಯಾತ ಕಲಾವಿದ ಟಿ.ವಿ. ರಾಮಪ್ರಸಾದ್ ಅವರು ಕೋಟೇಶ್ವರ ಅಯ್ಯರ್ ಅವರ ಸಂಯೋಜನೆಗಳ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಡದಿದ್ದಾರೆ. ಇದೇ ಅವಧಿಯಲ್ಲಿ ಕಲಾವಿದೆ ಇಂದಿರಾ ಕಡಾಂಬಿಯವರು ಅಭಿನಯ ಕುರಿತಾದ ಕಾರ್ಯಗಾರವನ್ನು ಸಮರ್ಪಣೆ ಮಾಡಲಿದ್ದಾರೆ.
ಸಂಜೆ 4 ಗಂಟೆಗೆ ಅಬಾಲಂ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಪ್ರಸ್ತುತಿ ನಡೆಯಲಿದೆ. ವಿದುಷಿ ಲಕ್ಷ್ಮಿ ಗೋವಿಂದನ್ ಅವರಿಂದ ಕೂಚಿ ಪುಡಿ ನೃತ್ಯ, ನಂತರ ರಮಾ ವೈದ್ಯನಾಥನ್ ಅವರಿಂದ ಭರತನಾಟ್ಯ ಕಾರ್ಯಕ್ರಮವಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



