ಭೀಮ್ ಆ್ಯಪ್ ಗೆ 10 ವರ್ಷ: 'ಗರ್ವ್ ಸೇ ಸ್ವದೇಶಿ'- ಅಭಿಯಾನಕ್ಕೆ ಚಾಲನೆ

Upayuktha
0


ಮಂಗಳೂರು: ಎನ್‍ಪಿಸಿಐ ಭೀಮ್ ಸರ್ವಿಸ್ ಲಿಮಿಟೆಡ್ (ಎನ್‍ಬಿಎಸ್‍ಎಲ್) ಮೂಲಕ ಅಭಿವೃದ್ಧಿಪಡಿಸಲಾದ ದೇಶೀಯ ಡಿಜಿಟಲ್ ಪೇಮೆಂಟ್ಸ್ ಪ್ಲಾಟ್‍ಫಾರ್ಮ್ ಭೀಮ್ ಪೇಮೆಂಟ್ಸ್ ಆ್ಯಪ್, ಇಂದು ಭಾರತಾದ್ಯಂತ ಡಿಜಿಟಲ್ ಪೇಮೆಂಟ್ಸ್ ಸ್ವೀಕರಿಸಲು ಹೊಸ ಬಳಕೆದಾರರನ್ನು ಪ್ರೋತ್ಸಾಹಿಸುವ 'ಗರ್ವ್ ಸೇ ಸ್ವದೇಶಿ' ಅಭಿಯಾನವನ್ನು ಪ್ರಾರಂಭಿಸಿದೆ.


ಭೀಮ್ ಆ್ಯಪ್ ಆರಂಭವಾದ ಹತ್ತನೇ ವರ್ಷದ ಮೈಲುಗಲ್ಲನ್ನು ಸಂಭ್ರಮಿಸಲು ಬಳಕೆದಾರರಿಗೆ 20 ರೂಪಾಯಿ ಅಥವಾ ಹೆಚ್ಚಿನ ವರ್ಗಾವಣೆಗೆ 20 ರೂಪಾಯಿ ಕ್ಯಾಶ್‍ಬ್ಯಾಕ್ ಆಫರ್ ನೀಡಲು ಕೂಡಾ ನಿರ್ಧರಿಸಲಾಗಿದೆ.


ಪರಿಪೂರ್ಣ ದೇಶೀಯ (ಮೇಡ್-ಇನ್-ಇಂಡಿಯಾ) ಪೇಮೆಂಟ್ಸ್ ಪ್ಲಾಟ್‍ಫಾರ್ಮ್ ಆಗಿ ಭೀಮ್ ನಿರ್ಮಿಸಲ್ಪಟ್ಟಿದ್ದು, ಭಾರತೀಯ ಬಳಕೆದಾರರು ಮತ್ತು ಅವರ ದೈನಂದಿನ ಪೇಮೆಂಟ್ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ವಿನ್ಯಾಸಗೊಳ್ಳಲಾಗಿದೆ. ಕಡಿಮೆ ಮೌಲ್ಯದ ದೈನಂದಿನ ವ್ಯವಹಾರಗಳು ಮತ್ತು ಹಂಚಿಕೆಯಾಗುವ ಮನೆಯ ಖರ್ಚುಗಳಿಂದ ಹಿಡಿದು ನಂಬಿಕೆ ಮತ್ತು ಸುಗಮ ಬಳಕೆಯನ್ನು ಹೊಂದಿರುವ ವೈಶಿಷ್ಟ್ಯಗಳವರೆಗೆ, ಭೀಮ್ ಭಾರತದವರು ಡಿಜಿಟಲ್ ಹಣವನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಕಟಣೆ ಹೇಳಿದೆ.


'ಗರ್ವ್ ಸೇ ಸ್ವದೇಶಿ' ಅಭಿಯಾನವು ಈ ಮೂಲಭೂತ ಅಂಶಗಳಿಂದ ಪ್ರೇರಣೆ ಪಡೆದಿದ್ದು, ಸುರಕ್ಷಿತ ಮತ್ತು ಅಂತರ್ಗತಪೇಮೆಂಟ್ಸ್ ವ್ಯಾಪ್ತಿಯನ್ನು ವಿಸ್ತರಿಸಲು ದೇಶೀಯ ಡಿಜಿಟಲ್ ಪ್ಲಾಟ್‍ಫಾರ್ಮ್ ಪಾತ್ರವನ್ನು ದೃಢಪಡಿಸುತ್ತದೆ. ಬಳಕೆದಾರರು ದಿನನಿತ್ಯದ ಖರ್ಚುಗಳಿಗೆ, ಅಂದರೆ ದಿನಬಳಕೆ ವಸ್ತುಗಳು, ಕಿರಾಣಿ, ಬಸ್ ಅಥವಾ ಮೆಟ್ರೋ ಟಿಕೆಟ್‍ಗಳು, ಪೂರ್ವಪಾವತಿ ರೀಚಾರ್ಜ್‍ಗಳು, ವಿದ್ಯುತ್ ಮತ್ತು ಅನಿಲ ಬಿಲ್ ಪಾವತಿಗಳು, ಇಂಧನ ಶುಲ್ಕಗಳು ಮುಂತಾದವುಗಳಿಗೆ ಅಪ್ಲಿಕೇಶನ್ ಬಳಸಲು ಪ್ರಾರಂಭಿಸಿದರೆ, ಅರ್ಹ ವ್ಯವಹಾರಗಳಲ್ಲಿ ತಿಂಗಳಿಗೆ ರೂ. 300 ವರೆಗೆ ಕ್ಯಾಶ್‍ಬ್ಯಾಕ್ ಗಳಿಸಬಹುದು. ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ ಪುನರ್‍ನವೀಕೃತ ಭೀಮ್ ಅಪ್ಲಿಕೇಶನ್ 15ಕ್ಕೂ ಹೆಚ್ಚು ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ ಎಂದು ಪ್ರಕಟಣೆ ಹೇಳಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top