ಮಣಿಪುರಿ ಥಾಂಗ್-ತಾ, ಶಿವಕಾಲೀನ ಯುದ್ಧತಂತ್ರ ಮತ್ತು 'ಅಫ್ಜಲ್‌ಖಾನ್ ವಧೆ'ಯ ರೋಮಾಂಚಕ ನೇರ ಪ್ರದರ್ಶನ
ಹೊಸದಿಲ್ಲಿ: ದಿಲ್ಲಿಯ ಭಾರತ ಮಂಡಪಮ್‌ನಲ್ಲಿ 'ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್' ಮತ್ತು 'ಸನಾತನ ಸಂಸ್ಥೆ'ಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಭವ್ಯ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ದಲ್ಲಿ ಪ್ರಾಚೀನ ಭಾರತೀಯ ಯುದ್ಧ ಪರಂಪರೆಗಳು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಶೌರ್ಯದ ಅದ್ಭುತ, ನೇರ ಪ್ರದರ್ಶನ ನಡೆಯಿತು. ಈ ಮಹೋತ್ಸವವು ಜನರಲ್ಲಿ ವೀರತ್ವ, ರಾಷ್ಟ್ರಭಕ್ತಿ ಮತ್ತು ಆತ್ಮರಕ್ಷಣೆಯ ಆಳವಾದ ಸ್ಫೂರ್ತಿಯನ್ನು ಜಾಗೃತಗೊಳಿಸಿತು.
ಮಹೋತ್ಸವದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಶಸ್ತ್ರ ಕಲೆಯ ಪ್ರಭಾವಶಾಲಿ ಪ್ರದರ್ಶನ, ಮಣಿಪುರದ ಸಾಂಪ್ರದಾಯಿಕ ಥಾಂಗ್-ತಾ (ಕತ್ತಿ ಮತ್ತು ಭರ್ಚಿ) ಯುದ್ಧಕಲೆಯ ನೇರ ಪ್ರಸ್ತುತಿ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಎದುರಿಸಲು ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳನ್ನು ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರಸ್ತುತಪಡಿಸಲಾಯಿತು.
ಅಫ್ಜಲ್‌ಖಾನ್ ವಧೆಯ ರೋಮಾಂಚಕಾರಿ ಸಜೀವ ಚಿತ್ರಣವು ವಿಶೇಷ ಆಕರ್ಷಣೆಯಾಗಿತ್ತು!
ಇಂದಿನ ಭಯೋತ್ಪಾದಕ ದಾಳಿಗಳನ್ನು ಎದುರಿಸಲು ಶಿವಾಜಿ ಕಾಲದ ಕಾರ್ಯತಂತ್ರಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಸಹ ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಈ ವೀರತ್ವದ ಪ್ರಸ್ತುತಿಯು ಪ್ರೇಕ್ಷಕರಲ್ಲಿ ಉತ್ಸಾಹ ಮತ್ತು ಹೆಮ್ಮೆಯ ಭಾವನೆಯನ್ನು ಪ್ರಜ್ವಲಿಸಿತು.
ಕೊಲ್ಹಾಪುರದಲ್ಲಿರುವ 'ಸವ್ಯಸಾಚಿ ಗುರುಕುಲಂ' ವತಿಯಿಂದ ಪ್ರಸ್ತುತಪಡಿಸಲಾದ ಶೌರ್ಯ ಪ್ರದರ್ಶನದಲ್ಲಿ ಮರಾಠಿ ಶಸ್ತ್ರಾಸ್ತ್ರ ಪರಂಪರೆ ಮತ್ತು ಶಿವಕಾಲೀನ ಯುದ್ಧತಂತ್ರದ ಪ್ರಬಲ ಸಂಗಮ ಕಂಡುಬಂದಿತು. ಯುದ್ಧಕಲೆಯ ಬಳಕೆ, ಆತ್ಮರಕ್ಷಣೆ, ಮಹಿಳೆಯರ ರಕ್ಷಣೆ ಮತ್ತು ಸಾಮೂಹಿಕ ಆಕ್ರಮಣದ ಸಮಯದಲ್ಲಿ ಧೈರ್ಯದಿಂದ ಪ್ರತೀಕಾರದ ಸಜೀವ ಪ್ರಾತ್ಯಕ್ಷಿಕೆಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.
ಅದರ ಜೊತೆಗೆ, ಋಷಿ-ಮುನಿಗಳು ಹೇಳಿದ ಸೂರ್ಯ ನಮಸ್ಕಾರ, ಚಂದ್ರ ನಮಸ್ಕಾರ, ಭೂಮಿ ನಮಸ್ಕಾರ ಮತ್ತು ಸಾಂಪ್ರದಾಯಿಕ ವ್ಯಾಯಾಮಗಳನ್ನು ಪ್ರದರ್ಶಿಸಲಾಯಿತು, ಇದು ಭಾರತೀಯ ಸಂಸ್ಕೃತಿಯಲ್ಲಿ ದೇಹ, ಮನಸ್ಸು ಮತ್ತು ಆತ್ಮದ ಸಮತೋಲನದ ಆಳವಾದ ಸಂದೇಶವನ್ನು ನೀಡಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಸಂಸದ ಸುಧಾಂಶು ತ್ರಿವೇದಿ, ಕೇಂದ್ರ ಇಂಧನ ರಾಜ್ಯ ಸಚಿವರಾದ ಶ್ರೀಪಾದ ನಾಯಕ್, ಪ.ಪೂ. ಶಾಂತಿಗಿರಿ ಮಹಾರಾಜರು, ಪೂಜ್ಯ ಪವನ್ ಸಿನ್ಹಾ ಗುರೂಜಿ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ (ಡಾ.) ಚಾರುದತ್ತ ಪಿಂಗಳೆ, ಹಾಗೂ ಸನಾತನ ಸಂಸ್ಥೆಯ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ) ಅಂಜಲಿ ಗಾಡಗೀಳ ಸೇರಿದಂತೆ ಸಾವಿರಾರು ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

