ಮಂಗಳೂರು: ಪುತ್ತೂರು ನಿವಾಸಿ ಆಶಿಶ್ ಶಂಕರ್, ಭಾರತೀಯ ವಾಯುಪಡೆಯ (AFCAT) ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾರಣಾಸಿಯಲ್ಲಿ 5 ದಿನಗಳ SSB ಸಂದರ್ಶನದಲ್ಲಿ ಮತ್ತು 5 ದಿನಗಳ ಸಂಪೂರ್ಣ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಅಂತಿಮ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈಗ ಮುಂದಿನ ತರಬೇತಿಗಾಗಿ ಹೈದರಾಬಾದ್‌ನ ವಾಯುಪಡೆ ಅಕಾಡೆಮಿಗೆ ಸೇರುತ್ತಿದ್ದಾರೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಭಾರತೀಯ ವಾಯುಪಡೆಯಲ್ಲಿ ತಾಂತ್ರಿಕ ಅಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ.
ಇವರು ವಳಂಕುಮ್ಮೇರಿ ವೆಂಕಟಕೃಷ್ಣ ಮತ್ತು ಸಜಾತಾ ದಂಪತಿಗಳ ಪುತ್ರ. ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಂತ್ರಜ್ಞಾನ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.


