ಗೋಲಗುಂಡರವರ ಕಥೆಗಳು ಅಪರೂಪದ ಸಂಕಲನ: ಸುಜಾತ ಚಲವಾದಿ

Upayuktha
0


ಹುನಗುಂದ: ಸಮಾಜದಲ್ಲಿ ಮಾನವೀಯತೆ ಕಳೆದು ಹೋಗುತ್ತಿದೆಯೇ? ಎನ್ನುವ ಸಂಧರ್ಭದಲ್ಲಿ ಡಾ|| ಶ್ರೀಶೈಲ ರುದ್ರಪ್ಪ ಗೋಲಗುಂಡ ಅವರು ದ್ಯಾಮ್ರಯಮ್ನವ್ವ ಮತ್ತು ಇತರ ಕಥೆಗಳು ಮಾನವೀಯತೆ ಯನ್ನು ಪೂನ್ನರು ಸೃಷ್ಟಿಸುವ ಕಥೆಗಳನ್ನು ಬರೆದು ಸಾಹಿತ್ಯ ಲೋಕದಲ್ಲಿ ಇದೊಂದು ಅಪರೂಪದ ಕಥಾ ಸಂಕಲನವಾಗಿದೆ ಎಂದು ವಿಜಯಪೂರ ಜಿಲ್ಲೆಯ ತಾಳಿಕೋಟಿಯ ಖಾಸತೇಶ್ವರ ಪದವಿ ಉಪನ್ಯಾಸಕಿ ಡಾ|| ಸುಜಾತಾ ಚಲವಾದಿಯವರು ಕಥಾ ಸಂಕಲನದ ಬಗ್ಗೆ ಮಾತನಾಡುತ್ತ ಹೇಳಿದರು.


ಅವರು ಪಟ್ಟಣದ ಹೊನ್ನಕುಸುಮ ವೇದಿಕೆಯ ಆಶ್ರಮದಲ್ಲಿ ತಿಂಗಳು- ಬೆಳಕು 31ನೇ ಕಾರ್ಯಕ್ರಮದಲ್ಲಿ ವಿ.ಎಂ. ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಗೋಲಗುಂಡರವರ ದ್ಯಾಮ್ರ ಯಮ್ನವ್ವ ಮತ್ತು ಇತರ ಕಥೆಗಳು ಎಂಬ ಕಥಾಸಂಕಲನ ಬಗ್ಗೆ ಮಾತನಾಡಿ ಇಲ್ಲಿಯ ಎಲ್ಲಾ ಹತ್ತು ಕಥೆಗಳು ಹೃದಯ ಸ್ಪರ್ಧಿಯಾಗುದ್ದು ಜೀವನದ ಮೌಲ್ಯಗಳನ್ನು ಎತ್ತಿ ಹಿಡಿದು ಸಮಾನತೆಯ ಸಮಾಜ ಕಟ್ಟಬೇಕಾದ ಅವಶ್ಯಕತೆ ಇದೇ ಎಂದು ಇಲ್ಲಿಯ ಕಥೆಗಳು ಬತ್ತಿ ಹೇಳುತ್ತದೆ ಎಂದರು.


ಕಥೆಗಾರ ಶ್ರೀಶೈಲ ಗೋಲಗುಂಡ ಮಾತನಾಡಿ, ಇಲ್ಲಿಯ ಎಲ್ಲಾ ಕಥೆಗಳು ವಾಸ್ತವಿಕ ನೆಲೆಯಲ್ಲಿ ರಚನಗೊಂಡಿವೆ. ಸಮಾಜದಲ್ಲಿ ನಡೆಯುವ  ಪ್ರಸಂಗಗಳನ್ನೇ ಕಥೆಗಳಾಗಿ ರೂಪಿಸಿ ಕೊಂಡಿದ್ದೇನೆ ಆದರಿಂದ ಇಲ್ಲಿಯ ಕಥೆಗಳು ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹೇಶ ತಿಪ್ಪಾಶೆಟ್ಟಿ ಮಾತನಾಡಿ, ಮೌಲ್ಯಯುತ ಸಾಹಿತ್ಯಕ್ಕೂ ಎಂದು ಸಾವಿಲ್ಲ ಗೊಲಗುಂಡರವರ ಕಥೆಗಳಲ್ಲಿ ವಾಸ್ತವಿಕತೆ ಎಂದು ಕಾಣುತ್ತದೆ. ಭಾರತೀಯ ಸಂಸ್ಕೃತಿಯ ಚೌಕಟ್ಟಿನಲ್ಲಿ ರೂಪುಗೊಂಡ ಇಲ್ಲಿಯ ಕಥೆಗಳು  ಮೌಲ್ಯಯುತವಾಗಿದೆ ಎಂದರು.


ಎಂ.ಡಿ. ಚಿತ್ತರಗಿ ಸ್ವಾಗತಿಸಿ ನಿರೂಪಿಸಿದರು. ಬಿ.ಡಿ. ಚಿತ್ತರಗಿ ಪ್ರಾರ್ಥಿಸಿದರು. ಜಗದೀಶ ಹಾದಿಮನಿ ವಂದಿಸಿದರು. ಕಾರ್ಯಕ್ರಮದಲ್ಲಿ ಹುನಗುಂದ- ಇಲಕಲ್ಲ ಅವಳಿ ತಾಲೂಕಿನ ಹಿರಿಯ. ಕಿರಿಯ ಸಾಹಿತಿಗಳು ಭಾಗವಹಿಸಿದರು.



Post a Comment

0 Comments
Post a Comment (0)
To Top