ಮಂಗಳೂರು: "ಯಕ್ಷಗಾನದ ಬೇರೆ ಬೇರೆ ವಿಭಾಗದಲ್ಲಿ ಅನೇಕರು ದುಡಿಯುತ್ತಾ ಕಲಾಭಿವೃದ್ಧಿಗಾಗಿ ಶ್ರಮಿಸುತ್ತಾರೆ. ಆ ಸೇವೆಯಲ್ಲೇ ಸಾಧಕರಾಗಿ ಮಾಡಿಬರುತ್ತಾರೆ. ಅಂತಹವರನ್ನು ಹುಡುಕಿ ಗೌರವಿಸುವ ಸತ್ಕಾರ್ಯವನ್ನು ಸಮಾಜ ಮಾಡಬೇಕಿದೆ. ಇಂದು ಅಲೆವೂರಾಯ ಪ್ರತಿಷ್ಠಾನದಿಂದ ಕಲಾಸಾಧಕ ಶ್ರವಣ್ ಕಾರಂತರನ್ನು ಸನ್ಮಾನಿಸುತ್ತಿರುವುದು ಸತ್ಕಾರ್ಯ. ಹಿರಿಯರ ನೆನಪಲ್ಲಿ ನಡೆವ ಕಾರ್ಯಕ್ಕೆ ದೇವರ ಅನುಗ್ರಹವೂ ಇದೆ" ಎಂದು ಮಂಗಳಾದೇವಿ ದೇವಸ್ಥಾನದ ಮೊಕ್ತೇಸರರಾದ ಆರುಣ್ ಕುಮಾರ್ ಐತಾಳರು ನುಡಿದರು. ಅವರು "ಯಕ್ಷ ತ್ರಿವೇಣಿ"ಯನ್ನು ಉದ್ಘಾಟಿಸಿ ಮಾತನಾಡಿದರು.
ಅಲೆವೂರಾಯ ಪ್ರತಿಷ್ಠಾನದ ವಿಶ್ವಸ್ಥರಾದ ವರ್ಕಾಡಿ ರವಿ ಅಲೆವೂರಾಯರು ಒಂಭತ್ತು ವರ್ಷಗಳಿಂದ ನಡೆದು ಬಂದ ಪ್ರತಿಷ್ಠಾನದ ಬಗ್ಗೆ ಪ್ರಸ್ತಾಪಿಸಿ ಸ್ವಾಗತಿಸಿದರು.
ಯಕ್ಷ ಸಾಧಕರು ಸರಣಿ ಖ್ಯಾತಿಯ ಶ್ರವಣ್ ಕಾರಂತ ಶಕ್ತಿ ನಗರ ಅವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಾಪಕ ನಾಗರಾಜ ಖಾರ್ವಿಯವರು ಸನ್ಮಾನ ಪತ್ರ ವಾಚಿಸಿದರು. ನಿವೃತ್ತ ಅಧ್ಯಾಪಿಕೆ ಸುಭದ್ರಾ ದೇವಿ, ನ್ಯಾಯವಾದಿ ಗೋಪಾಲಕೃಷ್ಣ ಭಟ್, ವೇಣು ಮಾಂಬಾಡಿ, ಪ್ರತೀಕ್ ರಾವ್ ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರರು ನಿರ್ವಹಿಸಿದರು. ವಿಶ್ವಸ್ಥ ಮಧುಸೂದನ ಅಲೆವೂರಾಯ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

