ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ‘ಸ್ಪಾಟ್‍ಲೈಟ್’ ಪ್ರತಿಭಾ ವೇದಿಕೆಯ ಉದ್ಘಾಟನೆ

Upayuktha
0


ಉಡುಪಿ: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ‘Spotlight’ ಪ್ರತಿಭಾವೇದಿಕೆಯ ಅದ್ದೂರಿ ಉದ್ಘಾಟನೆ ಸಂಜೆ ಟಿ.ಮೋಹಂದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್ ಇಲ್ಲಿ ಜರುಗಿತು. ವಿದ್ಯಾರ್ಥಿಗಳ ವಿವಿಧ ಕಲಾ–ಪ್ರತಿಭೆಗಳಿಗೆ ವೇದಿಕೆಯಾಗಿರುವ ಈ ಕಾರ್ಯಕ್ರಮವು ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗೆ ಹೊಸ ಚೈತನ್ಯ ತುಂಬಿತು.


ಕಾರ್ಯಕ್ರಮದ ಭಾಗವಾಗಿ ‘The flames of strength’ ಎಂಬ ವಿಶೇಷ ಪ್ರದರ್ಶನವೂ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳ ಶಕ್ತಿ, ಉತ್ಸಾಹ ಮತ್ತು ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಕಲೆ–ಕ್ರೀಡಾ ಪ್ರದರ್ಶನಗಳು ಗಮನ ಸೆಳೆದವು. ನೃತ್ಯ, ಫಿಟ್‍ನೆಸ್, ಶೌರ್ಯಕಲೆಗಳು, ಕರಾಟೆ ಹಾಗೂ ಇತರೆ ಪ್ರತಿಭೆಗಳ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆಯಾಗಿದ್ದವು.


ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್‌ ಹಾಗೂ ಎಂ.ಜಿ.ಎಂ ಕಾಲೇಜಿನ ಉಪ ಪ್ರಾಂಶುಪಾಲರಾದ ಹಾಗು ಬಿ.ಸಿ.ಎ ಸಂಯೋಜಕರಾದ ಡಾ. ಎಂ. ವಿಶ್ವನಾಥ ಪೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇಂಗ್ಲಿಷ್ ಉಪನ್ಯಾಸಕರಾದ ಮೊಹಮ್ಮದ್‌ ಯಾಸೀನ್‌ ಮನ್ನಾ ನಿರೂಪಿಸಿದರು. ಕಂಪ್ಯೂಟರ್‌ ಅಪ್ಲಿಕೇಶನ್‌ ವಿಭಾಗದ ಉಪನ್ಯಾಸಕಿ ಕು. ವರ್ಷಿಣಿ ಕೋಟ್ಯಾನ್‌ ಧನ್ಯವಾದಗೈದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top