ಸಂಗೀತದಿಂದ ವಿಶ್ವಶಾಂತಿ ಸಾಧ್ಯ: ಡಾ. ಗಿರೀಶ್ ಭಾರದ್ವಾಜ್

Upayuktha
0


ಮಂಗಳೂರು: ಸಂಗೀತ ಭಾರತದ ಜೀವ ಕಲೆ. ಕಲೆಯ ಎಲ್ಲ ಪ್ರಕಾರಗಳು ಇಂದು ವಿಶ್ವದಾದ್ಯಂತ ಪಸರಿಸಿದೆ. ಸಂಗೀತ ಮನಸ್ಸನ್ನು ಶಾಂತ ಮಾಡುತ್ತದೆ. ಈ ಮೂಲಕ ಪರೋಕ್ಷವಾಗಿ ಸಂಗೀತದಿಂದ ವಿಶ್ವದಲ್ಲಿ ಶಾಂತಿ ಸ್ಥಾಪನೆ ಸಾಧ್ಯ ಎಂದು ತೂಗು ಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಹೇಳಿದರು.


ಮಂಗಳೂರಿನ ಆರೋಹಣಂ ಸಂಗೀತ ಶಾಲೆಯ 'ದಶಕ ಸಮರ್ಪಣಂ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ಸಂಗೀತಕ್ಕೆ ವಿಶೇಷ ಶಕ್ತಿ ಇದೆ. ಕಿವಿಯಲ್ಲಿ ಕೇಳಿ ಹೃದಯಕ್ಕೆ ಹೋಗಿ ನರ ನಾಡಿಗಳಲ್ಲಿ ಹರಿದಾಡುತ್ತದೆ. ಒಂದು ರೀತಿಯಲ್ಲಿ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಮನಸ್ಸು ಉಲ್ಲಾಸದಿಂದ ಇದ್ದರೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಹೇಳಿದರು.


ಕಲೈಮಾಮಣಿ ಡಾ.ಆರ್.ಸುರ್ಯಪ್ರಕಾಶ್, ದಿ ವೆಬ್ ಪೀಪಲ್ ಸಂಸ್ಥೆಯ ಸಿಇಒ ಆದಿತ್ಯ ಕಲ್ಲೂರಾಯ, ಆರೋಹಣಂ ಸಂಗೀತ ಶಾಲೆಯ ಅಧ್ಯಕ್ಷ ಗಣೇಶ್ ನಾಯಕ್, ಉಪಾಧ್ಯಕ್ಷ ಮಂಜುನಾಥ ಭಟ್, ಶಾಲೆಯ ನಿರ್ದೇಶಕ ಡಾ.ಅನೀಶ್ ವಿ.ಭಟ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದ ಸಾಧನೆಗಾಗಿ ನಿತ್ಯಾನಂದ ರಾವ್ ದಂಪತಿ, ಉಮಾ ಉದಯ ಶಂಕರಿ ದಂಪತಿ, ಡಾ. ಶ್ರೀಪ್ರಕಾಶ್ ಬಿ., ಸೂರಲಿ ಗಣೇಶ್ ಮೂರ್ತಿ,  ನೈಬಿ ಪ್ರಭಾಕರ್ ದಂಪತಿ ಸುಬ್ರಹ್ಮಣ್ಯ ರಾವ್, ಮಂಜುನಾಥ್ ಭಟ್ ದಂಪತಿಯನ್ನು ಗೌರವಿಸಲಾಯಿತು.


ಸ್ವರಾ-ಸಿಂಕ್' ಎಂಬ ಹೊಸ ದೇವರನಾಮ ಪ್ರೀ- ರೆಕಾರ್ಡೆಡ್ ಕೋರ್ಸ್ ನ ಅನಾವರಣ ಹಾಗೂ ಸಂಸ್ಥೆಯ ನೂತನ ವೆಬ್‌ಸೈಟನ್ನು ಡಾ.ಗಿರೀಶ್ ಭಾರದ್ವಾಜ್ ಬಿಡುಗಡೆಗೊಳಿಸಿದರು. ಅನುಶ್ರೀ ಭಟ್ ಹಾಗೂ ಗಾಯತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಹವ್ಯಶ್ರೀ ಕೆ.ಟಿ. ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top