ವಿಂಡೋ ಸೀಟ್ ಮೇಲಿನ ನನ್ನ ಮೋಹ..!

Upayuktha
0


ನಾನು ಪ್ರತಿದಿನವೂ ಕಾಲೇಜು ಸೇರುವ ಸಾಮಾನ್ಯ ವಿದ್ಯಾರ್ಥಿನಿ ಮೊದಲೇ ತಿಳಿಸಿದ ಹಾಗೆ ಸಾಮಾನ್ಯಳೆಂದ ಮೇಲೆ ದಿನವೂ ಕಾರು, ಬೈಕಿನಲ್ಲಿ ಕಾಲೇಜಿಗೆ ಸೇರಲಾರೆ, ನೂರಾರು ಜನರನ್ನು ಹೊತ್ತು ಸಾಗುವ ಬಸ್ಸ್ ನನ್ನನ್ನು ಸಹ ದಡ ಸೇರಿಸುತ್ತದೆ..


ನನ್ನದು ಕೊನೆಯ ಹಳ್ಳಿಯಾದರಿಂದ ಪ್ರಯಾಣವು ಅಲ್ಲಿಂದಲೇ ಆರಂಭವಾಗುತ್ತದೆ ಹಾಗಿದ್ದಾಗ ನನಗೆ ಕಿಟಕಿ ಪಕ್ಕದಲ್ಲಿ ಸೀಟ್ ಹುಡುಕುವ ಅವಕಾಶ ಮತ್ತು ಅವಶ್ಯಕತೆ ಇರುವುದಿಲ್ಲ .. ನನ್ನಿಚ್ಛೆಯ ಯಾವುದೇ ಸೀಟ್ ಆರಿಸಿಕೊಂಡರು ಅದು‌ ವಿಂಡೋ ಸೀಟೇ ಆಗಿರುತ್ತದೆ ಮತ್ತು ಅದು ನನಗೆ ತೃಪ್ತಿದಾಯಕವೂ ಆಗಿರುತ್ತದೆ..


ಸಂಜೆಯು ಇದೇ ರೀತಿ, ನಮ್ಮೂರಿಗೆ ಇರುವ ಒಂದೇ ಬಸ್ ಗಾಗಿ ಊರಿಗಿಂತ ಮುಂಚೆ ಹೊರಟು ಬೆಳಗಿನ ಸೀಟನ್ನೇ ಪಕ್ಕ ಮಾಡುತ್ತಿದ್ದೆ .


.

ಕಿಟಕಿಯ ಪಕ್ಕ ಕೂತು, ತಲೆಯೊರಗಿಸಿ , ಸುತ್ತ ಕಣ್ಣು ಹಾಯಿಸಿದಾಗ ಸಿಗುವ ಸೌಂದರ್ಯ ನೋಟ ನನ್ನ ಬೇಸರವನ್ನೆಲ್ಲಾ ದೂರಸರಿಸಿ ಮನಸ್ಸಿಗೆ ಮುದ ನೀಡುವಲ್ಲಿ ಪ್ರತಿ ಬಾರಿ ಯಶಸ್ವಿಯಾಗುತ್ತದೆ.. ಸಾಗುತ್ತಿರುವ ಬಸ್ಸಿನಲ್ಲಿ ಕಿಟಕಿಗೆ ತಲೆ ಒರಗಿಸಿದಾಗ ನನ್ನ ತಲೆಯಲ್ಲಿ ಮೂಡುವ ಎಷ್ಟೋ ಪ್ರಶ್ನೆಗಳು , ಕಾಡುವ ಅನೇಕ ಸಲಹೆಗಳು, ನೂರಾರು ಯೋಚನೆಗಳಿಗೆ.. ಪರಿಹಾರವೂ ಸಿಗುವುದು ಆ ಕಿಟಕಿಯ ಪಕ್ಕದ ಸೀಟಿನಲ್ಲಿ. ಎಷ್ಟೇ ಬೇಸರ ಮನಸಲ್ಲಿದ್ದರೂ ಆ ಕಿಟಕಿಗೆ ಒಮ್ಮೆ ತಲೆ ಇಟ್ಟು ಕಣ್ಮುಚ್ಚಿದರೆ ಏನೋ ಮನಸ್ಸಿಗೆ ಹಗುರಾದ ಭಾವ.


ಪ್ರತಿಸಲ ಹುಡುಕದೆ ದೊರೆಯುವ ವಿಂಡೋ ಸೀಟ್ ಕೆಲವು ಬಾರಿ ದುಬಾರಿ ಆಗಿಬಿಡುತ್ತದೆ.


ಕೆಲವು ಸಮಯದಲ್ಲಿ ಸುಲಭದಲ್ಲಿ ಕೈ ಸೇರುವ ವಿಂಡೋಸೀಟ್ ಕೆಲವು ಬಾರಿ ಬೇಡಿದರು ನಮ್ಮದಾಗಿರುವುದಿಲ್ಲ. ಪ್ರತಿ ಸಲ ಬಸ್ಸಿಗೆ ಕಾಯುವಾಗ ನನ್ನ ಮನಸ್ಥಿತಿ ಹೇಗಿರುತ್ತದೆಂದರೆ, "ಹೋದ ತಕ್ಷಣ ಒಂದು ಒಳ್ಳೆ ವಿಂಡೋ ಸೀಟ್ ಸಿಗಲಿ" ಅಂತ ಅದು ಮಾತ್ರವಲ್ಲ ಅಗಲದ ಕಿಟಕಿ ಇರಬೇಕು, ಇಳಿಯುವ ಬಾಗಿಲಿಗೆ ಹತ್ತಿರವಿರಬೇಕು, ಅಕ್ಕ- ಪಕ್ಕದಲ್ಲಿ ಯಾರು ಕೂತಿರಬಾರದು, ಹೀಗೆ ಬೇಡಿಕೆಯ ಮೇಲೆ ಬೇಡಿಕೆ..


ಅನೇಕ ಬಾರಿ ಗೆಳೆಯರ ಜೊತೆ ಓಡಾಡುವಾಗಲು ನನ್ನ ಸ್ನೇಹಿತರು ನಾವು ಬೇಕೋ ವಿಂಡೋ ಸೀಟ್ ಬೇಕೋ ಎಂದು ಕೇಳಿದಾಗ ನಾನು ಮೆಲ್ಲಗೆ ಮುಗುಳ್ನಕ್ಕು ವಿಂಡೋ ಸೀಟ್ ಕಡೆ ಕಣ್ಣು ಹಾಯಿಸುತ್ತಿದೆ..


ಬಸ್ಸಿನ ವಿಂಡೋ ಸೀಟ್ ನ ಕಡೆ ನನ್ನ ಮೋಹ ನಿನ್ನೆ ಮೊನ್ನೆಯದಲ್ಲ ಅದು ಬಹುಶಃ ಬಾಲ್ಯದಿಂದಲೇ ಇದ್ದಿರಬಹುದು..


ಕೆಲವೊಮ್ಮೆ ನಾನು ರಿಸರ್ವ್ ಮಾಡಿಟ್ಟ ವಿಂಡೋ ಸೀಟ್ನಲ್ಲಿ ಮತ್ತೋರ್ವ ಯಾರೋ ಕೂತಿದ್ದರೆ ನಾನು ಅವರೆದುರೇ ಸಿಟ್ಟಾದಂತೆ ಮುಖ ತೋರಿ ದಡಬಡವೆಂದು ಬ್ಯಾಗೆತ್ತಿ ಅಲ್ಲಿಂದ ಹೊರಡುತ್ತೇನೆ.. ಆ ಕ್ಷಣಕ್ಕೆ ನನಗೆ ಅವರಿಗೆ ನೀಡಬೇಕಾದ ಗೌರವಕ್ಕಿಂತ ನನ್ನ ವಿಂಡೋ ಸೀಟ್ ಅತಿ ಮುಖ್ಯವಾಗಿರುತ್ತದೆ..


ಆದರೆ ಆ ಬಳಿಕ ನಾನು ಇದರ ಬಗ್ಗೆ ಪಶ್ಚಾತಾಪ ಪಟ್ಟಿದ್ದು ಸಹ ಇದೆ. ಎಲ್ಲಾ ಕಳೆದ ಬಳಿಕ ಇದು ತಪ್ಪು ಎಂದು ಮನವರಿಕೆಯಾಗಿದ್ದು ಸಹ ಇದೆ .ಆದರೆ ಏನು ಮಾಡುವುದು , ಬಸ್ಸಿಳಿದು ಹೋದವರನ್ನು ಎಲ್ಲಿ ಎಂದು ಹುಡುಕಿ ಕ್ಷಮೆ ಕೇಳುವುದು..


ಹೀಗೆ, ಏನು ತಪ್ಪುಗಳಾದರೂ ನನಗೆ ಆ ವಿಂಡೋ ಸೀಟ್ ಮೇಲಿನ ಮೋಹ ಮಾಸಿ ಹೋಗಲಾರದು..ಅದು ಬಸ್ಸಿನದ್ದಾಗಲಿ ಅಥವಾ ಕಾರಿನದ್ದಾಗಲಿ, ಅದು  ಯಾವುದೇ ವಾಹನವಾಗಿರಲಿ  ಆ ವಿಂಡೋ ಸೀಟ್ ನ ಮೇಲೆ ಅದೊಂಥರಾ ಸುಂದರ ಮೋಹ...



-ಹರ್ಷಿತ ಶಿಶಿಲ 
ಪತ್ರಿಕೋದ್ಯಮ ವಿಭಾಗ ಎಸ್ ಡಿ ಎಂ ಸಿ ಉಜಿರೆ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top