ಹೊರನಾಡ ಕನ್ನಡಿಗರ ಬೆಂಬಲಕ್ಕೆ ನಾವಿದ್ದೇವೆ: ಸೋಮಣ್ಣ ಬೇವಿನಮರದ್

Upayuktha
0


ಪಣಜಿ (ವಾಸ್ಕೊ): ಹೊರನಾಡ ಗೋವೆಯಲ್ಲಿ ಕನ್ನಡಿಗರಿಗೆ ತೊಂದರೆಗೊಳಗಾದಾಗ ಧ್ವನಿ ಎತ್ತಬೇಕಾಗಿರುವುದು ನಮ್ಮ ಕರ್ತವ್ಯ. ಗೋವಾದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿರುವ ಕನ್ನಡಿಗರಿಗೆ ತೊಂದರೆ ಆಗದ ರೀತಿಯಲ್ಲಿ ಪ್ರತಿಭಟನೆ ಮಾಡಿ ಗೋವಾದಲ್ಲಿ ಕನ್ನಡಿಗರು ಕನ್ನಡ ಧ್ವಜ ಹಿಡಿದು ಬೃಹತ್ ಸಂಖ್ಯೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸೋಣ. ನ್ಯಾಯಯುತವಾಗಿ ಕೇಳುತ್ತಿರುವ ಹಕ್ಕನ್ನು ಮಂಡಿಸೋಣ. ನಾವೆಲ್ಲ ನಿಮ್ಮೊಂದಿಗಿದ್ದೇವೆ ಹೆದರುವ ಅಗತ್ಯವಿಲ್ಲ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್ ನುಡಿದರು.


ಗೋವಾದ ಜುವಾರಿನಗರ ಝರಿಯಲ್ಲಿರುವ ಶ್ರೀಯಲ್ಲಾಲಿಂಗೇಶ್ವರ ಮಠದ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ "ಗೋವಾ ಕನ್ನಡಿಗರ ಸಮಾಲೋಚನಾ ಸಭೆ"ಯಲ್ಲಿ ಗೋವಾ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ ನಂತರ ಸೋಮಣ್ಣ ಬೇವಿನಮರದ್ ಮಾತನಾಡುತ್ತಿದ್ದರು.


ಗೋವಾದಲ್ಲಿ ಕನ್ನಡಿರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ನಾವು ಏನು ಮಾಡಬೇಕು..? ಎಂದು ಇಲ್ಲಿನ ಕನ್ನಡಿಗರು ಪ್ರಶ್ನಿಸಿದ್ದಾರೆ. ಗೋವಾದಲ್ಲಿ ಕೆಲವೊಂದು ಜನರು ಕನ್ನಡಿಗರ ವಿರುದ್ಧ ಇಂತಹ ಗಲಾಟೆ ಮಾಡಿಸಲು ಮುಂದಾಗುತ್ತಿದ್ದಾರೆ. ಗೋವಾಸಲ್ಲಿ ಟಾಟಾ ಬಿರ್ಲಾ, ಜಿಂದಾಲ್, ಜುವಾರಿ ಈ ಎಲ್ಲ ಕಂಪನಿಗಳಿವೆ ದೊಡ್ಡ ದೊಡ್ಡ ಉದ್ಯೋಗವನ್ನು ಹೊರ ರಾಜ್ಯದವರೇ ನಡೆಸುತ್ತಿದ್ದಾರೆ. ಆದರೆ ಗೋವಾದಲ್ಲಿ ಹೊರ ರಾಜ್ಯದಿಂದ ಕನ್ನಡಿಗರು ದುಡಿಯಲು ಬಂದಿದ್ದಾರೆ ಎಂಬ ಭಾವನೆ ಹೊಂದಿದ್ದಾರೆ. ಆದರೆ ಗೋವಾದಲ್ಲಿ ಇಂತಹ ಭಾವನೆ ಹೊಂದಿದವರು ಹಾಗೂ ಇಲ್ಲಿನ ಸರ್ಕಾರ ಈ ಕುರಿತು ಎಚ್ಚೆತ್ತುಕೊಳ್ಳದಿದ್ದರೆ ಗೋವಾದ ಅಭಿವೃದ್ಧಿ ಆಗುವುದಿಲ್ಲ, ಅಭಿವೃಧ್ಧಿಗೆ ಪೆಟ್ಟು ಬೀಳಲಿದೆ ಎಂದು ಸೋಮಣ್ಣ ಬೇವಿನಮರದ್ ನುಡಿದರು.


ಗೋವಾದಲ್ಲಿ ದುಡಿಯುವ ಕನ್ನಡಿಗರಿಗೆ ತೊಂದರೆ ಕೊಟ್ಟಾಗ ಗೋವಾದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತದೆ. ಯಾವತ್ತೂ ಕೂಡ ಕೆಲಸಗಾರರನ್ನು ನಮ್ಮ ಮನೆಯ ಮಗನಂತೆ ಕಂಡಾಗ ಮಾತ್ರ ಅಭಿವೃದ್ಧಿಯಾಗುತ್ತದೆ ಎಂಬುದನ್ನು ನಾನು ಗೋವಾ ಸರ್ಕಾರದ ಗಮನಕ್ಕೆ ತರುತ್ತಿದ್ದೇನೆ. ಗೋವಾದಲ್ಲಿ ಕನ್ನಡಿಗರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಇಲ್ಲಿನ ಜಿಲ್ಲಾಧಿಕಾರಿಗಳಿಗೆ, ಗೋವಾ ಮುಖ್ಯಮಂತ್ರಿಗಳಿಗೆ ಗಮನಕ್ಕೆ ತರುತ್ತೇವೆ. ಗೋವಾದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ಮಾಡುತ್ತೇವೆ. ಗೋವಾದಲ್ಲಿ ಕನ್ನಡಿಗರ ಮಕ್ಕಳು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಲು ಕೂಡ ಅಗತ್ಯ ಪ್ರಯತ್ನ ಮಾಡುತ್ತೇವೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಮಾತನಾಡಿ- ಗೋವಾದಲ್ಲಿ ಕನ್ನಡಿಗರ ಪರವಾಗಿ ಧ್ವನಿ ಎತ್ತಲು ನಮ್ಮ ನಾಯಕರಿಗೆ ಕನ್ನಡಿಗರ ಸಮಸ್ಯೆ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಗೋವಾದಲ್ಲಿ ಕನ್ನಡಿಗರನ್ನು ಘಾಟಿ ಘಾಟಿ ಎಂದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಭಟಿಸಬೇಕು. ಗೋವಾದಲ್ಲಿ ಕನ್ನಡಿಗರು ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಬೇಕು ಇದಕ್ಕೆ ನಾನು ಸಿದ್ಧನಿದ್ದೇನೆ ಎಂದರು. ನಮ್ಮ ಒಬ್ಬ ಶಾಸಕರಾದರೂ ಆಯ್ಕೆಯಾದರೆ ನಮ್ಮ ಧ್ವನಿಯನ್ನು ಗೋವಾ ವಿಧಾನಸಭೆಯಲ್ಲಿ ಎತ್ತಲು ಸಾಧ್ಯವಾಗುತ್ತದೆ ಎಂದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ಗೋವಾ ಕರ್ನಾಟಕ ಬಿಜೆಪಿ ಸೆಲ್ ಕನ್ವೀನರ್ ಮುರಳಿ ಮೋಹನ್ ಶೆಟ್ಟಿ ಮಾತನಾಡಿ-ಗೋವಾದಲ್ಲಿರುವ ನಾವೆಲ್ಲ ಕನ್ನಡಿಗರು ಒಟ್ಟಾಗಿರಬೇಕು. ಎಲ್ಲಿಯ ವರೆಗೂ ನಾವೆಲ್ಲ ಒಗ್ಗಟ್ಟಾಗುವದಿಲ್ಲವೋ ಅಲ್ಲಿಯ ವರೆಗೂ ಗೋವಾ ಕನ್ನಡಿಗರ ಸಮಸ್ಯೆ ಬಗೆಹರಿಯುವುದಿಲ್ಲ. ಗೋವಾದಲ್ಲಿ ಕನ್ನಡಿಗರನ್ನು ಘಾಟಿ ಎಂದು ಕರೆಯುವುದು ನಿಲ್ಲಬೇಕು ಎಂದರು.


ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ನಾಟೀಕರ್, ಗೋವಾ ಕರ್ನಾಟಕ ಬಿಜೆಪಿ ಸೆಲ್ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಕೊನೆಯಲ್ಲಿ ವಂದನಾರ್ಪಣೆಗೈದರು.


ಈ ಸಂದರ್ಭದಲ್ಲಿ ಗೋವಾದ ವಿವಿದೆಡೆಯಿಂದ ಆಗಮಿಸಿದ್ದ ಕನ್ನಡಿಗರು , ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಗೋವಾ ಕನ್ನಡಿಗರ ಸಮಸ್ಯೆಯನ್ನು ಮಂಡಿಸಿದರು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಪ್ರಯತ್ನ ಮಾಡುವುದಾಗಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ್ ಗೋವಾ ಕನ್ನಡಿಗರಿಗೆ ಭರವಸೆ ನೀಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top